ಆರ್‌ಸಿಬಿ ಸೇರ್ತಾರಾ ಹಾರ್ದಿಕ್ ಪಾಂಡ್ಯ? ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಮಹತ್ವದ ಸುಳಿವು
Hardik Pandya: ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಟರ್ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗಷ್ಟೇ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಇದರ ಬೆನ್ನಲ್ಲೇ ಅವರು ಮುಂಬರುವ ಸೀಸನ್‌ನಿಂದ ಫ್ರಾಂಚೈಸಿ ಬದಲಾಯಿಸಲಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಇದೀಗ ಈ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು ಪ್ರತಿಕ್ರಿಯಿಸಿ ಪಾಂಡ್ಯ ಯಾವ ಟೀಮ್‌ಗೆ ಹೋಗಬಹುದು ಎನ್ನುವ ಸುಳಿವು ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ವಲಯದಲ್ಲಿ ಸದ್ಯ ಹಾರ್ದಿಕ್ ಪಾಂಡ್ಯ ಅವರ ಕುರಿತು ಭಾರಿ ಚರ್ಚೆ ಮತ್ತು ಸದ್ದು ಕೇಳಿಬರುತ್ತಿದೆ. ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಈ ಸ್ಟಾರ್ ಆಟಗಾರನನ್ನು ಟ್ರೇಡಿಂಗ್ ಮಾಡಿಕೊಳ್ಳಲು ತೀವ್ರ ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ.

ಜಿಟಿಯಿಂದ ಮತ್ತೆ ಎಂಐಗೆ ಮರಳಿದ್ದ ಪಾಂಡ್ಯ
ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ ಅವರು 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕವೇ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದು, 2021ರ ವರೆಗೆ ಅದೇ ತಂಡದ ಪರ ಆಡಿದ್ದರು. ಬಳಿಕ ಲೀಗ್‌ಗೆ ಹೊಸದಾಗಿ ಸೇರ್ಪಡೆ ಆಗಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಹಾರ್ದಿಕ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡು ನಾಯಕನನ್ನಾಗಿ ನೇಮಕ ಮಾಡಿತು. ಜಿಟಿ ನಾಯಕನಾಗಿ ಸತತ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ, ಆ ನಂತರ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ಮರಳಿದ್ದರು.
ಹಾರ್ದಿಕ್ ಪಾಂಡ್ಯ ಅವರ ನೇತೃತ್ವದಲ್ಲಿ ಮೂರು ಐಪಿಎಲ್ ಆವೃತ್ತಿಗಳಲ್ಲಿ ಆಡಿದ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಕ್ರಮವಾಗಿ 10, 3 ಮತ್ತು 9 ಸ್ಥಾನಗಳನ್ನು ಪಡೆದುಕೊಂಡಿತು. ಅಲ್ಲದೆ, ಇತ್ತೀಚೆಗಷ್ಟೇ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಬೆನ್ನಲ್ಲೇ ಅವರು ಬೇರೆ ತಂಡ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಆಕಾಶ್ ಚೋಪ್ರಾ ಹೇಳಿದ್ದೇನು?
ಇನ್ನೂ ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು, 'ಗುಜರಾತ್ ಟೈಟಾನ್ಸ್ ತಂಡವು ಹಾರ್ದಿಕ್ ಅವರನ್ನು ಮತ್ತೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿಲ್ಲದಿರಬಹುದು,' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಸೇರ್ತಾರಾ ಹಾರ್ದಿಕ್ ಪಾಂಡ್ಯ?
ಮುಂದುವರೆದು ಮಾತನಾಡಿದ ಅವರು 'ಎಲ್ಲಾ ತಂಡಗಳೂ ಅವರ ಮೇಲೆ ಆಸಕ್ತಿ ಹೊಂದಿರುವಂತೆ ತೋರುತ್ತಿದೆ ಅಥವಾ ಅಂತಹ ವದಂತಿಗಳು ಹರಡುತ್ತಿವೆ. ಕೇವಲ ಎರಡು ತಂಡಗಳು ಮಾತ್ರ ಅವರ ಕಡೆ ಆಸಕ್ತ ತೋರುತ್ತಿಲ್ಲ. ಅವುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಆಗಿವೆ,' ಎಂದು ಹೇಳಿದ್ದಾರೆ.
'ಉಳಿದಂತೆ ಗುಜರಾತ್ ಟೈಟಾನ್ಸ್ ಸೇರಿದಂತೆ ಪ್ರತಿಯೊಂದು ತಂಡವೂ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಗುಜರಾತ್ ಟೈಟಾನ್ಸ್ ನಿಜವಾಗಿಯೂ ಇದರಲ್ಲಿ ಆಸಕ್ತಿ ತೋರಿಸುತ್ತದೆಯೇ ಎಂದು ನನಗಷ್ಟೇ ಆಶ್ಚರ್ಯ ಆಗುತ್ತಿದೆ. ಅಷ್ಟಕ್ಕೂ ಆ ಏಳು ತಂಡಗಳು ಮುಂಬೈಗೆ ಪ್ರತಿಯಾಗಿ ಏನನ್ನು ತಾನೆ ಕೊಡಲು ಸಾಧ್ಯ?,' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನ ವಿಡಿಯೋವೊಂದರಲ್ಲಿ ಪ್ರಶ್ನೆ ಮಾಡಿದ್ದಾರೆ.
ಐಪಿಎಲ್ 2024ರ ಸೀಸನ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ತೊರೆದ ನಂತರ ಶುಭ್‌ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಇದು ಒಂದಾಗಿದೆ. ಗುಜರಾತ್ ಟೈಟಾನ್ಸ್ ಐಪಿಎಲ್ 2026ರ ಫೈನಲ್ ತಲುಪಿತ್ತು. ಆದರೂ ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
'ಗುಜರಾತ್ ತಂಡ ಪ್ರತಿಯಾಗಿ ಯಾರನ್ನು ಕೊಡಲು ಸಾಧ್ಯ? ಅವರು ಈ ಟ್ರೇಡಿಂಗ್‌ನಲ್ಲಿ ಆಸಕ್ತಿ ತೋರಿಸುತ್ತಾರೆ ಎಂದು ನನಗನಿಸುವುದಿಲ್ಲ. ಒಂದು ವೇಳೆ ಕೇಳುವುದಾದರೆ ಮುಂಬೈ ತಂಡ ರಶೀದ್ ಖಾನ್ ಅವರನ್ನು ಕೇಳಬಹುದು, ಆದರೆ ಅದು ಕೂಡ ಅನುಮಾನವೇ. ನೀವು ಕಗಿಸೊ ರಬಾಡ ಅವರನ್ನು ಸಹ ಕೇಳಬಹುದು, ಆದರೆ ಪರ್ಪಲ್ ಕ್ಯಾಪ್ ಗೆದ್ದಿರುವ ಆಟಗಾರನನ್ನು ಅವರು ಯಾಕೆ ತಾನೆ ಬಿಟ್ಟುಕೊಡುತ್ತಾರೆ?,' ಎಂದು ಪ್ರಶ್ನೆ ಮಾಡಿದ್ದಾರೆ.
'ಈ ಟ್ರೇಡಿಂಗ್ ನಡೆಯುವ ಸಾಧ್ಯತೆ ತೀರಾ ಕಡಿಮೆ ಎಂದೇ ನನಗನಿಸುತ್ತದೆ. ಏಕೆಂದರೆ ಹಾರ್ದಿಕ್ರ ಪಾಂಡ್ಯ ಅವರು ಅವರು ಈಗಾಗಲೇ ಗುಜರಾತ್ ಟೈಟನ್ಸ್‌ನಿಂದಲೇ ಬಂದವರು. ಮತ್ತದೇ ಹಾದಿಯಲ್ಲಿ ಸಾಗಲು ಯಾರಾದರೂ ಯಾಕೆ ಬಯಸುತ್ತಾರೆ? ಪ್ರಸ್ತುತ ಶುಭ್‌ಮನ್ ಗಿಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ ಒಂದೇ ತಂಡದಲ್ಲಿ ಇಬ್ಬರು ಪ್ರಮುಖ ನಾಯಕರನ್ನು ಸೇರಿಸಿಕೊಳ್ಳಲಿ ಯಾಕೆ ಇಷ್ಟಪಡುತ್ತಾರೆ?,' ಎಂದು ಚೋಪ್ರಾ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಆಕಾಶ್ ಚೋಪ್ರಾ ಅವರ ಪ್ರಕಾರ ಜಿಟಿ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಳ್ಳುವುದಿಲ್ಲ ಎನ್ನುವ ಲೆಕ್ಕದಲ್ಲೇ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.












Click it and Unblock the Notifications