ಸೋಲಿನ ಬೇಸರ ಮರೆತು ವೈಭವ್ ಸೂರ್ಯವಂಶಿ ಬೆನ್ನು ತಟ್ಟಿ ಕ್ರೀಡಾ ಸ್ಫೂರ್ತಿ ಮೆರೆದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ

Hardik Pandya: ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕೇವಲ ರನ್‌ಗಳ ಸುರಿಮಳೆಯಾಗಲಿಲ್ಲ, ಬದಲಿಗೆ ಕ್ರೀಡಾ ಸ್ಫೂರ್ತಿಯ ಅದ್ಭುತ ದೃಶ್ಯವೂ ಕಂಡುಬಂದಿತು. ಮುಂಬೈ ಇಂಡಿಯನ್ಸ್ ತಂಡವು ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ನಾಯಕ ಹಾರ್ದಿಕ್ ಪಾಂಡ್ಯ ಅವರು ತೋರಿದ ಒಂದು ಸಣ್ಣ ನಡೆ ಈಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

15 ವರ್ಷದ ವೈಭವ್ ಸೂರ್ಯವಂಶಿ ಅವರು, ಮುಂಬೈ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅದರಲ್ಲೂ ವಿಶ್ವದ ನಂಬರ್ 1 ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಎಸೆತಗಳಿಗೆ ಬ್ಯಾಟ್‌ ಮೂಲಕ ದಿಟ್ಟ ಉತ್ತರ ನೀಡಿದ ವೈಭವ್ ಆಟ ಕಂಡು ಹಾರ್ದಿಕ್ ಪಾಂಡ್ಯ ಬೆರಗಾದರು. ಪಂದ್ಯ ಮುಗಿದ ಬಳಿಕವೇ ಹಾರ್ದಿಕ್ ಅವರು ವೈಭವ್ ಬಳಿ ತೆರಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಮಾತ್ರವಲ್ಲದೆ, ಅವರ ಅದ್ಭುತ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Hardik Pandya Praises Teen Sensation Vaibhav Suryavanshi After MI vs RR Clash in IPL 2026 Huge Viral

ಕ್ರೀಡಾ ಸ್ಫೂರ್ತಿ ಮೆರೆದ ಹಾರ್ದಿಕ್ ಪಾಂಡ್ಯ

ತನ್ನದೇ ತಂಡದ ಪ್ರಮುಖ ಬೌಲರ್ ಅನ್ನು ದಂಡಿಸಿದ ಎದುರಾಳಿ ತಂಡದ 15 ವರ್ಷದದ ಬಾಲಕನ ಬೆನ್ನಿಗೆ ನಿಂತ ಹಾರ್ದಿಕ್ ನಡೆ ಅಭಿಮಾನಿಗಳ ಮನ ಗೆದ್ದಿದೆ. "ವೈಭವ್ ಅವರಲ್ಲಿ ಅದ್ಭುತ ಪ್ರತಿಭೆ ಇದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂತಹ ಧೈರ್ಯವಾಗಿ ಆಟ ಆಡುವುದು ಅಷ್ಟು ಸುಲಭವಲ್ಲ," ಎಂದು ಹಾರ್ದಿಕ್ ಪಾಂಡ್ಯ ಅವರು ವೈಭವ್ ಸೂರ್ಯವಂಶಿ ಅವರನ್ನು ಹೊಗಳಿದ್ದಾರೆ.

ಪಂದ್ಯದ ಸೋಲಿನ ಬೇಸರವಿದ್ದರೂ, ಪ್ರತಿಭೆಯನ್ನು ಗೌರವಿಸುವಲ್ಲಿ ಹಾರ್ದಿಕ್ ಯಾವುದೇ ಸಂಕೋಚ ತೋರಲಿಲ್ಲ. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಅವರನ್ನೇ ಈ ಪಂದ್ಯದ ರಿಯಲ್ ವಿನ್ನರ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ.

ವೈಭವ್ ಸೂರ್ಯವಂಶಿಯ ಹೊಸ ಯುಗ ಆರಂಭ

ಕೇವಲ 14 ಎಸೆತಗಳಲ್ಲಿ 39 ರನ್ ಸಿಡಿಸಿದ ವೈಭವ್, ಮುಂಬೈ ತಂಡದಿಂದ ಪಂದ್ಯವನ್ನು ಸಂಪೂರ್ಣವಾಗಿ ಕಿತ್ತುಕೊಂಡಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಈ 'ಮಾಸ್ಟರ್ ಸ್ಟ್ರೋಕ್' ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅದೇನೇ ಇರಲು ಹಾರ್ದಿಕ್ ಪಾಂಡ್ಯ ಅವರು ವೈಭವ್‌ಗೆ ನೀಡಿದ ಈ ವಿಶೇಷ ಪ್ರೋತ್ಸಾಹದ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಅನುಭವಿ ಆಟಗಾರರಿಂದ ಸಿಗುವ ಇಂತಹ ಸಣ್ಣ ಪ್ರೋತ್ಸಾಹ ಯುವ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಇದು ಪ್ರಮುಖ ಸಾಕ್ಷಿ ಅಂದ್ರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+