ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹೀನಾಯ ಸೋಲು ಕಂಡ ಕ್ರಿಕೆಟ್ ತಂಡಗಳ ಪಟ್ಟಿ ಇಲ್ಲಿದೆ!
ಭಾರತದ ನೆಲದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್-2023 ಹಲವು ದಾಖಲೆಗಳ ನಿರ್ಮಾಣ ಮಾಡಿದೆ. ಅದರಲ್ಲೂ ಭಾರತ ತಂಡ ಗೆಲುವಿನ ಓಟ ಮುಂದುವರಿಸಿ, ಹೊಸ ಇತಿಹಾಸ ನಿರ್ಮಿಸುತ್ತಿದೆ. ಇಂದು ಲಂಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ, ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಶ್ರೀಲಂಕಾ 55 ರನ್‌ಗೆ ಆಲೌಟ್ ಆಗಿದ್ದು, ಭೀಕರ ಸೋಲು ಕಂಡಿದೆ. ಹಾಗಾದರೆ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೋರ್ ಮಾಡಿರುವ ತಂಡಗಳು ಯಾವುವು ಗೊತ್ತಾ?
ಏಕದಿನ ಕ್ರಿಕೆಟ್ ಅಂದ್ರೆ ಗತ್ತು ಇದೆ, ಅದರಲ್ಲೂ ವಿಶ್ವಕಪ್ ಎಂಬ ಹಬ್ಬವು ಶುರುವಾಗಿದ್ದು ಇದೇ ಏಕದಿನ ಮಾದರಿಯ ಪಂದ್ಯಗಳಿಂದ. 1975 ರಲ್ಲಿ ಆರಂಭವಾದ ಕ್ರಿಕೆಟ್ ವಿಶ್ವಕಪ್ ಹಬ್ಬವು, ಈವರೆಗೂ ಒಟ್ಟಾರೆ 12 ವಿಶ್ವಕಪ್ ಟೂರ್ನಿಗಳನ್ನ ಕಂಡಿದೆ. ಈಗಿನ ವಿಶ್ವಕಪ್‌ನ ಲೆಕ್ಕಕ್ಕೆ ತೆಗೆದುಕೊಂಡರೆ ಈ ಸಂಖ್ಯೆ 13 ಆಗುತ್ತದೆ. 1975, 1979, 1983, 1987, 1992, 1996, 1999, 2003, 2007, 2011, 2015, 2019, 2023 ರಲ್ಲಿ ನಡೆದಿರುವ ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡಗಳು ಯಾವು ಗೊತ್ತಾ? ಅತಿ ಕಳಪೆ ರನ್ ಕಲೆಹಾಕಿದ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ!
| ದೇಶ | ರನ್ | ಎದುರಾಳಿ ತಂಡ | ಯಾವ ವಿಶ್ವಕಪ್? | |
| 1 | ಕೆನಡಾ | 36 | ಶ್ರೀಲಂಕಾ | 2003 |
| 2 | ಕೆನಡಾ | 45 | ಇಂಗ್ಲೆಂಡ್ | 1979 |
| 3 | ನಮೀಬಿಯಾ | 45 | ಆಸ್ಟ್ರೇಲಿಯಾ | 2003 |
| 4 | ಶ್ರೀಲಂಕಾ | 55 | ಭಾರತ | 2023 |
| 5 | ಬಾಂಗ್ಲಾದೇಶ | 58 | ವೆಸ್ಟ್ ಇಂಡೀಸ್ | 2011 |
| 6 | ಸ್ಕಾಟ್‌ಲ್ಯಾಂಡ್ | 68 | ವೆಸ್ಟ್ ಇಂಡೀಸ್ | 1999 |
| 7 | ಕೀನ್ಯಾ | 69 | ನ್ಯೂಜಿಲೆಂಡ್ | 2011 |
| 8 | ಪಾಕಿಸ್ತಾನ | 74 | ಇಂಗ್ಲೆಂಡ್ | 1992 |
| 9 | ಐರ್ಲ್ಯಾಂಡ್ | 77 | ಶ್ರೀಲಂಕಾ | 2007 |
| 10 | ಬಾಂಗ್ಲಾದೇಶ | 78 | ದಕ್ಷಿಣ ಆಫ್ರಿಕಾ | 2011 |
ಹೀಗೆ ಭಾರತ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ, ಇತಿಹಾಸ ನಿರ್ಮಿಸಿ ಗಮನ ಸೆಳೆದಿದೆ. ಹಾಗೆ ಶ್ರೀಲಂಕಾ ತಂಡ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸವೇ ತಿರುಗಿ ನೋಡುವಂತೆ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಅದರಲ್ಲೂ ಶ್ರೀಲಂಕಾ ತಂಡದ ಇಂದಿನ ಸ್ಕೋರ್ ಬೋರ್ಡ್ ಥೇಟ್ ಲ್ಯಾಂಡ್‌ಲೈನ್ ನಂಬರ್ ರೀತಿ ಕಾಣುತ್ತಿತ್ತು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಹೇಗಿತ್ತು ಶ್ರೀಲಂಕಾ ಬ್ಯಾಟಿಂಗ್?
ಭಾರತ ನೀಡಿದ್ದ 358 ರನ್‌ಗಳ ಗುರಿ ಬೆನ್ನುಹತ್ತಿದ್ದ ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಲಂಕಾ ಆಟಗಾರರು ಒಬ್ಬರ ನಂತರ ಒಬ್ಬರು ಎನ್ನುತ್ತಾ ಪೆವಿಲಿಯನ್ ಪರೇಡ್ ನಡೆಸಿದರು. ಲಂಕಾ ತಂಡ ಹೀನಾಯ ಸೋಲು ಕಂಡಿತು. ಶ್ರೀಲಂಕಾ ಬ್ಯಾಟ್ಸ್‌ಮನ್ಸ್ ಗಳಿಸಿದ ಸ್ಕೋರ್ ನೋಡುವುದಾದ್ರೆ ಆರಂಭಿಕರಾಗಿ ಬಂದ ಪಾತುಮ್ ನಿಸಾಂಕ & ದಿಮುತ್ ಕರುಣರತ್ನೆ ಸೊನ್ನೆ ಸುತ್ತಿ ಹೋದರು. ಆ ನಂತರ ಬಂದ ಆಟಗಾರರು ಈ ಆಟಗಾರರನ್ನೇ ಫಾಲೋ ಮಾಡಿ ಗೂಡು ಸೇರಿದರು.

ಹೇಗಿತ್ತು ಶ್ರೀಲಂಕಾ ಸ್ಕೋರ್ ಬೋರ್ಡ್?
ಹೀಗೆ ಶ್ರೀಲಂಕಾ ತಂಡದ ಮೊದಲ ಬ್ಯಾಟ್ಸ್‌ಮನ್‌ನಿಂದ ಹಿಡಿದು ಕೊನೇ ಬ್ಯಾಟ್ಸ್‌ಮನ್ ಗಳಿಸಿದ ಸ್ಕೋರ್ ನೋಡುವುದಾದ್ರೆ, 0, 0, 1, 0, 1, 12, 0, 0, 12, 14, 5 ಆಗಿತ್ತು. ಭಾರತ ನೀಡಿದ್ದ 358 ರನ್ ಬೃಹತ್ ಗುರಿ ಬೆನ್ನುಹತ್ತಿದ ಲಂಕಾ, ಕೇವಲ 55 ರನ್ ಗಳಿಸಿ ಆಲೌಟ್ ಆಗಿ ವಿಶ್ವಕಪ್ ಅಖಾಡದಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ. ಹಾಗೇ ಭಾರತ ತಂಡ 302 ರನ್ ಬೃಹತ್ ಅಂತರದ ಗೆಲುವು ದಾಖಲಿಸಿ, ಅಧಿಕೃತವಾಗಿ ಸೆಮೀಸ್ ಅಖಾಡದಲ್ಲಿ ತನ್ನ ಸ್ಥಾನವನ್ನ ಪಕ್ಕಾ ಮಾಡಿಕೊಂಡಿದೆ.












Click it and Unblock the Notifications