Mohammed Azharuddin: ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ಗೆ ಶಾಕ್!
ಹೈದರಾಬಾದ್‌ನ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಸ್ಟ್ಯಾಂಡ್‌ನಿಂದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಹೆಸರನ್ನು ತೆಗೆದುಹಾಕುವಂತೆ ಆದೇಶವನ್ನು ಸ್ವೀಕರಿಸಿದ ಎಂದು ವರದಿಯಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಲೇ ಇದ್ದು, ಸಾಕಷ್ಟು ಕಾರಣಗಳಿಗೆ ಸುದ್ದಿ ಮಾಡುತ್ತಿದೆ. ಇದೀಗ ಹೆಸರು ತೆಗೆದುಹಾಕುವಂತೆ ಆದೇಶ ನೀಡಿರುವುದು ಮತ್ತೊಂದು ದೊಡ್ಡ ಸುದ್ದಿಯಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಉತ್ತರ ಪೆವಿಲಿಯನ್ ಸ್ಟ್ಯಾಂಡ್‌ನಿಂದ ಅಜರುದ್ದೀನ್ ಅವರ ಹೆಸರನ್ನು ತೆಗೆದುಹಾಕುವ ಆದೇಶವನ್ನು ಸ್ವೀಕರಿಸಿದೆ. ಅಜರುದ್ದೀನ್ ಸ್ಟ್ಯಾಂಡ್ ಹೆಸರಿನೊಂದಿಗೆ ಇನ್ನು ಮುಂದೆ ಟಿಕೆಟ್‌ಗಳನ್ನು ನೀಡದಂತೆ ಹೆಚ್‌ಸಿಎಗೆ ಸೂಚನೆ ಕೊಡಲಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ನೈತಿಕ ಅಧಿಕಾರಿ ಮತ್ತು ಒಂಬುಡ್ಸ್‌ಮನ್ ನ್ಯಾಯಮೂರ್ತಿ ವಿ. ಈಶ್ವರಯ್ಯ ಅವರು ಶನಿವಾರ ಈ ಆದೇಶವನ್ನು ಅಂಗೀಕರಿಸಿದ್ದಾರೆ.

ಕ್ರಿಕ್‌ಬಜ್‌ನ ವರದಿ ಮಾಡಿರುವ ಪ್ರಕಾರ, ಸಂಘರ್ಷದ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ. ಮೊಹಮ್ಮದ್ ಅಜರುದ್ಧೀನ್ 2019ರಲ್ಲಿ ಹೆಚ್‌ಸಿಎ ಅಧ್ಯಕ್ಷರಾಗಿದ್ದರು. ಅದೇ ವರ್ಷದಲ್ಲಿ ನಡೆದ ಉನ್ನತ ಸಭೆಯಲ್ಲಿ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಉತ್ತರ ಪೆವಿಲಿಯನ್ ಸ್ಟ್ಯಾಂಡ್ ಅನ್ನು "WS ಲಕ್ಷ್ಮಣ್ ಪೆವಿಲಿಯನ್" ನಿಂದ ಅವರ ಹೆಸರಿಗೆ ಮರುನಾಮಕರಣ ಮಾಡಲು ನಿರ್ಧರಿಸಲಾಯಿತು.
ಈ ವರ್ಷ ಫೆಬ್ರವರಿ 28 ರಂದು, ಹೈದರಾಬಾದ್‌ನ ಲಾರ್ಡ್ಸ್ ಕ್ರಿಕೆಟ್ ಕ್ಲಬ್ (ಎಲ್‌ಸಿಸಿ) ದೂರು ದಾಖಲಿಸಿ, ಅಜರುದ್ದೀನ್ ಅವರ ಹೆಸರನ್ನು ಸ್ಟ್ಯಾಂಡ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿತು. ನಿಯಮ 38 ರ ಪ್ರಕಾರ, ಅಪೆಕ್ಸ್ ಕೌನ್ಸಿಲ್ ಸದಸ್ಯರು ತಮ್ಮ ಪರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಇದು ಹಿತಾಸಕ್ತಿ ಸಂಘರ್ಷ ಎಂದು ವಾದಿಸಿದರು.
ಎಲ್‌ಎಲ್‌ಸಿಯು ಓಂಬುಡ್ಸ್‌ಮನ್‌ಗೆ ಉತ್ತರ ಸ್ಟ್ಯಾಂಡ್ ಅನ್ನು ಮೊಹಮ್ಮದ್ ಅಜರುದ್ದೀನ್ ಸ್ಟ್ಯಾಂಡ್ ಎಂದು ಹೆಸರಿಸುವಲ್ಲಿ ಅಜರುದ್ದೀನ್ ಅವರ ಪಕ್ಷಪಾತ ಕ್ರಮವನ್ನು ಬದಿಗಿಟ್ಟು ಅದನ್ನು "WS ಲಕ್ಷ್ಮಣ್ ಸ್ಟ್ಯಾಂಡ್ ಆಗಿ " ಮುಂದುವರಿಸಬೇಕೆಂದು ಮನವಿ ಮಾಡಿತು.
ಈಶ್ವರಯ್ಯ ಅವರು ತಮ್ಮ 25 ಪುಟಗಳ ತೀರ್ಪಿನಲ್ಲಿ, "ಸಾಮಾನ್ಯ ಸಭೆಯಿಂದ ನಿರ್ಧಾರಕ್ಕೆ ಯಾವುದೇ ಅನುಮೋದನೆ/ ಮಾರ್ಪಾಡು ಮಾಡಲಾಗಿಲ್ಲ ಎಂಬ ಅಂಶವು ಪ್ರತಿವಾದಿ ನಂ. 1 ಅಜರುದ್ದೀನ್ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸುತ್ತದೆ, ಏಕೆಂದರೆ ಪ್ರತಿವಾದಿ ನಂ. 1 ಸ್ವತಃ ಲಾಭ ಪಡೆಯುವ ಅಧಿಕಾರವನ್ನು ಮೀರಿದ್ದಾರೆ ಎಂದು ಹೇಳಿದ್ದಾರೆ.
ತೀರ್ಪಿನ ಬಳಿಕ ಎಲ್‌ಸಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಸ್ಪೋರ್ಟ್‌ಸ್ಟಾರ್ ಉಲ್ಲೇಖಿಸಿದಂತೆ, ಕ್ಲಬ್‌ನ ಖಜಾಂಚಿ ಸೋಮ್ನಾ ಮಿಶ್ರಾ, ಈ ತೀರ್ಪು ಪಾರದರ್ಶಕತೆ ಮತ್ತು ಸಮಗ್ರತೆಗಾಗಿ ನಮ್ಮ ಹೋರಾಟವನ್ನು ತೋರಿಸುತ್ತದೆ. ಅಧಿಕಾರಿಗಳು ನ್ಯಾಯಯುತವಾಗಿ ತೀರ್ಪು ನೀಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ.












Click it and Unblock the Notifications