ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸಿ ಎಫ್‌ಟಿಪಿ ಪಟ್ಟಿ ಬಿಡುಗಡೆ: ಐದು ವರ್ಷಗಳಲ್ಲಿ 141 ಕ್ರಿಕೆಟ್ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ

|
Google Oneindia Kannada News

ಐಸಿಸಿ 2023-27 ಭವಿಷ್ಯದ ಪ್ರವಾಸ ಕಾರ್ಯಕ್ರಮಗಳ (ಎಫ್‌ಟಿಪಿ) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಫ್‌ಟಿಪಿ ವರದಿಯ ಪ್ರಕಾರ, ಮುಂದಿನ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ಗಳಲ್ಲಿ ಮಾರ್ಕ್ಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಭಾರತೀಯ ಕ್ರಿಕೆಟ್ ತಂಡ ಮುಂದಿನ ಐದು ವರ್ಷಗಳ ಅವಧಿಯಲ್ಲಿ 38 ಟೆಸ್ಟ್‌ಗಳು, 39 ಏಕದಿನ ಪಂದ್ಯಗಳು ಮತ್ತು 61 ಟಿ20 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಟಿ20 ಪಂದ್ಯಗಳ ಸಂಖ್ಯೆಯೇ ಹೆಚ್ಚಾಗಿರುವುದು, ಆದ್ಯತೆಗಳು ಹೇಗೆ ಬದಲಾಗುತ್ತವೆ ಎನ್ನುವುದನ್ನು ಸೂಚಿಸುತ್ತದೆ.

Asia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿAsia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿ

ಆದರೆ ಮುಂದಿನ ಐದು ವರ್ಷಗಳಲ್ಲೂ ಕೂಡ ಭಾರತ ತಂಡ ಪಾಕಿಸ್ತಾನದ ಜೊತೆ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸುವುದಿಲ್ಲ. 2023-2027ರ ಎಫ್‌ಟಿಪಿ ವೇಳಾಪಟ್ಟಿಯಲ್ಲಿ12 ಸದಸ್ಯ ರಾಷ್ಟ್ರಗಳು ಒಟ್ಟು 777 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ, ಇದರಲ್ಲಿ 173 ಟೆಸ್ಟ್‌ಗಳು, 281 ODIಗಳು ಮತ್ತು 323 ಟಿ20 ಪಂದ್ಯಗಳು ಸೇರಿವೆ. ಪ್ರಸ್ತುತ 5 ವರ್ಷಗಳಲ್ಲಿ ಒಟ್ಟಾರೆ 694 ಪಂದ್ಯಗಳನ್ನು ಆಡಲಾಗಿದೆ.

ಇದು ಐಸಿಸಿ ಪುರುಷರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಎರಡು ಋತುಗಳು, ಐಸಿಸಿ ಟೂರ್ನಿಗಳು, ದ್ವಿಪಕ್ಷೀಯ ಮತ್ತು ತ್ರಿಕೋನ ಸರಣಿಯ ಮಾದರಿಯನ್ನು ಒಳಗೊಂಡಿದೆ.

 ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ

ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ

ಭಾರತವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡರ ವಿರುದ್ಧವೂ ಐದು-ಟೆಸ್ಟ್ ಸರಣಿಗಳನ್ನು ಆಡಲಿದೆ ಮತ್ತು ಟಿ20 ಮಾದರಿಯಲ್ಲಿ ಸಾಕಷ್ಟು ಐದು ಪಂದ್ಯಗಳ ಸರಣಿಗಳಿವೆ, ಇದು ಕಿರು-ರೂಪದ ಪಂದ್ಯಗಳಿಗೆ ಪ್ರೀಮಿಯಂ ಜಾಹೀರಾತು ದರಗಳೊಂದಿಗೆ ಪ್ರಸಾರಕರ ಬೇಡಿಕೆ ಇರುವುದರಿಂದ ನಿರೀಕ್ಷೆಯಂತೆಯೇ ಟಿ20 ಮಾದರಿ ಪಂದ್ಯಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ತವರಿನ ಸರಣಿಯು 2024 ರಲ್ಲಿ ಜನವರಿ-ಮಾರ್ಚ್ ನಡುವೆ ನಡೆಯಲಿದೆ.

 150 ಪಂದ್ಯಗಳನ್ನಾಡಲಿರುವ ಬಾಂಗ್ಲಾ

150 ಪಂದ್ಯಗಳನ್ನಾಡಲಿರುವ ಬಾಂಗ್ಲಾ

ಹೊಸ ಎಫ್‌ಟಿಪಿಯಲ್ಲಿ ಬಾಂಗ್ಲಾದೇಶವು ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ದ್ವಿಪಕ್ಷೀಯ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು (150) ಆಡುತ್ತದೆ, ನಂತರ ವೆಸ್ಟ್ ಇಂಡೀಸ್ (147), ಇಂಗ್ಲೆಂಡ್ (142), ಭಾರತ (141), ನ್ಯೂಜಿಲೆಂಡ್ (135), ಆಸ್ಟ್ರೇಲಿಯಾ (132), ಶ್ರೀಲಂಕಾ (131), ಪಾಕಿಸ್ತಾನ (130), ಅಫ್ಘಾನಿಸ್ತಾನ (123), ದಕ್ಷಿಣ ಆಫ್ರಿಕಾ (113), ಐರ್ಲೆಂಡ್ (110) ಮತ್ತು ಜಿಂಬಾಬ್ವೆ (109) ಪಂದ್ಯಗಳನ್ನಾಡಲಿವೆ.

ಬಾಂಗ್ಲಾದೇಶವು ಅತಿ ಹೆಚ್ಚು ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು (59) ಆಡುತ್ತದೆ, ನಂತರ ಶ್ರೀಲಂಕಾ (52), ಐರ್ಲೆಂಡ್ (51), ಇಂಗ್ಲೆಂಡ್ (48), ವೆಸ್ಟ್ ಇಂಡೀಸ್ (48), ಪಾಕಿಸ್ತಾನ (47), ನ್ಯೂಜಿಲೆಂಡ್ (46), ಅಫ್ಘಾನಿಸ್ತಾನ (45) , ಜಿಂಬಾಬ್ವೆ (44), ಆಸ್ಟ್ರೇಲಿಯಾ (43), ಭಾರತ (42) ಮತ್ತು ದಕ್ಷಿಣ ಆಫ್ರಿಕಾ (39) ಏಕದಿನ ಪಂದ್ಯಗಳನ್ನು ಆಡಲಿವೆ.

 73 ಟಿ20 ಪಂದ್ಯಗಳನ್ನಾಡಲಿರುವ ವೆಸ್ಟ್ ಇಂಡೀಸ್

73 ಟಿ20 ಪಂದ್ಯಗಳನ್ನಾಡಲಿರುವ ವೆಸ್ಟ್ ಇಂಡೀಸ್

ಟಿ20 ಪಂದ್ಯಗಳ ವಿಷಯದಲ್ಲಿ, ವೆಸ್ಟ್ ಇಂಡೀಸ್ ಅತಿ ಹೆಚ್ಚು ದ್ವಿಪಕ್ಷೀಯ ಪಂದ್ಯಗಳನ್ನು (73) ಆಡುತ್ತದೆ ನಂತರ ಭಾರತ (61), ಅಫ್ಘಾನಿಸ್ತಾನ (57), ಬಾಂಗ್ಲಾದೇಶ (57), ನ್ಯೂಜಿಲೆಂಡ್ (57), ಪಾಕಿಸ್ತಾನ (56), ಶ್ರೀಲಂಕಾ (54), ಇಂಗ್ಲೆಂಡ್ (51), ಆಸ್ಟ್ರೇಲಿಯಾ (49), ಐರ್ಲೆಂಡ್ (47), ದಕ್ಷಿಣ ಆಫ್ರಿಕಾ (46) ಮತ್ತು ಜಿಂಬಾಬ್ವೆ (45).
ಮುಂದಿನ ಎಫ್‌ಟಿಪಿ ವೇಳಾಪಟ್ಟಿಯಲ್ಲಿ, ಭಾರತವು ವೆಸ್ಟ್ ಇಂಡೀಸ್‌ಗೆ (ಜುಲೈ-ಆಗಸ್ಟ್ 2023) 2 ಟೆಸ್ಟ್‌ಗಳು, 3 ಏಕದಿನ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಂತೆ ಪೂರ್ಣ ತ್ರಿಕೋನ ಮಾದರಿಯ ಸರಣಿಗಾಗಿ ಪ್ರಯಾಣಿಸಲಿದೆ.

 ಹೆಚ್ಚಿನ ಟೆಸ್ಟ್ ಪಂದ್ಯಗಳನ್ನಾಡಲಿರುವ ಇಂಗ್ಲೆಂಡ್

ಹೆಚ್ಚಿನ ಟೆಸ್ಟ್ ಪಂದ್ಯಗಳನ್ನಾಡಲಿರುವ ಇಂಗ್ಲೆಂಡ್

ಟೆಸ್ಟ್ ಕ್ರಿಕೆಟ್‌ನಲ್ಲಿ, ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು (43) ಆಡುತ್ತದೆ, ನಂತರ ಆಸ್ಟ್ರೇಲಿಯಾ (40), ಭಾರತ (38), ಬಾಂಗ್ಲಾದೇಶ (34), ನ್ಯೂಜಿಲೆಂಡ್ (32), ದಕ್ಷಿಣ ಆಫ್ರಿಕಾ (28), ಪಾಕಿಸ್ತಾನ (27), ವೆಸ್ಟ್ ಇಂಡೀಸ್ ( 26), ಶ್ರೀಲಂಕಾ (25), ಅಫ್ಘಾನಿಸ್ತಾನ (21), ಜಿಂಬಾಬ್ವೆ (20), ಐರ್ಲೆಂಡ್ (12) ಪಂದ್ಯಗಳನ್ನು ಆಡಲಿವೆ.
2023ರಿಂದ 2027ರವರೆಗೆ ಪ್ರತಿ ವರ್ಷವೂ ಐಸಿಸಿ ಪುರುಷರ ಟೂರ್ನಿ ಇರುತ್ತದೆ ಭಾರತದಲ್ಲಿ 2023 ಏಕದಿನ ವಿಶ್ವಕಪ್, ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ನಲ್ಲಿ 2024 ಟಿ20 ವಿಶ್ವಕಪ್, ಪಾಕಿಸ್ತಾನದಲ್ಲಿ 2025 ಚಾಂಪಿಯನ್ಸ್ ಟ್ರೋಫಿ, 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ T20 ವಿಶ್ವಕಪ್, ಮತ್ತು 2027 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.

English summary
The ICC released the 2023-27 FTP on Wednesday, in which the 12 Full Members play a total of 777 international matches,173 Tests, 281 ODIs and 323 T20Is. This includes two Border-Gavaskar series between Australia and India that will, for the first time in over 30 years, be contested over five Tests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X