U19 World Cup: ಸಚಿನ್ ಅತ್ಯುತ್ತಮ ಆಟ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಸಚಿನ್ ಮತ್ತು ಉದಯ್ ಸಹರಾನ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ರೋಚಕ ಗೆಲುವು ಸಾಧಿಸಿತು.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್‌ ಕಲೆಹಾಕುವ ಮೂಲಕ ಭಾರತಕ್ಕೆ 245 ರನ್‌ಗಳ ಸವಾಲಿನ ಗುರಿ ನೀಡಿತು. ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ರಿಚರ್ಡ್ ಸೆಲೆಟ್ಸ್ವೇನ್ ಅರ್ಧಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ಗೌರವಯುತ ಮೊತ್ತ ಗಳಿಸಲು ಕಾರಣವಾದರು.

 India Beats South Africa, Enters 5th U-19 World Cup Final

ಭಾರತದ ಪರವಾಗಿ ರಾಜ್ ಲಿಂಬಾಣಿ 3 ವಿಕೆಟ್ ಪಡೆದರೆ, ಮುಶೀರ್ ಖಾನ್ 2 ವಿಕೆಟ್ ಪಡೆದರು. ನಮನ್ ತಿವಾರಿ ಮತ್ತು ಸೌಮಿ ಪಾಂಡೆ ತಲಾ ಒಂದು ವಿಕೆಟ್ ಪಡೆದುಕೊಂಡರು.

ಭಾರತಕ್ಕೆ ಆರಂಭಿಕ ಆಘಾತ

ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಲೇ ಬಂದಿದ್ದ ದಕ್ಷಿಣ ಆಫ್ರಿಕಾದ ವೇಗಿಗಳ ವಿರುದ್ಧ ರನ್‌ ಗಳಿಸುವುದು ಸುಲಭವಾಗಿರಲಿಲ್ಲ. ಆರಂಭಿಕ ಬ್ಯಾಟರ್ ಆದರ್ಶ್ ಸಿಂಗ್ ಮೊದಲ ಎಸೆತದಲ್ಲಿ ಔಟಾಗುವ ಮೂಲಕ ಭಾರತಕ್ಕೆ ಮೊದಲ ಆಘಾತ ಎದುರಾಯಿತು. ರನ್ ಖಾತೆ ತೆರೆಯುವ ಮುನ್ನವೇ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು.

ಬಳಿಕ ಬಂದ ಭರವಸೆಯ ಬ್ಯಾಟರ್ ಮುಶೀರ್ ಖಾನ್ ಕೂಡ ಕೇವಲ 4 ರನ್ ಗಳಿಸುವಷ್ಟರಲ್ಲಿ ಔಟಾದರು. ಅರ್ಶಿನ್ ಕುಲಕರ್ಣಿ 12 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 25 ರನ್ ಆಗಿತ್ತು.

 India Beats South Africa, Enters 5th U-19 World Cup Final

ನಾಯಕ ಉದಯ್ ಶರಣ್ ಒಂದು ಕಡೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರಿಯಾಂಶು ಮೊಳಿಯಾ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 32 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ ಒತ್ತಡಕ್ಕೆ ಸಿಲುಕಿತು.

ಸಚಿನ್, ಉದಯ್‌ ಅಮೋಘ ಆಟ

ಈ ಹಂತದಲ್ಲಿ ನಾಯಕ ಉದಯ್ ಸಹರಾನ್‌ಗೆ ಜೊತೆಯಾದ ಸಚಿನ್ ದಾಸ್ ಅಮೋಘ ಪ್ರದರ್ಶನ ನೀಡಿದರು. ಈ ಜೋಡಿ 5ನೇ ವಿಕೆಟ್‌ಗೆ 169 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತವನ್ನು ಗೆಲುವಿನ ಸಮೀಪಕ್ಕೆ ಕರೆದೊಯ್ದರು.

ಉದಯ್ ಸಹರಾನ್ 124 ಎಸೆತಗಳಲ್ಲಿ 6 ಬೌಂಡರಿ ಸಹಿತ 81 ರನ್ ಗಳಿಸಿದರೆ, ಸಚಿನ್ ದಾಸ್ 95 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸರ್ ಸಹಿತ 96 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದರು.

ಅಂತಿಮವಾಗಿ ರಾಜ್ ಲಿಂಬಾನಿ 4 ಎಸೆತಗಳಲ್ಲಿ ಅಜೇಯ 13 ರನ್ ಗಳಿಸುವ ಮೂಲಕ ಭಾರತ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಗೆಲುವಿನ ಮೂಲಕ ಭಾರತ ಸತವಾಗಿ ಐದನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಫೆಬ್ರವರಿ 11ರಂದು ಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+