Ind vs Eng: ಹಾರ್ದಿಕ್ ಪಾಂಡ್ಯ ಅಲಭ್ಯ: ಕೊಹ್ಲಿ, ಗಿಲ್, ಸೂರ್ಯ ಬೌಲಿಂಗ್ ಅಭ್ಯಾಸ!

ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಇದುವರೆಗೂ ಆಡಿರುವ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಲಕ್ನೌನ ಏಕಾನ ಸ್ಟೇಡಿಯಂನಲ್ಲಿ ಅಕ್ಟೋಬರ್ 29ರಂದು ಈ ಪಂದ್ಯ ನಡೆಯಲಿದ್ದು ಭಾರತ ತಂಡ ಅಭ್ಯಾಸ ಮಾಡುತ್ತಿದೆ.

ಏಕಾನಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೆಗಾ ಘರ್ಷಣೆಯಲ್ಲಿ ವಿರಾಟ್ ಕೊಹ್ಲಿ ಮಾತ್ರವಲ್ಲದೆ ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ಕೂಡ ಭಾರತಕ್ಕೆ ಆರನೇ ಬೌಲರ್ ಆಯ್ಕೆಯಾಗಿ ಇರಲಿದ್ದಾರೆ.

Ind vs Eng: Shubman Gill, SKY, and Kohli Step Up in Place of Pandya

ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿರುವುದರಿಂದ ಭಾರತದ ಸಮತೋಲನ ತಪ್ಪಿದೆ. ಐವರು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಆಡಲು ಭಾರತ ಸ್ಪಷ್ಟಪಡಿಸಿರುವುದರಿಂದ, ಪಾಂಡ್ಯ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಆಡುವುದು ಖಚಿತವಾಗಿದೆ.

ಭಾರತ ಆರು ಬ್ಯಾಟರ್ ಮತ್ತು ಐವರು ಬೌಲರ್ ಗಳ ಜೊತೆ ಕಣಕ್ಕಿಳಿಯಲಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಗಾಯಗೊಂಡಾಗ ಕೊಹ್ಲಿ ಮಾತ್ರ ಬೌಲಿಂಗ್ ಮಾಡಿದರು. ಆದರೆ ಈಗ ಬಂದಿರುವ ಇತ್ತೀಚಿನ ಸುದ್ದಿ ಏನೆಂದರೆ, ಭಾರತದ ಐಚ್ಛಿಕ ಅಭ್ಯಾಸದ ಅವಧಿಯಲ್ಲಿ ಸೂರ್ಯಕುಮಾರ್ ಮತ್ತು ಗಿಲ್ ಕೂಡ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.

ಬೌಲಿಂಗ್ ಆಯ್ಕೆ ಹೆಚ್ಚಿಸಿಕೊಂಡ ಭಾರತ

ಮುಂಬೈಗಾಗಿ ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಶುಭಮನ್ ಗಿಲ್ ಬೌಲಿಂಗ್ ಮಾಡಿದ್ದನ್ನು ಹೆಚ್ಚಾಗಿ ನೋಡಿಲ್ಲ, ಯುವ ಆಟಗಾರ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದೂ ಪಂದ್ಯದಲ್ಲಿ ಕೂಡ ಬೌಲಿಂಗ್ ಮಾಡಿಲ್ಲ.

ಸೂರ್ಯ ಕುಮಾರ್ ಯಾದವ್ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್‌ಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು. ಸೂರ್ಯ ಅರ್ಧ ಗಂಟೆಗೂ ಹೆಚ್ಚು ಕಾಲ ಬೌಲಿಂಗ್ ಮಾಡಿದರು. ಇದೇ ವೇಳೆ ಗಿಲ್ ಅರ್ಧ ಗಂಟೆ ಕಾಲ ಮೊಹಮ್ಮದ್ ಸಿರಾಜ್‌ಗೆ ಬೌಲಿಂಗ್ ಮಾಡಿದರು.

ಪಾಂಡ್ಯ ಅನುಪಸ್ಥಿತಿ ನೀಗಿಸಿದ ಬ್ಯಾಟರ್

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯನ್ನು ಭಾರತ ವಿಶಿಷ್ಟ ರೀತಿಯಲ್ಲಿ ಎದುರಿಸುತ್ತಿದೆ, ಭಾರತವು ಈ ಅರೆಕಾಲಿಕ ಬೌಲರ್‌ಗಳನ್ನು ನೆಟ್ಸ್‌ನಲ್ಲಿ ಬೌಲ್ ಮಾಡಿಸುವ ಮೂಲಕ ಸಿದ್ಧವಾಗಿಸುತ್ತಿದೆ. ಐವರು ಬೌಲರ್ ಗಳಲ್ಲಿ ಯಾರಾದರೂ ಹೆಚ್ಚು ರನ್ ಬಿಟ್ಟುಕೊಡುವಾಗ ಅರೆಕಾಲಿಕ ಬೌಲರ್ ಗಳ ಬಳಿ ಒಂದೆರಡು ಓವರ್ ಬೌಲಿಂಗ್ ಮಾಡಿಸುವುದು ಲೆಕ್ಕಾಚಾರವಾಗಿದೆ.

ಪಾಂಡ್ಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಆಡುವುದಿಲ್ಲ ಎನ್ನುವುದು ಖಚಿತವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯಗಳಿಗೆ ಆಲ್ ರೌಂಡರ್ ಫಿಟ್ ಆಗುತ್ತಾರೆಯೇ ಎಂಬುದು ಖಚಿತವಾಗಿಲ್ಲ. ರೋಹಿತ್ ಶರ್ಮಾ ಮತ್ತು ಕೋ ಅವರು ಭಾನುವಾರ ಇಂಗ್ಲೆಂಡ್ ವಿರುದ್ಧ ಸೆಣಸುವ ಮೊದಲು ಶುಕ್ರವಾರ ಮತ್ತೊಂದು ಸೆಷನ್ ಅಭ್ಯಾಸದ ಅವಧಿಯನ್ನು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+