Hardik Pandya: ನತಾಶಾಗೆ ಹಾರ್ದಿಕ್ ಪಾಂಡ್ಯ ಮೋಸ ಮಾಡಿದ್ರಾ?

ಭಾರತದ ಸ್ಟಾರ್ ಆಲ್‌ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಡಿವೋರ್ಸ್ ವಿಚಾರ ಭಾರಿ ಸದ್ದು ಮಾಡಿತ್ತು. ಆರಂಭದಲ್ಲಿ ನತಾಶಾ ಸ್ಟಾಂಕೋವಿಕ್‌ ಅವರೇ ಹಾರ್ದಿಕ್ ಪಾಂಡ್ಯಗೆ ಮೋಸ ಮಾಡಿದ್ದು ಎಂದು ಅಭಿಮಾನಿಗಳು ಮುಗಿಬಿದ್ದಿದ್ದರು. ಪಾಂಡ್ಯರಿಂದ ಹಣ ಪಡೆಯಲು ವಿಚ್ಛೇದನ ಪಡೆಯುತ್ತಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಪಾಂಡ್ಯ ಮತ್ತು ನತಾಶಾ ಘೋಷಣೆ ಮಾಡಿದ್ದರು. ಆದರೆ ಯಾಕಾಗಿ ಎನ್ನುವ ಬಗ್ಗೆ ಯಾರೂ ಬಾಯಿಬಿಟ್ಟಿರಲಿಲ್ಲ.

ಇದೀಗ ಅಭಿಮಾನಿಗಳಲ್ಲಿ ನಿಜಕ್ಕೂ ಮೋಸ ಮಾಡಿದ್ದು ಯಾರು ಎನ್ನುವ ಅನುಮಾನ ಶುರುವಾಗಿದೆ. ನತಾಶಾ ಅವರ ಸಾಮಾಜಿಕ ಹ್ಯಾಂಡಲ್‌ ಅನ್ನು ಗಮನಿಸುವವರಿಗೆ ಈ ಅನುಮಾನ ಶುರುವಾಗಿದ್ದು, ನತಾಶಾ ಮೋಸ ಮಾಡಿಲ್ಲ, ಬದಲಾಗಿ ಅವರೇ ಮೋಸ ಹೋಗಿರಬಹುದು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.

Hardik Pandya and Natasa Stankovic s Separation Fans Show Concern

ಪೋಸ್ಟ್ ಲೈಕ್ ಮಾಡಿ ನತಾಶಾ

ನತಾಶಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಸಂಬಂಧಗಳು, ಮೋಸ ಮತ್ತು ಭಾವನಾತ್ಮಕ ನಿಂದನೆಯ ವಿಚಾರಗಳನ್ನು ಒಳಗೊಂಡ ಕೆಲವು ಪೋಸ್ಟ್‌ಗಳನ್ನು ನತಾಶಾ ಲೈಕ್ ಮಾಡಿರುವುದು ಈಗ ಅನುಮಾನಕ್ಕೆ ಕಾರಣವಾಗಿದೆ. ನತಾಶಾ ಅವರೇ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಮೋಸ ಹೋದರಾ? ಪಾಂಡ್ಯ ಅವರಿಂದ ನತಾಶಾಗೆ ಮಾನಸಿಕ ಹಿಂಸೆಯಾಗಿತ್ತಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಅನೇಕ ಅಭಿಮಾನಿಗಳು ಈ ವಿಚಾರವನ್ನು ಗುರುತಿಸಿದ್ದಾರೆ.

ವಿಚ್ಛೇದನ ಪಡೆದಿರುವ ದಂಪತಿ

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪತ್ನಿ ಮತ್ತು ಮಾಡೆಲ್ ನತಾಸಾ ಸ್ಟಾಂಕೋವಿಕ್ ಜುಲೈ 18 ರಂದು ವಿಚ್ಛೇದನ ಪಡೆದಿರುವ ಸುದ್ದಿಯನ್ನು ಖಚಿತಪಡಿಸಿದ್ದರು. ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ಹೇಳಿದ್ದರು. ಬಳಿಕ ನತಾಶಾ ನಾಲ್ಕು ವರ್ಷದ ಮಗ ಅಗಸ್ತ್ಯನ ಜೊತೆ ಸೆರ್ಬಿಯಾಗೆ ತೆರಳಿದ್ದರು.

ಜುಲೈ 30ರಂದು ಹಾರ್ದಿಕ್ ತನ್ನ ಮಗ ಅಗಸ್ತ್ಯನ ಹುಟ್ಟುಹಬ್ಬದಂದು ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಹಾರ್ದಿಕ್ ಅವರು ಅಗಸ್ತ್ಯರೊಂದಿಗೆ ತಮ್ಮ ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

"ನೀವು ನನ್ನನ್ನು ಪ್ರತಿದಿನ ಮುನ್ನಡೆಸುತ್ತೀರಿ! ನನ್ನ ಅಪರಾಧದಲ್ಲಿ ನನ್ನ ಪಾಲುದಾರನಿಗೆ ಜನ್ಮದಿನದ ಶುಭಾಶಯಗಳು, ಎಲ್ಲವನ್ನೂ ಮೀರಿ ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹಾರ್ದಿಕ್ ಪಾಂಡ್ಯ ಬರೆದಿದ್ದರು.

ಹಾರ್ದಿಕ್ ಪಾಂಡ್ಯ ನತಾಸಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿಯೂ ಕಾಮೆಂಟ್ ಮಾಡಿದ್ದರು, ಅವರು ಅಗಸ್ತ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದ ಪೋಸ್ಟ್‌ಗೆ ಸರಣಿ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪಾಂಡ್ಯರ ಈ ನಡೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಚ್ಚಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+