
ಬಟ್ಲರ್ 162; ಇಂಗ್ಲೆಂಡ್ 498, ಮೂರು ಸಿಂಹಗಳ ಡಿಚ್ಚಿಗೆ ತತ್ತರಿಸಿದ ಡಚ್ಚರು!
ಅಮ್ಸ್‌ಟೆಲ್ವೀನ್(ನೆದರ್ಲೆಂಡ್ಸ್), ಜೂನ್ 17: ಜಾಸ್ ಬಟ್ಲರ್, ಪೀಟರ್ ಸಾಲ್ಟ್ ಮತ್ತು ಡೇವಿಡ್ ಮಲನ್ ಅವರ ಭರ್ಜರಿ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 498 ರನ್ ಗಳಿಸುವ ಮೂಲಕ ವಿಶ್ವದಾಖಲೆಗೆ ಪಾತ್ರವಾಗಿದೆ.
ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗಳೆದುಕೊಂಡು 498 ರನ್‌ಗಳಿಸಿತು. ನೆದರ್ಲೆಂಡ್ಸ್ ತಂಡದ ಬೌಲರ್‌ಗಳ ದಾಳಿಯನ್ನು ಮನಬಂದಂತೆ ಇಂಗ್ಲೆಂಡ್ ದಾಂಡಿಗರು ವಿಶ್ವದಾಖಲೆ ಮೊತ್ತ ಪೇರಿಸಲು ನೆರವಾದರು.
ಐರ್ಲೆಂಡ್ ಪ್ರವಾಸ: ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ನಾಯಕ
ಆರಂಭಿಕರಾಗಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕೇವಲ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಬ್ಬ ಆರಂಭಿಕ ಪೀಟರ್ ಸಾಲ್ಟ್ 93 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 122 ರನ್, ಡೇವಿಡ್ ಮಲನ್ 109 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 125 ರನ್, ಜಾಸ್ ಬಟ್ಲರ್ ಕೇವಲ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 14 ಸಿಕ್ಸರ್‌ಗಳ ಸಹಿತ ಅಜೇಯ 162 ರನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ 22 ಎಸೆತಗಳಲ್ಲಿ ಅಜೇಯ 66 ರನ್‌ಗಳಿಸಿ ವಿಶ್ವದಾಖಲೆ ಮೊತ್ತಕ್ಕೆ ನೆರವಾದರು.
ಇಂಗ್ಲೆಂಡ್ ಪ್ರವಾಸದಿಂದಲೂ ರಾಹುಲ್ ಔಟ್, ಜರ್ಮನಿಯಲ್ಲಿ ಸರ್ಜರಿ

ಮುಂದುವರಿದ ಬಟ್ಲರ್ ಅಬ್ಬರ
2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಜಾಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಫೈನಲ್ ತಲುಪಲು ನಿರ್ಣಾಯಕ ಪಾತ್ರವಹಿಸಿದ್ದರು. ಅವರು 17 ಪಂದ್ಯಗಳಲ್ಲಿ 4 ಶತಕ ಮತ್ತು 4 ಅರ್ಧಶತಕಗಳ ನೆರವಿನಿಂದ 863 ರನ್‌ಗಳಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಸೀಸನ್‌ನಲ್ಲಿ ದಾಖಲಿಸಿದ 2ನೇ ಗರಿಷ್ಠ ಮೊತ್ತವಾಗಿತ್ತು. ವಿರಾಟ್ ಕೊಹ್ಲಿ 2016ರಲ್ಲಿ 973 ರನ್‌ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ ಟಿ20 ಶೈಲಿಯಲ್ಲೆ ಬ್ಯಾಟಿಂಗ್ ಮಾಡಿದ ಬಟ್ಲರ್ 231 ರ ಸ್ಟ್ರೈಕ್‌ರೇಟ್‌ನಲ್ಲಿ 162 ರನ್‌ಗಳಿಸಿದರು.
|
ಗರಿಷ್ಠ ರನ್ ಪಟ್ಟಿಯಲ್ಲಿ ಇಂಗ್ಲೆಂಡ್‌ಗೆ ಮೊದಲ 3 ಸ್ಥಾನ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ 3 ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಾನಿ ಬೈರ್‌ಸ್ಟೋವ್(139) ಮತ್ತು ಅಲೆಕ್ಸ್ ಹೇಲ್ಸ್(147) ಶತಕಗಳ ನೆರವಿನಿಂದ 481 ರನ್‌ಗಳಿಸಿ ವಿಶ್ವದಾಖಲೆ ಬರೆದಿತ್ತು. ಈ ಪಂದ್ಯವನ್ನು 242 ರನ್‌ಗಳಿಂದ ಗೆಲುವು ಸಾಧಿಸಿತ್ತು. ಇದಕ್ಕೂ ಮುನ್ನ 2016ರಲ್ಲಿ ಅದೇ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ 444 ರನ್ ಸಿಡಿಸುವ ಮೂಲಕ ಶ್ರೀಲಂಕಾ(443) ಹೆಸರಿದಲ್ಲಿ 10 ವರ್ಷಗಳ ವಿಶ್ವದಾಖಲೆಯನ್ನು ಬ್ರೇಕ್ ಮಾಡಿ ಮಾಡಿತ್ತು.

ಕಳೆದ 7 ವರ್ಷಗಳಲ್ಲಿ 5ನೇ ಬಾರಿ 400ರನ್
ಕ್ರಿಕೆಟ್ ಜನಕರಾಗಿರುವ ಇಂಗ್ಲೆಂಡ್ ತಂಡ 2015ರವರೆಗೂ ಒಮ್ಮೆಯೂ 400ರ ಗಡಿದಾಟಿರಲಿಲ್ಲ. ಆದರೆ 2015ರ ನಂತರ ತಮ್ಮ ಆಟವನ್ನು ಬದಲಾಯಿಸಿಕೊಂಡಿತ್ತು. ಆರಂಭದಿಂದಲೂ ಕೊನೆಯವರೆಗೂ ಹೊಡಿಬಡಿ ಆಟವನ್ನು ಆಡಲಾರಂಭಿಸಿದ ಇಂಗ್ಲೆಂಡ್ ತಂಡ ನಂತರ 5 ಬಾರಿ 400ರನ್ ಗಡಿ ದಾಟಿದೆ. 2015ರ ನಂತರ ಬೇರೆ ಯಾವ ತಂಡವೂ ಕನಿಷ್ಠ ಒಮ್ಮೆಯೂ ಕೂಡ 400 ರನ್‌ಗಳಿಸಿಲ್ಲ. ಇಂಗ್ಲೆಂಡ್ 4 ಬಾರಿ ಈ ಈ ಸಾಧನೆ ಮಾಡಿದೆ.

ಹೆಚ್ಚು ಬಾರಿ 400 ರನ್‌ಗಳಿಸಿದ 2ನೇ ತಂಡ
ಈ ಪಂದ್ಯದಲ್ಲಿ 400ರನ್ ಗಟಿ ದಾಟುವ ಮೂಲಕ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ 2ನೇ ತಂಡ ಎಂಬ ದಾಖಲೆಯನ್ನು ಭಾರತದೊಂದಿಗೆ ಹಂಚಿಕೊಂಡಿತು. ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ 5 ಬಾರಿ 400ರ ಗಡಿ ದಾಟಿದ್ದವೆ. ದಕ್ಷಿಣ ಅಫ್ರಿಕಾ ತಂಡ 6 ಬಾರಿ ಈ ಸಾಧನೆ ಮಾಡಿ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದೆ.