ಕಿವೀಸ್ ಕಿವಿ ಹಿಂಡಲು ಸಜ್ಜಾದ ಭಾರತ, ಇಂಡಿಯಾ vs ನ್ಯೂಜಿಲೆಂಡ್ ಸೆಣೆಸಾಟ ಫಿಕ್ಸ್! ICC Champions Trophy 2025
ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಲು ಇನ್ನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಅದರಲ್ಲೂ ಭಾರತ ತಂಡ ಅದ್ಧೂರಿಯಾಗಿ ' ಚಾಂಪಿಯನ್ಸ್ ಟ್ರೋಫಿ' ಎತ್ತಿ ಹಿಡಿಯುವುದನ್ನು ನೋಡಲು ಶತಕೋಟಿ ಭಾರತೀಯರು ಕಾಯುತ್ತಿದ್ದಾರೆ. ಇಂತಹ ಅದ್ಭುತ ಸಮಯದಲ್ಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಅದ್ಧೂರಿಯಾದ ಸುದ್ದಿ ಸಿಕ್ಕಿದೆ. 'ಚಾಂಪಿಯನ್ಸ್ ಟ್ರೋಫಿ' ಗೆಲ್ಲೋದು ನಾವೇ ಅಂತಾ ಅಭಿಮಾನಿಗಳು ಸಾರಿ ಸಾರಿ ಹೇಳುವ ಸಮಯ ಕೂಡ ಬಂದೇ ಬಿಟ್ಟಿದೆ.
ಇಂಡಿಯನ್ ಕ್ರಿಕೆಟ್ ಟೀಂ ತುಂಬಾನೇ ಸ್ಟ್ರಾಂಗ್ ಆಗಿದೆ, ಭಾರತ ಕ್ರಿಕೆಟ್ ತಂಡವನ್ನು ಈಗ ಯಾರೂ ಮುಟ್ಟಲು ಆಗಲ್ಲ ಎನ್ನುವಷ್ಟರ ಮಟ್ಟಿಗೆ ಗಟ್ಟಿಯಾಗಿದೆ. 2024ರ ಟಿ20 ವಿಶ್ವಕಪ್ ಗೆದ್ದು ತನ್ನ ಕೆಪಾಸಿಟಿ ತೋರಿಸಿದ್ದ ಭಾರತ ಕ್ರಿಕೆಟ್ ತಂಡ, ಇದೀಗ 'ಚಾಂಪಿಯನ್ಸ್ ಟ್ರೋಫಿ' ಕೂಡ ತನ್ನ ಹೆಸರಿಗೆ ಬರೆದುಕೊಳ್ಳಲು ಸಜ್ಜಾಗಿದೆ. ಭಾರತ ಕ್ರಿಕೆಟ್ ತಂಡದ ಅದ್ಭುತ ಆಟ & ವಿರಾಟ್ ಕೊಹ್ಲಿಯ ವೀರಾವೇಶ ಭಾರತ ತಂಡವನ್ನ ಈಗಾಗಲೇ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇದರ ಜೊತೆಯಲ್ಲೇ ಭಾರತ ತಂಡಕ್ಕೆ ಇದೀಗ ಸುಲಭದ ಎದುರಾಳಿ ಸಿಕ್ಕಿದ್ದಾನೆ!

ಕಿವೀಸ್ ಕಿವಿ ಹಿಂಡಲು ಸಜ್ಜಾದ ಭಾರತ!
ಹೌದು, ಭಾರತ ತಂಡಕ್ಕೆ ಇದೀಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಳಿ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಈ ಸಾಧನೆ ಮಾಡಿರುವ ನ್ಯೂಜಿಲೆಂಡ್ ತಂಡ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಭಾರತ ತಂಡದ ಶಕ್ತಿ ಎದುರು ನ್ಯೂಜಿಲೆಂಡ್ ತಂಡ ಡಮ್ಮಿ ಎಂಬ ಮಾತು ಕೂಡ ಕೇಳಿ ಬರುತ್ತಿದ್ದು, ಎರಡು ಜಾಗತಿಕ ಶಕ್ತಿಶಾಲಿ ಕ್ರಿಕೆಟ್ ತಂಡಗಳ ನಡುವೆ ಅದ್ಧೂರಿಯಾದ ಫೈನಲ್ ಪಂದ್ಯ ನಡೆಯಲಿದೆ. ಆದರೆ, ಭಾರತವೇ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ ಎನ್ನುತ್ತಿದ್ದಾರೆ ತಜ್ಞರು.












Click it and Unblock the Notifications