Ind vs NZ 1st Test: 46 ರನ್‌ಗಳಿಗೆ ಆಲೌಟ್; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಟ್ಟ ದಾಖಲೆ ಬರೆದ ಟೀಂ ಇಂಡಿಯಾ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಕೆಟ್ಟ ದಾಖಲೆ ಬರೆದಿದೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ನ್ಯೂಜಿಲೆಂಡ್ ವೇಗದ ಬೌಲಿಂಗ್ ಎದುರು ತತ್ತರಿಸಿದೆ. 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆಗಳನ್ನು ಬರೆದಿದೆ.
ಮಳೆಯಿಂದಾಗಿ ಪಂದ್ಯದ ಮೊದಲ ದಿನದ ಆಟ ಸಂಪೂರ್ಣವಾಗಿ ರದ್ದಾಗಿತ್ತು. ಎರಡನೇ ದಿನ ಮಳೆ ಇಲ್ಲದ ಕಾರಣ, ನಿಗದಿಗಿಂದ 15 ನಿಮಿಷ ಮೊದಲು ಪಂದ್ಯವನ್ನು ಆರಂಭಿಸಲಾಯಿತು. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ನ್ಯೂಜಿಲೆಂಡ್ ವೇಗಿಗಳ ಮುಂದೆ ಭಾರತದ ಬ್ಯಾಟಿಂಗ್ ಪಡೆ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಇದು ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮೊತ್ತವಾಗಿದೆ. 2021ರಲ್ಲಿ ನ್ಯೂಜಿಲೆಂಡ್ ಎದುರು ಭಾರತ 62 ರನ್‌ಗಳಿಗೆ ಆಲೌಟ್ ಆಗಿದ್ದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು, ಈಗ ಭಾರತ 46 ರನ್‌ಗಳಿಗೆ ಆಲೌಟ್ ಆಗಿದ್ದು, ಕೆಟ್ಟ ದಾಖಲೆ ಮಾಡಿದೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಭಾರತ 3ನೇ ಕನಿಷ್ಠ ಸ್ಕೋರ್ ಆಗಿದೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳಿಗೆ ಆಲೌಟ್ ಆಗಿದ್ದರೆ, 1974ರಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್‌ಗಳಿಗೆ ಆಲೌಟ್ ಆಗಿತ್ತು, ಇದೀಗ 46 ರನ್‌ಗಳಿಗೆ ಆಲೌಟ್ ಆಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತ
ಆಸ್ಟ್ರೇಲಿಯಾ ವಿರುದ್ಧ 21.1 ಓವರ್‌ಗಳಲ್ಲಿ 36 ರನ್ (ಅಡಿಲೇಡ್, 2020)
ಇಂಗ್ಲೆಂಡ್ ವಿರುದ್ಧ 17 ಓವರ್‌ಗಳಲ್ಲಿ 42 ರನ್ (ಲಂಡನ್, 1974)
ನ್ಯೂಜಿಲೆಂಡ್ ವಿರುದ್ಧ 31.2 ಓವರ್ ಗಳಲ್ಲಿ 46 ರನ್ (ಬೆಂಗಳೂರು, 2024), ಭಾರತದಲ್ಲಿ ಅತಿ ಕಡಿಮೆ ಮೊತ್ತ
ಆಸ್ಟ್ರೇಲಿಯಾ ವಿರುದ್ಧ 58 ರನ್ (ಬ್ರಿಸ್ಬೇನ್, 1947)
ಇಂಗ್ಲೆಂಡ್ ವಿರುದ್ಧ 21.4 ಓವರ್‌ಗಳಲ್ಲಿ 58 ರನ್ (ಮ್ಯಾಂಚೆಸ್ಟರ್, 1952)
ನ್ಯೂಜಿಲೆಂಡ್ ವಿರುದ್ಧ 28.1 ಓವರ್‌ಗಳಲ್ಲಿ 62 ರನ್ (ಮುಂಬೈ, 2021)
ದಕ್ಷಿಣ ಆಫ್ರಿಕಾ ವಿರುದ್ಧ 34.1 ಓವರ್‌ಗಳಲ್ಲಿ 66 ರನ್ (ಡರ್ಬನ್, 1996)
ಆಸ್ಟ್ರೇಲಿಯಾ ವಿರುದ್ಧ 67 ರನ್ (ಮೆಲ್ಬೋರ್ನ್, 1948)
ವೆಸ್ಟ್ ಇಂಡೀಸ್ ವಿರುದ್ಧ 30.5 ಓವರ್ ಗಳಲ್ಲಿ 75 ರನ್ (ದೆಹಲಿ, 1987)
ದಕ್ಷಿಣ ಆಫ್ರಿಕಾ ವಿರುದ್ಧ 20 ಓವರ್ ಗಳಲ್ಲಿ 76 ರನ್ (ಅಹಮದಾಬಾದ್, 2008)
ಅಹಮದಾಬಾದ್‌ನಲ್ಲಿ 20 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 (2008)












Click it and Unblock the Notifications