ಆರ್‌ಸಿಬಿ ಬೆಂಗಳೂರು ತಂಡದ ನಾಯಕಿ ಅಬ್ಬರ 4, 4, 4, 4, 4, 4... ನಲುಗಿ ಹೋದ ಸೌತ್ ಆಫ್ರಿಕಾ... World Cup
ಕನ್ನಡಿಗರ ಆರ್‌ಸಿಬಿ ತಂಡದ ಆಟಗಾರರೇ ಹಾಗೆ, ಒಂದು ಬಾರಿ ಎದುರಾಳಿ ತಂಡವನ್ನ ಬಗ್ಗು ಬಡಿದು ಗೆಲ್ಲಬೇಕು ಅಂತಾ ನಿರ್ಧಾರ ಮಾಡಿದರೆ ಎಂತಹ ಪರಿಸ್ಥಿತಿ ಎದುರಾದರೂ ಬಿಡೋದಿಲ್ಲ. ವಿರಾಟ್ ಕೊಹ್ಲಿ ಅವರ ರೀತಿಯಲ್ಲೇ ಆರ್‌ಸಿಬಿ ಬೆಂಗಳೂರು ತಂಡದ ಹಲವು ಆಟಗಾರರು ನಮ್ಮ ದೇಶದ ಪರವಾಗಿ ಕೂಡ ಆಟ ಆಡಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ಬೆಂಗಳೂರು ತಂಡದ ನಾಯಕಿ ಅಬ್ಬರ 4, 4, 4, 4, 4, 4... ನಲುಗಿ ಹೋದ ಸೌತ್ ಆಫ್ರಿಕಾ...
ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಕ್ರಿಕೆಟ್ ಮಹಿಳಾ ತಂಡದ ಆಟಗಾರರು ದಿಟ್ಟವಾಗಿ ಹೋರಾಟ ನಡೆಸಿದರು. ಅದರಲ್ಲೂ ಟಾಸ್ ಸೋತ ನಂತರ ಒಂದಷ್ಟು ಭಯ ಮೂಡಿತ್ತು, ಈ ಸಮಯದಲ್ಲಿ ಕೂಡ ಹೆದರದೆ ಮುಂದೆ ನುಗ್ಗಿದ್ದ ಭಾರತೀಯ ಕ್ರಿಕೆಟ್ ಮಹಿಳಾ ತಂಡದ ಆಟಗಾರರು ಆರಂಭದಲ್ಲೇ ಭದ್ರ ಅಡಿಪಾಯ ಹಾಕಿಕೊಂಡರು. ಅದರಲ್ಲೂ ಆರ್‌ಸಿಬಿ ಬೆಂಗಳೂರು ತಂಡದ ನಾಯಕಿ ಅಬ್ಬರ ಕಂಡು ಸ್ವತಃ ಎದುರಾಳಿ ತಂಡ ಆಟಗಾರರೇ ಬೆಚ್ಚಿಬಿದ್ದರು. ನೋಡ ನೋಡುತ್ತಾ ಸೌತ್ ಆಫ್ರಿಕಾಗೆ ದೊಡ್ಡ ಮೊತ್ತದ ರನ್ ನೀಡಲಾಗಿತ್ತು...

ಆರ್‌ಸಿಬಿ ನಾಯಕಿ ಅಬ್ಬರದ ಬ್ಯಾಟಿಂಗ್!
ಅಂದಹಾಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ಅಬ್ಬರಕ್ಕೆ ಇದೀಗ ದಾಖಲೆಗಳೂ ಧೂಳ್ ಧೂಳ್ ಆಗಿ ಹೋಗಿವೆ. ಅದರಲ್ಲೂ 45 ರನ್ ಬಾರಿಸಿ 8 ಬೌಂಡರಿ ಚಚ್ಚಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಭರ್ಜರಿಯಾಗಿ ಆರಂಭವೇ ಶತಕದ ಜೊತೆಯಾಟ ಆಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಮೂಲಕ ಅಂತಿಮವಾಗಿ ಟೀಂ ಇಂಡಿಯಾ 298 ರನ್ ಗಳಿಸಿ ಸವಾಲಿನ ಮೊತ್ತವನ್ನೇ ದಕ್ಷಿಣ ಆಫ್ರಿಕಾಗೆ ನೀಡಿತ್ತು. ಮಳೆ ನಡುವೆ ಇನ್ನೇನು ಮ್ಯಾಚ್ ನಿಂತು ಹೋಗುತ್ತದೆ ಎನ್ನುವಾಗ ಇದು ಅಭಿಮಾನಿಗಳಿಗೆ ನೆಮ್ಮದಿ ನೀಡಿತ್ತು.
ಕ್ರಿಕೆಟ್ ದೇವರಿಂದ ಆಶೀರ್ವಾದ ಸಿಕ್ಕಿತ್ತು...
ಹೌದು, ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಮಹಿಳಾ ತಂಡಕ್ಕೆ ಬೆನ್ನುತಟ್ಟಿ ಸ್ಪೂರ್ತಿ ತುಂಬಲು ಬಂದಿದ್ದರು. 2025 ಮಹಿಳಾ ವಿಶ್ವಕಪ್ ಫೈನಲ್ ಮ್ಯಾಚ್ ನೋಡಲು ಬಂದಿದ್ದ ಸಚಿನ್ ತೆಂಡೂಲ್ಕರ್ ಅವರು, ಧೈರ್ಯ ತುಂಬಿದ್ದರು. ಅಲ್ಲದೇ ಹೀಗೆ ಸಚಿನ್ ತೆಂಡೂಲ್ಕರ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಕೋಟಿ ಕೋಟಿ ಅಭಿಮಾನಿಗಳಿಗೂ ಖುಷಿ ಆಗಿತ್ತು. ಪಂದ್ಯ ಆರಂಭ ಆಗುವ ಮೊದಲೇ ಎಂಟ್ರಿ ಕೊಟ್ಟಿದ್ದ ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್, ಪಂದ್ಯಕ್ಕೆ ಮೊದಲು ಶುಭ ಕೋರಿದರು. ಈ ಮೂಲಕ ಭಾರತೀಯ ಮಹಿಳಾ ತಂಡದ ಆತ್ಮವಿಶ್ವಾಸ ಡಬಲ್ ಆಗಿತ್ತು.












Click it and Unblock the Notifications