Harshit Rana: ಬ್ಲ್ಯೂ ಜೆರ್ಸಿ ತೊಡಲು ಈ ಮೂವರೇ ಕಾರಣ: ಹರ್ಷಿತ್ ರಾಣಾ

ಐಪಿಎಲ್‌ 2024ರಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಕದ್ದ ಪ್ಲೇಯರ್‌ಗಳಲ್ಲಿ ಕೆಕೆಆರ್ ತಂಡದ ವೇಗದ ಬೌಲರ್‌ ಹರ್ಷಿತ್‌ ರಾಣಾ ಅವರಿಗೆ ಮೊದಲ ಸ್ಥಾನ. ಇವರು ತಮ್ಮ ಬಿಗುವಿನ ದಾಳಿಯಿಂದಲೇ ಎದುರಾಳಿಗಳನ್ನು ಕಾಡಿದ ಆಟಗಾರ. ಇವರ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಶ್ರೀಲಂಕಾ ಪ್ರವಾಸದಲ್ಲಿ ರಾಣಾ ಬ್ಲ್ಯೂ ಜೆರ್ಸಿ ತೊಡುವ ಅವಕಾಶ ಪಡೆದಿದ್ದಾರೆ.

ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ವೇಗದ ಬೌಲರ್ ಹರ್ಷಿತ್ ರಾಣಾ ಟೀಂ ಇಂಡಿಯಾಕ್ಕೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಸೌತ್ ಎಕ್ಸ್‌ಟೆನ್ಶನ್‌ನ 22 ವರ್ಷದ ವೇಗದ ಬೌಲರ್ ಹರ್ಷಿತ್, ಜೂನಿಯರ್ ಹಂತದಲ್ಲಿ ಅವಕಾಶಗಳನ್ನು ವಂಚಿತರಾದರು. ಈ ವರ್ಷ ಅವರ ಲಕ್ ಬದಲಾಗಿದೆ.

Harshit Rana Credits Gautam Gambhir Above Everyone Else for His Success

ಈ ಮೂವರೇ ಕಾರಣ

ಭಾರತ ತಂಡಕ್ಕೆ ಆಯ್ಕೆಆದ ಬಗ್ಗೆ ಹರ್ಷಿತ್ ರಾಣಾ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ನಂಬುತ್ತೇನೆ. ಆದರೆ ವಯೋಮಾನದ ತಂಡದಲ್ಲಿ ನನ್ನನ್ನು ನಿರ್ಲಕ್ಷಿಸಿದಾಗಲೆಲ್ಲಾ ನಾನು ಎದೆಗುಂದಿತ್ತಿರುಲಿಲ್ಲ. ಮತ್ತು ನನ್ನ ಕೋಣೆಯಲ್ಲಿ ಕುಳಿತು ಅಳುತ್ತಿದ್ದೆ. ನನ್ನ ತಂದೆ ಪ್ರದೀಪ್ ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ನನ್ನ ಕಠಿಣ ಪರಿಶ್ರಮಕ್ಕಾಗಿ ನಾನು ಮೂರು ಜನರನ್ನು ಸ್ಮರಿಸಬೇಕು. ಅದರಲ್ಲಿ ನನ್ನ ತಂದೆ, ನನ್ನ ವೈಯಕ್ತಿಕ ಕೋಚ್ ಅಮಿತ್ ಭಂಡಾರಿ ಸರ್ (ಮಾಜಿ ಭಾರತೀಯ ಮತ್ತು ದೆಹಲಿ ವೇಗದ ಬೌಲರ್) ಮತ್ತು ಗೌತಿ ಭಯ್ಯಾ (ಗೌತಮ್ ಗಂಭೀರ್) ಸೇರಿದ್ದಾರೆ ಎಂದಿದ್ದಾರೆ.

ಮನಸ್ಥಿತಿ ಬದಲಿಸಿದ ಕೋಚ್‌

'ಆಟದ ಬಗೆಗಿನ ನನ್ನ ದೃಷ್ಟಿಕೋನ ಬದಲಾಗಿದ್ದರೆ, ನನ್ನ ಮನಸ್ಥಿತಿಯನ್ನು ಬದಲಿಸಿದ್ದು ಕೆಕೆಆರ್ ತಂಡದ ಕೋಚ್‌ ಗೌತಮ್ ಗಂಭೀರ್‌.. ಉನ್ನತ ಮಟ್ಟದಲ್ಲಿ ನಿಮಗೆ ಕೌಶಲ್ಯ ಬೇಕು ಆದರೆ ಕೌಶಲ್ಯಕ್ಕಿಂತ ಹೆಚ್ಚಾಗಿ ಒತ್ತಡವನ್ನು ನಿಭಾಯಿಸುವ ಶಕ್ತಿ ಇರಬೇಕು ಎಂದು ಕಿವಿ ಮಾತು ಹೇಳಿದ್ದರು. ನಿನ್ನ ಮೇಲೆ ನನಗೆ ನಂಬಿಕೆ ಇದೆ ಎಂದು ಗೌತಮ್‌ ಯಾವಾಗಲೂ ನನಗೆ ತಿಳಿಸುತ್ತಿದ್ದರು.

Harshit Rana Credits Gautam Gambhir Above Everyone Else for His Success

ತಂದೆಯೊಂದಿಗೆ ಸಂತಸ

ತನ್ನ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ತಂದೆಯೊಂದಿಗೆ ವೇಗಿ ಹರ್ಷಿತ್ ರಾಣಾ ಸಂತಸವನ್ನು ಹಂಚಿಕೊಂಡಿದ್ದಾರೆ. ಹರ್ಷಿತ್ ರಾಣಾ, ತಂದೆಯನ್ನು ಎತ್ತಿಕೊಂಡಿರುವ ಖುಷಿಯ ಕ್ಷಣದ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಐಪಿಎಲ್‌ನಲ್ಲಿ ಸಾಧನೆ

2024ರ ಐಪಿಎಲ್‌ನಲ್ಲಂತೂ ಹರ್ಷಿತಾ ರಾಣಾ ಕಮಾಲ್‌ ಪ್ರದರ್ಶನ ನೀಡಿದ್ದಾರೆ. ಇವರು ಆಡಿರುವ 13 ಪಂದ್ಯಗಳಲ್ಲಿ 9.08ರ ಎಕನಾಮಿಯಲ್ಲಿ 19 ವಿಕೆಟ್‌ ಪಡೆದಿದ್ದಾರೆ. ಇವರ ಬಿಗುವಿನ ಲೈನ್ ಹಾಗೂ ಲೆಂಥ್‌ ಅರ್ಥ ಮಾಡಿಕೊಳ್ಳಲು ಎದುರಾಳಿ ಬ್ಯಾಟರ್‌ಗಳೇ ಹೈರಾಣಾಗಿದ್ದಾರೆ. ಅಲ್ಲದೆ ಈ ಬಾರಿ ಕೆಕೆಆರ್‌ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಇವರು ಮಹತ್ವದ ಕಾರಣರು.

ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಶ್ರೀಲಂಕಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಹರ್ಷಿತ್ ರಾಣಾ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+