Ind vs Pak: ಟಾಸ್ ಸೋತು ಬೇಡದ ದಾಖಲೆ ಮಾಡಿದ ಭಾರತ; ಆತಂಕ ದೂರ ಮಾಡಿದ ಶಮಿ

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಟಾಸ್ ಸೋತಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಪಾಕಿಸ್ತಾನದ ವಿರುದ್ಧ ಟಾಸ್ ಸೋಲುವ ಮೂಲಕ ಭಾರತ ಬೇಡದ ದಾಖಲೆ ಮಾಡಿದೆ. ಭಾರತ ಏಕದಿನ ಕ್ರಿಕೆಟ್‌ನಲ್ಲಿ ಸತತ 12ನೇ ಪಂದ್ಯದಲ್ಲಿ ಟಾಸ್ ಸೋತು ಕೆಟ್ಟ ದಾಖಲೆ ಮಾಡಿತು.

2023ರಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೂ ಟಾಸ್ ಗೆದ್ದೇ ಇಲ್ಲ. 2011 ರಿಂದ 2013ರವರೆಗೆ ಸತತವಾಗಿ 11 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ನೆದರ್ಲ್ಯಾಂಡ್ಸ್ ದಾಖಲೆಯನ್ನು ಭಾರತ ಮುರಿದಿದೆ. 2023-2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿವರೆಗೆ ಭಾರತ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದೆ.

india Consecutively lost 12 Toss pakistan lost both openers champions trophy

ಕೊನೆಯ 11 ಪಂದ್ಯಗಳಲ್ಲಿ ಟಾಸ್ ಸೋತಿದ್ದರೂ, ಇದರಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತಿದೆ. ಶ್ರೀಲಂಕಾ ವಿರುದ್ಧದ ಒಂದು ಪಂದ್ಯ ಮಾತ್ರ ಟೈ ಆಗಿತ್ತು. ಪಾಕಿಸ್ತಾನದ ವಿರುದ್ಧ ಟಾಸ್ ಸೋತರೂ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ ಭಾರತ ತಂಡ. ಟಾಸ್ ನಮಗೆ ಮುಖ್ಯವಲ್ಲ, ಒತ್ತಡದಲ್ಲಿ ಆಡಲು ತಂಡವು ಸಜ್ಜಾಗಿದೆ ಎಂದು ಟಾಸ್ ಬಳಿಕ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಮೊಹಮ್ಮದ್ ಶಮಿ ವಾಪಸ್‌

ಪಾಕಿಸ್ತಾನದ ವಿರುದ್ಧದ ಪಂದ್ಯದ ಆರಂಭದಲ್ಲಿ ಮೊಹಮ್ಮದ್ ಶಮಿ ಉತ್ತಮ ಲಯದಲ್ಲಿ ಕಂಡುಬರಲಿಲ್ಲ. ಬಳಿಕ ಕಾಲಿನ ನೋವಿನಿಂದ ಬಳಲುತ್ತಿದ್ದ ಅವರು ಮೈದಾನದಿಂದ ಹೊರ ನಡೆದಿದ್ದರು. ಶಮಿ ಗಾಯಗೊಂಡಿದ್ದು ಭಾರತ ತಂಡದ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

ಶಮಿ ಬದಲಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರು. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂ ಅವರನ್ನು ಔಟ್ ಮಾಡುವಲ್ಲಿ ಪಾಂಡ್ಯ ಯಶಸ್ವಿಯಾದರು. 5ನೇ ಓವರ್ ಬಳಿಕ ಮೊಹಮ್ಮದ್ ಶಮಿ ಮೈದಾನದಿಂದ ಹೊರನಡೆದರೂ 12ನೇ ಓವರ್ ನಲ್ಲಿ ಮೈದಾನಕ್ಕೆ ಮರಳಿದ್ದಲ್ಲದೆ, ಬೌಲಿಂಗ್ ಕೂಡ ಮಾಡಿದರು. ಇದನ್ನು ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.

14 ಓವರ್ ಗಳಲ್ಲಿ ಪಾಕಿಸ್ತಾನ 61 ರನ್ ಗಳಿಸಿದ್ದು ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡಿದೆ. ಇಮಾಮ್ ಉಲ್ ಹಕ್ ಅಕ್ಷರ್ ಪಟೇಲ್ ಅವರು ಹೊಡೆದ ಮಿಂಚಿನ ರನೌಟ್‌ಗೆ ಬಲಿಯಾದರು. ಈ ಪಂದ್ಯ ಗೆದ್ದರೆ ಭಾರತ ಸೆಮಿಫೈನಲ್ ತಲುಪುವುದು ಖಚಿತವಾಗಲಿದೆ. ಪಾಕಿಸ್ತಾನ ಏನಾದರೂ ಸೋತರೆ ಪಂದ್ಯಾವಳಿಯಿಂದಲೇ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+