Ind vs Eng: ರಾಹುಲ್, ಜಡೇಜಾ ಅರ್ಧಶತಕ: ಮೊದಲ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿ ಭಾರತ

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಎರಡನೇ ದಿನದ ಆಟ ಮುಕ್ತಾಯದ ವೇಳೆಗೆ ಭಾರತ 175 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 246 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಭಾರತ, 175 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದು, ಮೂರನೇ ದಿನ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸುವ ವಿಶ್ವಾಸದಲ್ಲಿದೆ.

Ind vs Eng Test: India Takes 175-Run Lead, Stellar Performances by KL Rahul and Jadeja

ಮೊದಲ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದ್ದ ಭಾರತ ಎರಡನೇ ದಿನದಾಟದ ಆರಂಭದಲ್ಲಿ ಕಳಪೆ ಆರಂಭ ಪಡೆದುಕೊಂಡಿತು. 80 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಆರಂಭದಲ್ಲೇ ಔಟದರು. ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ ಕೂಡ 23 ರನ್ ಗಳಿಸಿ ಔಟಾದರು.

ರಾಹುಲ್, ಜಡೇಜಾ ಆಸರೆ

ಭಾರತದ ಸ್ಕೋರ್ 159 ರನ್ ಆಗಿದ್ದಾಗ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ ಜೊತೆಗೂಡಿ 64 ರನ್‌ಗಳ ಜೊತೆಯಾಟ ಆಡಿದರು. ಶ್ರೇಯಸ್ ಅಯ್ಯರ್ 35 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 123 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 86 ರನ್ ಗಳಿಸಿದರು.

ಅಯ್ಯರ್ ಬಳಿಕ ರವೀಂದ್ರ ಜಡೇಜಾ ಜೊತೆಗೂಡಿ 65 ರನ್‌ಗಳ ಜೊತೆಯಾಟ ಆಡಿದರು. ರವೀಂದ್ರ ಜಡೇಜಾ 81 ಅಜೇಯ 81 ರನ್ ಗಳಿಸಿ ಆಡುತ್ತಿದ್ದು, ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ಶಿಖರ್ ಭರತ್ 41 ರನ್ ಗಳಿಸಿದರೆ, ಅಶ್ವಿನ್ 1 ರನ್ ಗಳಿಸಿದ್ದಾಗ ರನೌಟ್ ಆದರು. ಅಕ್ಷರ್ ಪಟೇಲ್ ಅಜೇಯ 35 ರನ್ ಗಳಿಸಿದ್ದು ಜಡೇಜಾ ಅವರೊಂದಿಗೆ ಮೂರನೇ ದಿನ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಇಂಗ್ಲೆಂಡ್ ಪರವಾಗಿ ಟಾಮ್ ಹಾರ್ಟ್ಲೆ ಮತ್ತು ಜೋ ರೂಟ್ ತಲಾ ಎರಡು ವಿಕೆಟ್ ಪಡೆದರು. ಜಾಕ್ ಲೀಚ್ ಮತ್ತು ರೆಹಾನ್ ಅಹಮದ್ ತಲಾ ಒಂದು ವಿಕೆಟ್ ಪಡೆದುಕೊಂಡರು. ಸದ್ಯ 175 ರನ್‌ಗಳ ಮುನ್ನಡೆ ಪಡೆದುಕೊಂಡಿರುವ ಭಾರತ ಮೂರನೇ ದಿನ ಮತ್ತಷ್ಟು ರನ್ ಕಲೆಹಾಕುವ ಮೂಲಕ ಇನ್ನಿಂಗ್ಸ್ ಗೆಲುವಿನ ಕಡೆ ಗಮನ ಹರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+