Hardik Pandya: ಎಲ್ಲಿ ಅವಮಾನ ಆಗಿತ್ತೋ ಅಲ್ಲೇ ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ
ಕೆಲವು ತಿಂಗಳ ಹಿಂದಷ್ಟೇ ಆತ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್. ಆತನದೇ ತವರಿನ ಕ್ರೀಡಾಂಗಣದಲ್ಲಿ ಕ್ರೀಡಾಭಿಮಾನಿಗಳು ಅವಮಾನ ಮಾಡಿದ್ದರು, ಆಡಿಕೊಂಡಿದ್ದರು, ನಾಯಿಗೆ ಕೂಡ ಹೋಲಿಕೆ ಮಾಡಿದ್ದರು. ಎಲ್ಲಾ ನೋವನ್ನು ನುಂಗಿ ಆತ ನಗುತ್ತಲೇ ಇದ್ದ. ಎಲ್ಲಾ ಟೀಕೆಗಳಿಗೂ ಮೌನವಾಗಿದ್ದ. ಆದರೆ ಅದೇ ಮೈದಾನದಲ್ಲಿ ಆತ ಇಂದು ಹೀರೋ, ಜನ ಅವನ ಹೆಸರು ಕಿರುಚಿದರು. ಸನ್ಮಾನ ಮಾಡಿದರೆ. ಯಾವ ಅಂಗಳದಲ್ಲಿ ಆತ ಸೋತಿದ್ದನೋ, ಅದೇ ಅಂಗಳಕ್ಕೆ ಅವ ಗೆದ್ದು ಕಾಲಿಟ್ಟ, ಅವನೇ ಹಾರ್ದಿಕ್ ಪಾಂಡ್ಯ.
ವಾಂಖೆಡೆ ಕ್ರೀಡಾಂಗಣಲ್ಲಿ ಜನ ಇಂದು ಕಿಕ್ಕಿರಿದು ತುಂಬಿದ್ದರು. ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಭಾರತ ಪ್ರಶಸ್ತಿ ಗೆಲ್ಲಲು ಪಾಂಡ್ಯ ಪಾತ್ರ ಮುಖ್ಯವಾಗಿತ್ತು. ಜನ ಪಾಂಡ್ಯಗೆ ಜೈಕಾರ ಕೂಗಿ ಬೆಂಬಲ ನೀಡಿದರು. ಒಂದು ಕಾಲದಲ್ಲಿ ಟೀಕೆಯಿಂದ ಪ್ರತಿಧ್ವನಿಸುತ್ತಿದ್ದ ಅದೇ ವಾಂಖೆಡೆ ಸ್ಟೇಡಿಯಂ ಈಗ "ಹಾರ್ದಿಕ್-ಹಾರ್ದಿಕ್" ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು.
Redemption of Hardik Pandya 🔥🔥
— BALA (@erbmjha) July 4, 2024
pic.twitter.com/focHWgnNGk
ಐಪಿಎಲ್ 2024ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಕಸಿದುಕೊಂಡ ಎನ್ನುವ ಒಂದೇ ಕಾರಣಕ್ಕೆ ಪಾಂಡ್ಯ ವಿಲನ್ ಆಗಿದ್ದ. ತಂಡದ ಕೆಟ್ಟ ಪ್ರದರ್ಶನ, ಅಭಿಮಾನಿಗಳ ಅವಹೇಳನ, ತಂಡದಲ್ಲಿನ ಒಡಕು ಆತನನ್ನು ಹೈರಾಣಾಗಿಸಿತ್ತು. ಎಲ್ಲಾ ಒತ್ತಡದ ನಡುವೆ ಆತ ಉತ್ತಮ ಪ್ರದರ್ಶನ ಕೂಡ ನೀಡಲು ಸಾಧ್ಯವಾಗಲಿಲ್ಲ.

ಪಾಂಡ್ಯ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಬೇಡ ಎನ್ನುವ ಕೂಗು ಶುರುವಾಗಿತ್ತು. ಆದರೂ ಆತನ ಸಾಮರ್ಥ್ಯ ಗೊತ್ತಿದ್ದ ಆಯ್ಕೆದಾರರು ಆತನನ್ನು ತಂಡಕ್ಕೆ ಆಯ್ಕೆ ಮಾಡಿದ್ದರು. ಐಪಿಎಲ್‌ನಲ್ಲಿ ತಣ್ಣಗಿದ್ದ ಪಾಂಡ್ಯ, ವಿಶ್ವಕಪ್‌ನಲ್ಲಿ ಸಿಡಿದ, ಬ್ಯಾಟಿಂಗ್ ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ. ಭಾರತ ಹಲವು ಪಂದ್ಯಗಳಲ್ಲಿ ಗೆಲ್ಲಲು ಪಾಂಡ್ಯ ಪಾತ್ರ ಬಹುಮುಖ್ಯವಾಗಿತ್ತು.
ಫೈನಲ್‌ನಲ್ಲಿ ಭಾರತ ಇನ್ನೇನು ಸೋಲುತ್ತದೆ ಎನ್ನುವಾಗಲೇ ಕ್ಲಾಸೆನ್ ವಿಕೆಟ್ ಪಡೆದ ಪಾಂಡ್ಯ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಅದಾದ ಬಳಿಕ ನಡೆದದ್ದು ಈಗ ಇತಿಹಾಸ. ಕೊನೆಯ ಓವರ್ ನಲ್ಲಿ ಪಾಂಡ್ಯ ಮಿಲ್ಲರ್ ಔಟ್ ಮಾಡಿದರು. ಭಾರತದ ಗೆಲುವನ್ನು ಖಚಿತಪಡಿಸಿದರು.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾರ್ದಿಕ್ 11 ವಿಕೆಟ್ ಮತ್ತು 114 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ಅದ್ಭುತ ಪ್ರದರ್ಶನ ನೀಡುವ ಮೂಲಕ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಟಿ20 ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.












Click it and Unblock the Notifications