• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃತಿಕ್ ಶೋಕೀನ್ ಮೊದಲ ಇಂಪ್ಯಾಕ್ಟ್ ಪ್ಲೇಯರ್; ಭಾರತೀಯ ಕ್ರಿಕೆಟ್‌ಗೆ ಇದು ಗೇಮ್ ಚೇಂಜರ್

|
Google Oneindia Kannada News

ಜೈಪುರ್, ಅ. 12: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಆರಂಭವಾಗಿದ್ದು, ಮೊದಲ ದಿನವೇ ಹೊಸ ಪ್ರಯೋಗ ನಡೆದಿದೆ. ಬಿಸಿಸಿಐ ಜಾರಿಗೆ ತಂದಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಆಚರಣೆಗೆ ಬಂದಿದೆ. ದೆಹಲಿ ಮತ್ತು ಮಣಿಪುರ ನಡುವಿನ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಮೊದಲ ಬಾರಿ ಬಳಕೆಗೆ ಬಂದಿತು. ದೆಹಲಿ ತಂಡದ ಸ್ಪಿನ್ನರ್ ಹೃತಿಕ್ ಶೋಕೀನ್ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಎಂದು ಇತಿಹಾಸ ನಿರ್ಮಿಸಿದರು.

ದೆಹಲಿ ಮೊದಲು ಬ್ಯಾಟ್ ಮಾಡಿ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಮಣಿಪುರ ತಂಡ ಚೇಸಿಂಗ್ ಮಾಡುವ ವೇಳೆ ದೆಹಲಿ ತಂಡ ಹೆಚ್ಚುವರಿ ಸ್ಪಿನ್ನರ್ ಆಗಿ ಹೃತಿಕ್ ಶೋಕೀನ್ ಅವರನ್ನು ಬಳಸಿಕೊಂಡಿತು. ದೆಹಲಿಯ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಹಿತೇನ್ ದಲಾಲ್ ಬದಲು ಹೃತಿಕ್ ಶೋಕೀನ್‌ರನ್ನು ಬೌಲಿಂಗ್ ದಾಳಿಗೆ ಬಳಸಿಕೊಂಡಿತು. ಅದು ವರ್ಕೌಟ್ ಕೂಡ ಆಯಿತು.

ಐನಾಕ್ಸ್ ಹಾಲ್‌ಗಳಲ್ಲಿ ಕುಳಿತು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಬೇಕೇ?ಐನಾಕ್ಸ್ ಹಾಲ್‌ಗಳಲ್ಲಿ ಕುಳಿತು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಬೇಕೇ?

ಹೃತಿಕ್ ಶೋಕೀನ್ 3 ಓವರ್ ಬೌಲ್ ಮಾಡಿ 13 ರನ್ನಿತ್ತು 2 ವಿಕೆಟ್ ಪಡೆದು ದೆಹಲಿ ಗೆಲುವನ್ನು ಸುಗಮಗೊಳಿಸಿದರು. 168 ರನ್ ಗುರಿ ಪಡೆದಿದ್ದ ಮಣಿಪುರದ ಇನ್ನಿಂಗ್ಸ್ 7 ವಿಕೆಟ್ ನಷ್ಟಕ್ಕೆ 96 ರನ್‌ಗೆ ಅಂತ್ಯಗೊಂಡು 71 ರನ್‌ಗಳಿಂದ ಸೋಲಪ್ಪಿತು.

ಮಣಿಪುರ ತಂಡ ಕೂಡ ಇಂಪ್ಯಾಕ್ಟ್ ಪ್ಲೇಯರ್ ಅವಕಾಶವನ್ನು ಬಳಸಿಕೊಂಡಿತು. ಚೇಸಿಂಗ್ ವೇಳೆ ಬಿಶ್ವೋರ್ಜಿತ್ ಕಾಂತೋಜಮ್ ಬದಲು ಅಹ್ಮದ್ ಶಾ ಅವರನ್ನು ಬ್ಯಾಟರ್ ಆಗಿ ರೀಪ್ಲೇಸ್ ಮಾಡಿತಾದರೂ ಅದು ಹೆಚ್ಚು ಸಹಾಯಕ್ಕೆ ಬರಲಿಲ್ಲ. ಅಹ್ಮದ್ ಶಾ 12 ರನ್ ಗಳಿಸಿದರು.

ನಿನ್ನೆ ನಡೆದ ದೆಹಲಿ ವರ್ಸಸ್ ಮಣಿಪುರ ಮಾತ್ರವಲ್ಲ ಎಲ್ಲಾ ಬಹುತೇಕ 18 ಪಂದ್ಯಗಳಲ್ಲೂ ಇಂಪ್ಯಾಕ್ಟ್ ಪ್ಲೇಯರ್ ಅವಕಾಶವನ್ನು ಬಳಸಿಕೊಳ್ಳಲಾಗಿತ್ತು. ಮಹಾರಾಷ್ಟ್ರ ವಿರುದ್ಧ 99 ರನ್‌ಗಳಿಂದ ಗೆದ್ದ ಕರ್ನಾಟಕ ತಂಡ ಎಕ್ಸ್‌ಟ್ರಾ ಬೌಲರ್ ಆಗಿ ಶ್ರೇಯಸ್ ಗೋಪಾಲ್‌ರನ್ನು ಬಳಸಿಕೊಂಡಿತು. ಶ್ರೇಯಸ್ ಗೋಪಾಲ್ 3 ಓವರ್ ಬೌಲ್ ಮಾಡಿ 15 ರನ್ನಿತ್ತು 1 ವಿಕೆಟ್ ಪಡೆದು ತಕ್ಕಮಟ್ಟಿಗೆ ಯಶಸ್ವಿಯಾದರು.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಅವಿರೋಧ ಆಯ್ಕೆ? ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಬ್ರಿಜೇಶ್ ಪಟೇಲ್ ಹೊರಕ್ಕೆ?ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಅವಿರೋಧ ಆಯ್ಕೆ? ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಬ್ರಿಜೇಶ್ ಪಟೇಲ್ ಹೊರಕ್ಕೆ?

ಬಿಸಿಸಿಐ ಹೊಸ ನಿಯಮ

ಇದು ಕ್ರಿಕೆಟ್ ಆಟದ ರೋಚಕತೆ ಹೆಚ್ಚಿಸಲು ಬಿಸಿಸಿಐ ಜಾರಿಗೆ ತಂದಿರುವ ಹೊಸ ನಿಯಮ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಟಿ20 ಲೀಗ್‌ನಲ್ಲಿ ಇದು ಚಾಲನೆಯಲ್ಲಿದೆ. ಸದ್ಯ ಭಾರತದಲ್ಲಿ ಸಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಐಪಿಎಲ್ 2023 ಟೂರ್ನಿಯಲ್ಲೂ ಇದು ಅಳವಡಿಕೆಯಾಗಲಿದೆ.

Hrithik Shokeen First Impact Player in India, Know Whats This New Game Changer Rule

ಬಿಸಿಸಿಐಗೆ ಹೊಸದೇನಾದರೂ ಪರಿಚಯಿಸುವ ಉದ್ದೇಶವಿದ್ದರೆ ಮುಷ್ತಾಕ್ ಅಲಿ ಟೂರ್ನಿ ಒಂದು ರೀತಿಯಲ್ಲಿ ಪ್ರಯೋಗಶಾಲೆಯಂತಾಗುತ್ತದೆ. ಅಂತೆಯೇ, ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ತರುವ ಮುನ್ನ ಎಸ್‌ಎಂಎಟಿಯಲ್ಲಿ ಇದರ ಪ್ರಯೋಗ ನಡೆದಿದೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ರೂಲ್?

ಒಂದು ತಂಡ ಟಾಸ್‌ಗೆ ಮುನ್ನ 11 ಆಟಗಾರರ ಜೊತೆ ನಾಲ್ವರು ಸಬ್‌ಸ್ಟಿಟ್ಯೂಟ್‌ಗಳ ಪಟ್ಟಿ ಕೊಡಬೇಕು. ಈ ನಾಲ್ವರು ಎಕ್ಸ್‌ಟ್ರಾ ಆಟಗಾರರಲ್ಲಿ ಒಬ್ಬರನ್ನು ಪಂದ್ಯದಲ್ಲಿ ಬಳಸಿಕೊಳ್ಳಬಹುದು. ಇವರನ್ನೇ ಇಂಪ್ಯಾಕ್ಟ್ ಪ್ಲೇಯರ್ ಎನ್ನುವುದು. ಒಂದು ಇನ್ನಿಂಗ್ಸ್‌ನ 14ನೇ ಓವರ್ ಮುಗಿಯುವುದರೊಳಗೆ ಸಬ್‌ಸ್ಟಿಟ್ಯೂಟ್ ಪ್ಲೇಯರ್ ಅನ್ನು ರೀಪ್ಲೇಸ್ಮೆಂಟ್ ಆಗಿ ತರಬಹುದು. ಇದು ಬ್ಯಾಟಿಂಗ್ ವೇಳೆ ಬೇಕಾದರೆ ತರಬಹುದು, ಅಥವಾ ಬೌಲಿಂಗ್ ವೇಳೆ ಬೇಕಾದರೂ ತರಬಹುದು.

ಆದರೆ, ಇಡೀ ಪಂದ್ಯದಲ್ಲಿ ಒಂದು ತಂಡ ಒಮ್ಮೆ ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಕೆ ಮಾಡಲು ಸಾಧ್ಯ. ಅದೂ ಒಂದು ಇನ್ನಿಂಗ್ಸ್‌ನ 14ನೇ ಓವರ್ ಮುಗಿಯುವುದರೊಳಗೆ ಇದರ ಬಳಕೆಯಾಗಬೇಕು.

ಒಂದು ವೇಳೆ 20 ಓವರ್ ಬದಲು ಪಂದ್ಯ 10 ಓವರ್‌ನ ಹಣಾಹಣಿಯಾಗಿ ನಿರ್ಧಾರಿತವಾದರೆ ಆಗ ಇಂಪ್ಯಾಕ್ಟ್ ಪ್ಲೇಯರ್ ಅವಕಾಶ ಇರುವುದಿಲ್ಲ. ಪಂದ್ಯ 20 ಓವರ್‌ನದ್ದಾಗಿಯೇ ಆರಂಭಗೊಂಡು ಮಳೆ ಮತ್ತಿತರ ಕಾರಣದಿಂದ ಕಡಿಮೆ ಓವರ್‌ಗೆ ಮೊಟಕುಗೊಂಡಾಗ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಬಹುದು.

(ಒನ್ಇಂಡಿಯಾ ಸುದ್ದಿ)

English summary
Delhi becomes first team to use newly formed impact player rule in its Syed Mushtaq Ali T20 Trophy match against Manipur on October 11th. Hrithik Shokeen becomes first impact player.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X