ಬಾಂಗ್ಲಾ ಇಲಿಗಳು ಬಿಲ ಸೇರುವಂತೆ ಬಾರಿಸಿದ ಭಾರತದ ಹುಲಿಗಳು! Asia Cup 2025

ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ, ತಾನು ಯಾಕೆ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟ್ ತಂಡ? ಅನ್ನೋದನ್ನ ಇಡೀ ಜಗತ್ತಿಗೇ ಮತ್ತೆ ತೋರಿಸಿ ಗೆಲುವಿನ ಗರಿ ಮುಡಿಗೇರಿಸಿದೆ. ಭಾರತದ ಎದುರು ಕೆಮ್ಮಲು ಬಂದ ಬಾಂಗ್ಲಾದೇಶ ಹುಲಿಗಳು ಈಗ ಇಲಿಗಳ ರೀತಿ ಬಿಲ ಸೇರಿದ್ದಾರೆ. ಹಾಗೇ ಭಾರತ ತಂಡ ಈ ಗೆಲುವಿನ ಮೂಲಕ ಏಷ್ಯಾ ಕಪ್ ಅಖಾಡದಲ್ಲಿ ಮತ್ತೊಂದು ಇತಿಹಾಸದ ಪುಟ ತೆರೆದಿದೆ. ಅದರಲ್ಲೂ ಭಾರತದ ಬೌಲಿಂಗ್ ಅಬ್ಬರದ ಎದುರು ಬಾಂಗ್ಲಾದೇಶ ಬ್ಯಾಟಿಂಗ್ ಲೈನ್ ಥೇಟ್ ಬಿರುಗಾಳಿಗೆ ಸಿಕ್ಕ ಪ್ಲಾಸ್ಟಿಕ್ ರೀತಿ ಅಲ್ಲಾಡಿ ಹಾರಿ ಹೋಗಿದೆ!

ಹೌದು, ಮೊನ್ನೆ ಮೊನ್ನೆ ತಾನೆ ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಿದ್ದ ಭಾರತೀಯ ಕ್ರಿಕೆಟ್ ತಂಡವು ಇದೀಗ ಭಾರತದ ಮತ್ತೊಂದು ಶತ್ರುದೇಶವಾಗಿ ರೂಪುಗೊಳ್ಳುತ್ತಿರುವ ಬಾಂಗ್ಲಾದೇಶಕ್ಕೂ ಸರಿಯಾಗಿಯೇ ಬುದ್ಧಿ ಕಲಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಭರ್ಜರಿಯಾಗಿ ಬಡಿದು ಬಿಸಾಕಿದ ಭಾರತ ತಂಡ ಮತ್ತೊಂದು ಗೆಲುವಿನ ಮೂಲಕ ಏಷ್ಯಾ ಕಪ್ ಅಖಾಡದಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ. ಮತ್ತೊಂದು ಕಡೆ ಬಾಂಗ್ಲಾದೇಶ ಮನೆಗೆ ಹೋಗುವುದು ಬಹುತೇಕ ಗ್ಯಾರಂಟಿ ಆಗಿದ್ದು, ಫೈನಲ್ ಪಂದ್ಯ ಭಾರಿ ಕುತೂಹಲ ಕೆರಳಿಸುತ್ತಿದೆ.

India vs Bangladesh Asia Cup 2025 Match Result Analysis

168 ಬಾರಿಸಿದ್ದ ಭಾರತ ತಂಡ!

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲದೇಶ ತಂಡ, ಭಾರತದ ವಿರುದ್ಧ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ ಬಾಂಗ್ಲದೇಶ ಬೌಲಿಂಗ್ ಪಡೆಯನ್ನ ಓಡಾಡಿಸಿಕೊಂಡು ಬಾರಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ, ಭರ್ಜರಿ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಮೊದಲ ವಿಕೆಟ್‌ಗೆ ಬರೋಬ್ಬರಿ 77 ರನ್‌ಗಳ ಜೊತೆಯಾಟ ಬಂದಿತ್ತು, ಕೇವಲ 6.2 ಓವರ್ ಒಳಗೆ ಭರ್ಜರಿ 77 ರನ್‌ಗಳ ಮಳೆ ಸುರಿಸಿದ್ದರು ಅಭಿಷೇಕ್ ಶರ್ಮಾ & ಶುಭಮನ್ ಗಿಲ್.

ಮತ್ತೊಂದು ಕಡೆಯಲ್ಲಿ ಅಭಿಷೇಕ್ ಶರ್ಮಾಗೆ ಕೇವಲ 37 ಬಾಲ್ ಸಿಕ್ಕರೂ 75 ರನ್ ಬಾರಿಸಿ 5 ಸಿಕ್ಸರ್ & 6 ಬೌಂಡರಿ ಚಚ್ಚಿದರು. ಅಂತಿಮವಾಗಿ, ಹಾರ್ದಿಕ್ ಪಾಂಡ್ಯ 29 ಬಾಲ್ ಆಡಿ 38 ರನ್ ಗಳಿಸಿದರು. ಈ ಮೂಲಕ 4 ಬೌಂಡರಿ ಬಾರಿಸಿ ಅತ್ತ ಹಾರ್ದಿಕ್ ಪಾಂಡ್ಯ ಕೂಡ ಗಮನ ಸೆಳೆದರು. ಅಂತಿಮವಾಗಿ ಭಾರತ ತಂಡ 20 ಓವರ್ ಆಡಿ 168 ರನ್ ಗಳಿಸಿತ್ತು. ಇದರೊಂದಿಗೆ 169 ರನ್ ಗುರಿಯನ್ನ ನೀಡಿತ್ತು ಭಾರತ ತಂಡ...

ಬಾಂಗ್ಲಾ ಹುಲಿಗಳ ತೀವ್ರ ಪರದಾಟ!

ಹೆಸರಿಗೆ ಮಾತ್ರ ಹುಲಿ ಅಂತಾ ಕರೆಸಿಕೊಳ್ಳುವ ಬಾಂಗ್ಲಾದೇಶ, ಭಾರತದ ಬೌಲಿಂಗ್ ದಾಳಿಯ ಎದುರು ಭೀಕರ ಹಿನ್ನಡೆ ಅನುಭವಿಸಿತ್ತು. ಅದರಲ್ಲೂ ಕೇವಲ 4 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕೂಡ ಕಳೆದುಕೊಂಡು ಪರದಾಡಿತ್ತು ಬಾಂಗ್ಲಾ ಟೀಂ. ಆದರೆ ಕೊನೆಗೂ ಹಂಗೋ & ಹಿಂಗೋ ಒದ್ದಾಡುತ್ತಾ ಕೇವಲ 127 ರನ್ ಬಾರಿಸಿ ಬಾಂಗ್ಲಾದೇಶ ತನ್ನ ಸೋಲು ಒಪ್ಪಿಕೊಂಡಿತು. 19.3 ಓವರ್ ಆಡಿದ ಬಾಂಗ್ಲಾ ಆಟಗಾರರು ಕೇವಲ 127 ರನ್ ಗಳಿಸಿ ಭಾರತಕ್ಕೆ 41 ರನ್‌ಗಳ ಗೆಲುವು ಬಿಟ್ಟುಕೊಟ್ಟರು. ಇದರೊಂದಿಗೆ ಬಾಂಗ್ಲಾದೇಶ ಸೋತು ಬಿಲ ಸೇರಿಕೊಂಡಿತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+