Paris Olympics 2024: ಇಂದು ಲಕ್ಷ್ಯ ಸೇನ್ ಕಂಚಿಗಾಗಿ ಫೈಟ್: ಸೋಮವಾರದ ವೇಳಾ ಪಟ್ಟಿ ಇಲ್ಲಿದೆ
ಪ್ಯಾರಿಸ್: ಭಾರತದ ಕ್ರೀಡಾ ಪಟುಗಳು ಭಾನುವಾರ ಅಮೋಘ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಭಾನುವಾರ ಭಾರತಕ್ಕೆ ಯಾವುದೇ ಪದಕ ಬಾರದೇ ಇದ್ದರೂ, ಆಟಗಾರರು ಆಡಿದ ಆಟ ಅಭಿಮಾನಿಗಳಿಗೆ ಖುಷಿ ನೀಡಿದೆ.
ಪುರುಷರ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ, ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲವಾಗಿದೆ. ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವರು ಆಡಿದ ಆಟಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಸೋಲು ಅನುಭವಿಸಿದರು. ಸೆಮಿಫೈನಲ್‌ನಲ್ಲಿ ಅವರು ಎರಡು ನೇರ ಸೆಟ್‌ಗಳಿಂದ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಆಘಾತ ಅನುಭವಿಸಿದರು. ಆದರೆ ಇವರು ಕಂಚಿನ ಪದಕ ಗೆಲ್ಲುವ ಅವಕಾಶ ಇದ್ದು, ಸೋಮವಾರ ಕಣಕ್ಕೆ ಇಳಿಯಲಿದ್ದಾರೆ.
ಭಾರತದ ಕ್ರೀಡಾ ಪಟುಗಳು ವೇಳಾ ಪಟ್ಟಿ
12:30 PM: ಶೂಟಿಂಗ್ - ಮಿಕ್ಸ್ ಟೀಮ್ ಅರ್ಹತಾ ಸುತ್ತು
1:30 PM: ಟೆಬಲ್ ಟೆನಿಸ್ - ಮಹಿಳೆಯ ವಿಭಾಗ
3:25 PM: ಅಥ್ಲೆಟಿಕ್ಸ್ - ಮಹಿಳೆಯರ 800 ಮೀಟರ್ ಹೀಟ್
3:45 PM: ಸೀಲಿಂಗ್ - ಮಹಿಳಾ ವಿಭಾಗ.
6 PM: ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ ಕಂಚಿನ ಪದಕದ ಪಂದ್ಯ
6:10 PM: ಸೀಲಿಂಗ್ - ಪುರುಷರ ವಿಭಾಗ
6:30 PM: ಕುಸ್ತಿ - ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್
ಕ್ವಾಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳೂ ಸಹ ಸೋಮವಾರವೇ ನಡೆಯಲಿವೆ
10:31 PM: ಅಥ್ಲೆಟಿಕ್ಸ್ - ಪುರುಷರ 3000 ಮೀಟರ್ ಸ್ಟೀಪಲ್ ಚೆಸ್
ಉಳಿದ ಮಹತ್ವದ ಪಂದ್ಯ
2:25 PM: ಬ್ಯಾಡ್ಮಿಂಟನ್ - ಮಹಿಳೆಯರ ಸಿಂಗಲ್ಸ್ ಫೈನಲ್
7:10 PM: ಬ್ಯಾಡ್ಮಿಂಟನ್ - ಪುರುಷರ ಸಿಂಗಲ್ಸ್ ಫೈನಲ್
10:30 PM: ಅಥ್ಲೆಟಿಕ್ಸ್ - ಪುರುಷರ ಪೋಲ್ ಔಟ್ ಫೈನಲ್
12 AM: ಅಥ್ಲೆಟಿಕ್ಸ್ -ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್
12:45 AM: ಅಥ್ಲೆಟಿಕ್ಸ್ - ಮಹಿಳೆಯರ 5000 ಮೀಟರ್ ಫೈನಲ್
1:17 AM: ಅಥ್ಲೆಟಿಕ್ಸ್ - ಮಹಿಳೆಯರ 800 ಮೀಟರ್ ಫೈನಲ್












Click it and Unblock the Notifications