WPL 2025: ಯುಪಿ ವಾರಿಯರ್ಸ್ ವಿರುದ್ಧ ಗೆದ್ದ ಗುಜರಾತ್ ಜೈಂಟ್ಸ್

ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲು ಕಂಡಿದ್ದ ಗುಜರಾತ್ ಜೈಂಟ್ಸ್ ಭಾನುವಾರ ಗೆಲುವಿನ ಖಾತೆ ತೆರೆದಿದೆ. ವಡೋದರಾದ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು. ಕಿರಣ್ ನಾವ್‌ಗೆರೆ 8 ಎಸೆತಗಳಲ್ಲಿ 15 ರನ್ ಗಳಿಸಿದರೆ, ಕನ್ನಡತಿ ವೃಂದಾ ದಿನೇಶ್ ಕೇವಲ 6 ರನ್ ಗಳಿಸಿ ಔಟಾದರು.

gujarat giants win aganist up warriorz in wpl 2025 match

ಉಮಾ ಚೆಟ್ರಿ 27 ಎಸೆತಗಳಲ್ಲಿ 24 ರನ್ ಗಳಿಸಿದರೆ, ನಾಯಕಿ ದೀಪ್ತಿ ಶರ್ಮಾ 27 ಎಸೆತಗಳಲ್ಲಿ 39 ರನ್ ಗಳಿಸಿದರು. ತಹಿಲಾ ಮೆಕ್‌ಗ್ರಾತ್ ರನ್ ಖಾತೆ ತೆರೆಯುವ ಮುನ್ನವೇ ಔಟಾದರೆ, ಗ್ರೇಸ್ ಹ್ಯಾರಿಸ್ 4 ರನ್ ಗಳಿಸಿ ಔಟಾದರು. ಶ್ವೇತಾ ಶೆರಾವತ್ 16 ರನ್ ಗಳಿಸಿದರೆ, ಅಲಾನ ಕಿಂಗ್ 19 ರನ್ ಗಳಿಸಿದರು. ಸೈಮಾ ಥಾಕೂರ್ 7 ಎಸೆತಗಳಲ್ಲಿ 15 ರನ್ ಗಳಿಸಿ ಕೊನೆಯ ಓವರ್ ನಲ್ಲಿ ಮಿಂಚಿದರು. ಡಿಯೇಂಡ್ರ ಡಾಟಿನ್ ಮತ್ತು ಆಶ್ಲೆ ಗಾರ್ಡ್ನರ್ ತಲಾ ಎರಡು ವಿಕೆಟ್ ಪಡೆದರೆ, ಪ್ರಿಯಾ ಮಿಶ್ರಾ ಮೂರು ವಿಕೆಟ್ ಪಡೆದುಕೊಂಡರು. ಕಾಶ್ವೀ ಗೌತಮ್ 1 ವಿಕೆಟ್ ಪಡೆದರು.

ಗುಜರಾತ್‌ಗೆ ಆರಂಭಿಕ ಆಘಾತ

144 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಜೈಂಟ್ಸ್ 2 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬೆತ್ ಮೂನಿ ಮತ್ತು ದಯಾಳ್ ಹೇಮಲತಾ ರನ್ ಖಾತೆ ತೆರೆಯುವ ಮುನ್ನವೇ ಔಟಾದರು.

ಬಳಿಕ ಲಾರಾ ವೋಲ್ವರ್ಟ್ ಅವರ ಜೊತೆಯಾದ ನಾಯಕಿ ಆಶ್ಲೆ ಗಾರ್ಡ್ನರ್ ಮೂರನೇ ವಿಕೆಟ್‌ಗೆ 55 ರನ್ ಕಲೆಹಾಕಿದರು. ವೋಲ್ವರ್ಟ್ 22 ರನ್ ಗಳಿಸಿ ಔಟಾದರೆ, ನಾಯಕಿ ಆಶ್ಲೆ ಗಾರ್ಡ್ನರ್ 32 ಎಸೆತಗಳಲ್ಲಿ 52 ರನ್ ಗಳಿಸಿದರು. ಹರ್ಲೀನ್ ಡಿಯೋಲ್ 30 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರೆ, ಡಿಯೇಂಡ್ರ ಡಾಟಿನ್ 18 ಎಸೆತಗಳಲ್ಲಿ ಅಜೇಯ 33 ರನ್ ಗಳಿಸುವ ಮೂಲಕ ಗುಜರಾತ್ ಜೈಂಟ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+