ICC World Cup 2023: ಟೀಮ್ ಇಂಡಿಯಾದ 'ಗೋಲ್ಡನ್ ಬಾಯ್' ಏನೆಲ್ಲಾ ದಾಖಲೆ ಬರೆಯಬಹುದು, ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಬ್ಮನ್ ಗಿಲ್.. ತನ್ನಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಸಮಯ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಅಲ್ಲದೆ ತಮ್ಮ ಮೇಲೆ ಆಯ್ಕೆದಾರರು ವಿಶ್ವಾಸವನ್ನು ಇಡುವಂತೆ ಮೈದಾನದಲ್ಲಿ ರನ್ ಕಲೆ ಹಾಕಿದ್ದಾರೆ.
ಕೇವಲ ಒಂದೇ ವರ್ಷದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಶುಬ್ಮನ್ ಗಿಲ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ವಿಶ್ವಕಪ್ ನಲ್ಲೂ ಗಿಲ್ ದಾಖಲೆ ಬರೆಯುವ ಹುಮ್ಮಸ್ಸು ಹೊಂದಿದ್ದಾರೆ. ಪ್ರಸಕ್ತ ವರ್ಷದ ಗೋಲ್ಡನ್ ಬಾಯ್ (Golden Boy) ಎಂದೇ ಖ್ಯಾತಿ ಪಡೆದಿರುವ ಶುಬ್ಮನ್ ಗಿಲ್, ಯುವಕರ ಹಾಟ್ ಫೆವರೀಟ್ ಆಟಗಾರ.

ಟೀಮ್ ಇಂಡಿಯಾದ ಯಂಗ್ ಪೋಸ್ಟರ್ ಬಾಯ್ ಆಗಿರುವ ಗಿಲ್, ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ನಲ್ಲಿ ತನ್ನ ಧಮಾಕೆದಾರ್ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಲ್ಲಿದ್ದಾರೆ. ಟೀಮ್ ಇಂಡಿಯಾಕ್ಕೆ ಹಲವು ಸ್ಪಾಟ್ ಗಳು ಇನ್ನು ಪ್ರಶ್ನಾರ್ಥಕವಾಗಿಯೇ ಉಳಿದಿವೆ.
ಚಿಂತೆಯಿಲ್ಲದ ಸ್ಪಾಟ್ ಅಂದರೆ ಅದುವೇ ಓಪನರ್ ಗಳದ್ದು
ಆದರೆ ಚಿಂತೆಯಿಲ್ಲದ ಸ್ಪಾಟ್ ಅಂದರೆ ಅದುವೇ ಓಪನರ್ ಗಳದ್ದು. ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಓಪನಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ. ಗಿಲ್ ಇದುವರೆಗಿನ ತನ್ನ ಅಲ್ಪಾವಧಿಯ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ವಿಶ್ವಕಪ್ ವರ್ಷದಲ್ಲಿ ಗಿಲ್ ODIಗಳಲ್ಲಿ ಆರಂಭಿಕರಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
2023 ರಲ್ಲಿ ಗಿಲ್ ಅವರ ODI ಅಂಕಿ ಅಂಶಗಳು ಎಲ್ಲ ಆರಂಭಿಕ ಆಟಗಾರರಿಗಿಂತಲೂ ಉತ್ತಮವಾಗಿದೆ. ಗಿಲ್ ಈ ವರ್ಷ ಏಕದಿನ ಪಂದ್ಯಗಳಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆರಂಭಿಕರಾಗಿ, ಅವರು ವರ್ಷದಲ್ಲಿ ಗರಿಷ್ಠ ಸರಾಸರಿ ರನ್ ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ
ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಹಶೀಮ್ ಆಮ್ಲಾ 2010 ರಲ್ಲಿ ಏಕದಿನಗಳಲ್ಲಿ ಆರಂಭಿಕರಾಗಿ 75.6 ಸರಾಸರಿಯಲ್ಲಿ ರನ್ ಗಳಿಸಿದ್ದರು. 2018 ರಲ್ಲಿ 73.3 ಸರಾಸರಿಯಲ್ಲಿ ರನ್ ಗಳಿಸಿದ ರೋಹಿತ್ ಶರ್ಮಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈಗ ಗಿಲ್ ಈ ವಿಶೇಷ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.
ಇಲ್ಲಿಯವರೆಗೆ, ಗಿಲ್ 2023 ರಲ್ಲಿ ಆರಂಭಿಕರಾಗಿ ODIಗಳಲ್ಲಿ 72.4 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದಾಗ್ಯೂ, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಿಲ್ ಹಶೀಮ್ ಆಮ್ಲಾ ಮತ್ತು ರೋಹಿತ್ ಶರ್ಮಾ ಅವರ ದಾಖಲೆಗಳನ್ನು ಮುರಿಯಬಹುದು.
ಗಿಲ್ 20 ODI ಇನ್ನಿಂಗ್ಸ್‌ಗಳಲ್ಲಿ 72.4 ರ ಸರಾಸರಿ
ಈ ವರ್ಷ, ಗಿಲ್ 20 ODI ಇನ್ನಿಂಗ್ಸ್‌ಗಳಲ್ಲಿ 72.4 ರ ಸರಾಸರಿಯಲ್ಲಿ 1230 ರನ್ ಗಳಿಸಿದ್ದು, 5 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಗಿಲ್ ಅವರ ಈ ಅಂಕಿ ಅಂಶಗಳನ್ನು ನೋಡಿದರೆ, ಅವರು ವಿಶ್ವಕಪ್ ಪಂದ್ಯಗಳ ಆಡುವ ಹನ್ನೊಂದರ ಬಳಗದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
ಗಿಲ್ 2019 ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಅವರ ಚೊಚ್ಚಲ ವರ್ಷದಲ್ಲಿ, ಅವರು 2 ODIಗಳನ್ನು ಆಡಿದ್ದರು ಮತ್ತು 2020ರಲ್ಲಿ ಕೇವಲ 1 ODI ಪಂದ್ಯವನ್ನು ಆಡಿದ್ದರು. ನಂತರ 2022ರಲ್ಲಿ 12 ಹಾಗೂ 2023ರಲ್ಲಿ ಇದುವರೆಗೆ 20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 35 ODIಗಳ ಒಟ್ಟು 35 ಇನ್ನಿಂಗ್ಸ್‌ಗಳಲ್ಲಿ ಅವರು 66.10 ರ ಸರಾಸರಿಯಲ್ಲಿ 1917 ರನ್ ಗಳಿಸಿದ್ದಾರೆ.












Click it and Unblock the Notifications