IND vs PAK: ಗೆದ್ದು ಬಾ ಇಂಡಿಯಾ ಅಭಿಮಾನಿಗಳ ಹರ್ಷೋದ್ಘಾರ- ಭಾರತ ಪಾಕ್ ರೋಚಕ ಪಂದ್ಯಕ್ಕೆ ಕ್ಷಣಗಣನೆ

ಇಂದು ಭಾನುವಾರದ ರಜೆ ಒಂದು ಕಡೆ ಆದರೆ ಮತ್ತೊಂದುಕಡೆ ಜನರಿಗೆ ಡಬಲ್ ಧಮಾಕ. ಯಾಕೆಂದರೆ ಇಂದು ಇಂಡಿಯಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಸಂಪ್ರದಾಯಿಕ ವೈರಿಗಳನ್ನು ಕಟ್ಟಿ ಹಾಕಲು ಭಾರತ ತಂಡ ಸಜ್ಜಾಗಿ ಕುಳಿತಿದೆ. ಕಳೆದ ಬಾರಿಯ ಸೇಡನ್ನು ತೀರಿಸಿಕೊಳ್ಳಲು ಪಣ ತೊಟ್ಟಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತೀಯರೇ ಕಾದು ಕುಳಿತಿದ್ದಾರೆ. ಜೊತೆಗೆ ಭಾರತ ತಂಡದ ಆಟಗಾರರಿಗೆ ಆಲ್‌ ದಿ ಬೆಸ್ಟ್‌ ಕೂಡ ಹೇಳಿದ್ದಾರೆ. ಹಾಗಾದರೆ ಕನ್ನಡದ ಯಾವೆಲ್ಲಾ ನಟ, ನಟಿಯರು ಇಂಡಿಯಾ ಟೀಂಗೆ ಶುಭ ಹಾರೈಸಿದ್ದಾರೆ? ಎಲ್ಲೆಲ್ಲಿ ಪೂಜೆ ಸಲ್ಲಿಸಲಾಗಿದೆ ಎಲ್ಲವನ್ನೂ ತಿಳಿಯೋಣ.

ಚಾಮರಾಜನಗರದ ರಾಮಸಮುದ್ರದ ಬಳಿ ಇರುವ ಶ್ರೀ ಜನಾರ್ಧನ ಸ್ವಾಮಿ ಮಂದಿರದಲ್ಲಿ ಭಾರತ ತಂಡ ಗೆಲುವಿಗಾಗಿ ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಯಾವುದೇ ವಿಘ್ನಗಳು ಬಾರದೇ ಇರಲಿದೆ ಎಂದು ವಿಶೇಷವಾಗಿ ಪ್ರಾರ್ಥನೆ ಮಾಡಲಾಗಿದೆ. ದೇವರ ಪಾದಕ್ಕೆ ಭಾರತ ತಂಡದ ಎಲ್ಲಾ ಆಟಗಾರರ ಹೆಸರನ್ನು ಬರೆದಿಟ್ಟು ಪೂಜೆ ಸಲ್ಲಿಸಲಾಗಿದೆ. ಭಾರತದ ತಂಡದ ಆಟಗಾರರ ಮನಸ್ಸು ಕುಗ್ಗದೇ ಇರಲಿ, ಮನಸ್ಸಿನಲ್ಲಿ ಹಿನ್ನಡೆ ಆಗದೇ ಇರಲಿ ಎಂದು ಅರ್ಚನೆ ಮಾಡಿಸಿದ್ದಾರೆ ಅಭಿಮಾನಿಗಳು.

ಇಂಡಿಯಾ ಗೆಲ್ಲಬೇಕು ಗೆಲ್ಲುತ್ತೆ- ಶ್ರೀಮುರಳಿ

ಇನ್ನೂ ಇಂಡಿಯಾ ಟೀಂ ಜಯಗಳಿಸಲೆಂದು ಸ್ಯಾಂಡಲ್‌ವುಡ್‌ನ ತಾರೆಯರೂ ಕೂಡ ಹಾರೈಸಿದ್ದಾರೆ. ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ, 'ಇಂಡಿಯಾ ಗೆಲ್ಲಬೇಕು. ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಇದೆ, ಆಲ್‌ ದಿ ವೆರಿ ಬೆಸ್ಟ್ ಇಂಡಿಯಾ' ಎಂದು ಹಾರೈಸಿದ್ದಾರೆ.

IND vs PAK India Pakistan Cricket Match - Sandalwood actors and actresses wish them a win

ಪಾಕಿಸ್ತಾನ್ ಸೋಲಬೇಕು- ಕಾರುಣ್ಯ ರಾಮ್

ನಟಿ ಕಾರುಣ್ಯ ರಾಮ್, 'ಮ್ಯಾಚ್ ನೋಡಲು ತುಂಬಾ ಥ್ರಿಲ್ ಇರುತ್ತದೆ. ಇಂಡಿಯಾ ಗೆಲ್ಲಬೇಕು. ಪ್ರತಿಯೊಬ್ಬರು ಕೂಡ ತುಂಬಾ ಕುತೂಹಲಕಾರಿಯಾಗಿ ನೋಡುತ್ತಿರುತ್ತಾರೆ. ಪಾಕಿಸ್ತಾನ್ ಸೋಲಬೇಕು ಅನ್ನೋ ಮೈಂಡ್ ಸೆಟ್‌ ಯಿಂದ ನೋಡ್ತಾಯಿರ್ತೀವಿ ನಾವು ಮ್ಯಾಚ್‌ ಅನ್ನು. ಇಂಡಿಯಾ ವಿನ್ ಆಗಲಿ. ಆಲ್‌ ದಿ ವೆರಿ ಬೆಸ್ಟ್ ಇಂಡಿಯಾ' ಎಂದು ಕೂತೂಹಲ ವ್ಯಕ್ತಪಡಿಸಿದ್ದಾರೆ.

IND vs PAK India Pakistan Cricket Match - Sandalwood actors and actresses wish them a win

ಮ್ಯಾಚ್‌ ನೋಡುವ ಆಸೆ ನನಗೆ ಇವತ್ತು ಹೆಚ್ಚಾಗಿದೆ- ನೀತು

ಮ್ಯಾಚ್‌ ಬಗ್ಗೆ ಮಾತನಾಡಿದ ನೀತು, 'ಚಿಕ್ಕ ವಯಸ್ಸಿನಲ್ಲಿ ಇಂಡಿಯಾ ಹಾಗೂ ಪಾಕಿಸ್ತಾನ್ ಮ್ಯಾಚ್ ಮಾತ್ರ ನೋಡುತ್ತಿದ್ದೆ ನಾನು. ನನಗೆ ತುಂಬಾ ಆಸೆ ಇದೆ ಇಂಡಿಯಾ ಗೆಲ್ಲಬೇಕು ಅಂತ. ಇಂಡಿಯಾ ಕಪ್ ತೆಗೆದುಕೊಳ್ಳಬೇಕು. ನಾನು ಕ್ರಿಕೆಟ್ ಆಡೋದರಿಂದ ಈಗ ಆಟದ ಮೇಲೆ ಒಲವು ಹೆಚ್ಚಾಗಿದೆ. ಇನ್ನೂ ಜಾಸ್ತಿ ಇಂಟ್ರಸ್ಟ್ ಬಂದಿದೆ. ಟೀಂ ಇಂಡಿಯಾಗೆ ಆಲ್‌ ದಿ ಬೆಸ್ಟ್ ಹೇಳುತ್ತೇನೆ'.

ಇಂಡಿಯಾ ಗೆದ್ದೇ ಗೆಲ್ಲುತ್ತೆ- ಶರಣ್

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ ಶರಣ್, 'ನಮ್ಮ ಇಂಡಿಯಾ ತಂಡ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ಗೆಲ್ಲಲಿ ಅನ್ನೋದಕ್ಕಿಂತ ಗೆದ್ದೇ ಗೆಲ್ತೀವಿ ಅನ್ನೋದನ್ನು ನಾನು ಹೇಳ್ತೀನಿ. ಚಿಕ್ಕ ವಯಸ್ಸಿನಿಂದಲೂ ನನಗೆ ಮ್ಯಾಚ್ ಅಂದರೆ ತುಂಬಾ ಇಷ್ಟ. ಊಟ ನಿದ್ದೆ ಬಿಟ್ಟು ಮ್ಯಾಚ್ ನೋಡ್ತಾಯಿದ್ವಿ ನಾವೆಲ್ಲಾ. ಈಗಲೂ ಅಷ್ಟೇ ಕುತೂಹಲ ಇದೆ. ಇಂಡಿಯಾ ಗೆಲ್ಲುತ್ತೆ. ಆಲ್‌ ದಿ ಬೆಸ್ಟ್' ಎಂದಿದ್ದಾರೆ.

IND vs PAK India Pakistan Cricket Match - Sandalwood actors and actresses wish them a win


ಇನ್ನೂ ಚಿಕ್ಕಮಕ್ಕಳು, ಯುವ ಪೀಳಿಗೆ, ಹಿರಿಯರು ಎಲ್ಲರೂ ಕೂಡ ಇಂಡಿಯಾ ಘೋಷಣೆ ಮೊಳಗಿಸುತ್ತಿದ್ದಾರೆ. 'ಪರೀಕ್ಷೆ ಯಾವಾಗಲೂ ಬರುತ್ತೆ ಆದರೆ ಇಂಡಿಯಾ ಮ್ಯಾಚ್ ಯಾವಾಗಲೂ ಬರೋದಿಲ್ಲ. 2017 ರಿವೇಜ್ ತೆಗೆದುಕೊಳ್ಳುತ್ತೇವೆ ನಾವು' ಎಂದು ಪುಟ್ಟ ಹುಡುಗನೊಬ್ಬ ಹೇಳುವ ಮೂಲಕ ಭಾರತ ತಂಡದ ಮೇಲಿನ ನಿರೀಕ್ಷೆ ಹಾಗೂ ಗೆಲ್ಲುವ ವಿಶ್ವಾಸವನ್ನು ಎತ್ತಿ ತೋರಿಸಿದ್ದಾನೆ. ವಿಶೇಷವಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ವಿಶ್ವಾಸ ಇದೆ. ಯಾಕೆಂದರೆ ಇಂಡಿಯಾ ಪಾಕಿಸ್ತಾನ ಪಂದ್ಯ ಅಂದರೆ ಸಾಕು ವಿರಾಟ್‌ ಕೊಹ್ಲಿ ರೊಚ್ಚಿಗೇಳುತ್ತಾರೆ. ಗೆಲ್ಲುವ ಛಲ ಇರುತ್ತದೆ. ಹೀಗಾಗಿ ಈ ಬಾರಿ ಆಟ ಭಾರತೀಯರಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+