RCB Team: 18 ಎಸೆತಗಳಲ್ಲಿ 61 ರನ್: ಸೈಲೆಂಟ್ ಆಗಿ ಆರ್‌ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್
2024ರ ಐಪಿಎಲ್ ಮಿನಿ ಹರಾಜಿಲ್ಲಿ ಆರ್‌ಸಿಬಿ ಹಲವು ಎಡವಟ್ಟು ಮಾಡಿಕೊಂಡಿದೆ, ಪ್ರಮುಖ ಆಟಗಾರರನ್ನು ಬಿಟ್ಟಿದ್ದ ಆರ್ ಸಿಬಿ ಬೌಲರ್ ಗಳನ್ನು ಖರೀದಿ ಮಾಡಬೇಕಿತ್ತು. ಹಸರಂಗ ಬದಲಾಗಿ ಯಾವೊಬ್ಬ ಸ್ಪಿನ್ನರ್ ಕೂಡ ತಂಡಕ್ಕೆ ಬಂದಿಲ್ಲ. ಅಲ್ಜಾರಿ ಜೋಸೆಫ್‌ಗೆ ₹11.50 ಕೋಟಿ ನೀಡುವ ಅಗತ್ಯ ಇರಲಿಲ್ಲ ಎಂದು ಅಭಿಮಾನಿಗಳು ಕಿಡಿ ಕಾರಿದರು. ಆದರೆ ಲಾಕಿ ಫರ್ಗುಸನ್ ₹2 ಕೋಟಿಗೆ ಸಿಕ್ಕರು. ಇದೆಲ್ಲದರ ನಡುವೆ ಸೌರವ್ ಚೌಹಾಣ್ ಆರ್‌ಸಿಬಿಗೆ ಅತ್ಯುತ್ತಮ ಆಯ್ಕೆಯಾದರು.
2024 ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ವರ್ಷದ ಸೌರವ್ ಚೌಹಾಣ್‌ರನ್ನು ಮೂಲ 20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಹರಾಜು ಸಂಪೂರ್ಣವಾಗಿ ಮುಕ್ತಾಯವಾದ ನಂತರ, ಕೊನೆಯಲ್ಲಿ ಆರ್ ಸಿಬಿ ಮ್ಯಾನೇಜ್‌ಮೆಂಟ್ ಸೌರವ್ ಚೌಹಾಣ್‌ರನ್ನು ಬಿಡ್ ಮಾಡಲು ಕೇಳಿ ಖರೀದಿ ಮಾಡಿತು.
ಹಲವು ಅನ್‌ಕ್ಯಾಪ್ಡ್ ಆಟಗಾರರು ಕೋಟ್ಯಂತರ ಮೊತ್ತಕ್ಕೆ ಬಿಡ್ ಆದರೂ, ಸೌರವ್ ಚೌಹಾಣ್ ಮೂಲ ಬೆಲೆಗೆ ಆರ್ ಸಿಬಿ ಪಾಳಯ ಸೇರಿಕೊಂಡರು. ಚೌಹಾಣ್‌ರನ್ನು ಆರ್ ಸಿಬಿ ಖರೀದಿ ಮಾಡಿದ್ದು ಉತ್ತಮ ಆಯ್ಕೆಯೆಂದೇ ಹೇಳಬಹುದು.

ಸೌರವ್ ಚೌಹಾಣ್ ಗುಜರಾತ್ ತಂಡಕ್ಕಾಗಿ ಆಡುವ ಆಡುವ ಆಟಗಾರ, ಹಲವು ವರ್ಷಗಳಿಂದ ಗುಜರಾತ್‌ಗಾಗಿ ಆಡುತ್ತಿದ್ದು ರಣಜಿ, ದುಲೀಪ್ ಮತ್ತು ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರೌಂಡ್ಸ್‌ಮ್ಯಾನ್ ಮಗ ಆರ್ ಸಿಬಿಗೆ
ಮಣಿನಗರ ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅಹಮದಾಬಾದ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ (ಎಎಫ್‌ಇಎಸ್) ಫೈರ್‌ಮ್ಯಾನ್ ಉದ್ಯೋಗಿಯಾಗಿರುವ ಸೌರಭ್ ಅವರ ತಂದೆದಿಲೀಪ್ ಚೌಹಾಣ್ 2000 ರಲ್ಲಿ ಕ್ರಿಕೆಟ್ ಪಂದ್ಯಕ್ಕಾಗಿ ಎಸ್‌ಪಿ ಸ್ಟೇಡಿಯಂನಲ್ಲಿ ಗ್ರೌಂಡ್ಸ್‌ಮ್ಯಾನ್ ಕರ್ತವ್ಯಕ್ಕಾಗಿ ನಿಯೋಜಿಸಿದಾಗ ಕ್ರಿಕೆಟ್ ಮೇಲಿನ ಪ್ರೇಮ ಶುರುವಾಯಿತು, ರಲ್ಲಿ ಸೌರಭ್ ಅವರ ಕ್ರಿಕೆಟ್‌ನೊಂದಿಗಿನ ಪ್ರೇಮಕಥೆ ಪ್ರಾರಂಭವಾಯಿತು. ಸಾಗರ್ ಅವರ ತಂದೆ 2015-16ರವರೆಗೆ ಕ್ರೀಡಾಂಗಣದಲ್ಲಿ ಗ್ರೌಂಡ್ಸ್‌ಮನ್ ಆಗಿದ್ದರು.
ದಿಲೀಪ್ ಚೌಹಾಣ್ ಮತ್ತು ಅವರ ಕುಟುಂಬ ಕ್ರೀಡಾಂಗಣದ ಆವರಣದಲ್ಲಿ ವಾಸಿಸಲು ಪ್ರಾರಂಭಿಸಿತು. ತನ್ನ ತಂದೆ ಸ್ಟೇಡಿಯಂನಲ್ಲಿ ಕೆಲಸ ಮಾಡುವುದನ್ನು ಮತ್ತು ಕ್ರಿಕೆಟಿಗರು ಪ್ರತಿದಿನ ಆಡುವುದನ್ನು ನೋಡಿದ ಸೌರವ್ ಬಾಲ್ಯದಿಂದಲೂ ಕ್ರಿಕೆಟ್ ಕಡೆ ಆಕರ್ಷಿತರಾದರು. ಸೌರವ್ ಚೌಹಾಣ್ ಎಡಗೈ ವಿಕೆಟ್ ಕೀಪರ್ ಬ್ಯಾಟರ್ ಆದರೂ ಬೌಲಿಂಗ್ ಕೂಡ ಮಾಡಬಲ್ಲರು.
ಸ್ಫೋಟಕ ಬ್ಯಾಟರ್ ಸೌರವ್ ಚೌಹಾಣ್
ಸೌರವ್ ಚೌಹಾಣ್ ಸ್ಫೋಟಕ ಬ್ಯಾಟರ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 61 ರನ್ ಗಳಿಸಿದ್ದರು. 2022ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 35 ಎಸೆತಗಳಲ್ಲಿ 84 ರನ್ ಗಳಿಸಿ ಗಮನ ಸೆಳೆದಿದ್ದಾರೆ.
ದೇಶೀಯ ಟಿ20 ಟೂರ್ನಿಯಲ್ಲಿ 19 ಇನ್ನಿಂಗ್ಸ್‌ಗಳಲ್ಲಿ 464 ರನ್ ಗಳಿಸಿದ್ದಾರೆ. 152.13 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 13 ಲಿಸ್ಟ್ ಎ ಪಂದ್ಯಗಳಲ್ಲಿ 43.27 ಸರಾಸರಿ ಮತ್ತು 116.65 ಸರಾಸರಿಯಲ್ಲಿ 476 ರನ್ ಗಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಂಚಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.












Click it and Unblock the Notifications