IND vs BAN Prediction: ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಯಾರಿಗೆ ಗೆಲುವು? ಭವಿಷ್ಯ ನುಡಿದ ಚಿಲಕಮ್ಮ
ಫುಟ್ಬಾಲ್ ವಿಶ್ವಕಪ್‌ನಲ್ಲಿ ಪಾಲ್ ಆಕ್ಟೋಪಸ್ ಭವಿಷ್ಯ ನುಡಿದಿದ್ದನ್ನು ಎಲ್ಲರೂ ನೋಡಿದ್ದಾರೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ರೀತಿಯಾಗಿ ಹಕ್ಕಿಯೊಂದು ಭವಿಷ್ಯ ನುಡಿದಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮೊದಲೇ ಚಿಲಕಮ್ಮ(ಗಿಣಿ) ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಎರಡು ತಂಡಗಳ ನಡುವಿನ ಪಂದ್ಯದಲ್ಲಿ ಗಿಳಿಯು ವಿಜೇತ ತಂಡ ಯಾವುದು ಎಂದು ಹೇಳಿದೆ. ಪಂಜರದ ಮುಂದೆ ಎರಡು ಕಾರ್ಡ್‌ಗಳನ್ನು ಇಡಲಾಗುತ್ತದೆ. ಒಂದು ಭಾರತ ಹಾಗೂ ಇನ್ನೊಂದು ಬಾಂಗ್ಲಾದೇಶ. ಈ ಎರಡು ಕಾರ್ಡ್‌ಗಳನ್ನು ಇಟ್ಟು ಪಂಜರದ ಗಿಳಿಯನ್ನು ಹೊರಗೆ ಕರೆಯಲಾಗುತ್ತದೆ. ಯಾವ ತಂಡ ಗೆಲ್ಲುತ್ತದೆ ಎಂದು ಕೇಳಿದಾಗ ಗಿಣಿ ಬಂದು ಭಾರತದ ಕಾರ್ಡ್ ಅನ್ನು ಬಾಯಯಲ್ಲಿ ಹಿಡಿದು ತೋರಿಸುತ್ತದೆ. ಈ ಪ್ರಿಡಿಕ್ಷನ್ ಸ್ಟಾರ್ ಗಿಣಿ ವೀಡಿಯೋ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾರೀ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?
ವೀಡಿಯೋದಲ್ಲಿ ವ್ಯಕ್ತಿಯು ಪಂಜರದಲ್ಲಿ ಇದ್ದ ಗಿಣಿಯನ್ನು ಕರೆದು, ಅನೇಕ ಚಿಟ್‌ಗಳಲ್ಲಿ ಒಂದನ್ನು ಆರಿಸಲು ಸೂಚಿಸುತ್ತಾನೆ. ಗಿಳಿ ಒಂದು ಚಿಟ್ ಅನ್ನು ಎತ್ತಿಕೊಂಡು ಆ ವ್ಯಕ್ತಿಗೆ ನೀಡುತ್ತದೆ ಮತ್ತು ಆ ವ್ಯಕ್ತಿಯು ಆ ತಂಡದ ಚಿತ್ರವನ್ನು ಕ್ಯಾಮೆರಾಕ್ಕೆ ತೋರಿಸುತ್ತಾನೆ. ಆ ಚಿಟ್ಟಿಯಲ್ಲಿ ಭಾರತದ ಚಿತ್ರ ಇರುತ್ತದೆ. ಈ ರೀತಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಬಗ್ಗೆ ಗಿಣಿ ಭವಿಷ್ಯ ನುಡಿದಿದೆ.
ಆ ಗಿಣಿ ಭಾರತ ತಂಡದ ಧ್ವಜವಿದ್ದ ಚಿಟ್ ಅನ್ನು ಎತ್ತಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರಿಯರು ದಿಲ್ ಖುಶ್ ಆಗಿದ್ದಾರೆ. ಭಾರತ ತಂಡ ಇಂದಿನ ಪಂದ್ಯವನ್ನು ಗೆಲ್ಲುತ್ತದೆ ಎಂದು ಭಾರತೀಯರು ಖುಷಿ ಆಗಿದ್ದಾರೆ. ಇದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.












Click it and Unblock the Notifications