Get Updates
Get notified of breaking news, exclusive insights, and must-see stories!

ಕನ್ನಡಿಗ ಕೆಎಲ್ ರಾಹುಲ್‌ ಟೀಮ್ ಮ್ಯಾನ್: ಸುನಿಲ್ ಗವಾಸ್ಕರ್‍

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಪ್ರವಾಸಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲೂ ಉತ್ತಮ ಆರಂಭವನ್ನು ಪಡೆದಿದೆ. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಬಗ್ಗೆ ದಿಗ್ಗಜ ಬ್ಯಾಟರ್‍ ಸುನಿಲ್‌ ಗವಾಸ್ಕರ್‍ ದೊಡ್ಡ ಹೇಳಿಕೆ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯದ ವೀಕ್ಷಕ ವಿವರಣೆಯ ವೇಳೆ ಸುನಿಲ್ ಗವಾಸ್ಕರ್‍ ರಾಹುಲ್‌ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ರಾಹುಲ್‌ ಅವರಿಗೆ ತಂಡ ಹಲವು ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಚಿಸಿತು. ಆದರೆ ರೋಹಿತ್‌ ಶರ್ಮಾ ನಿವೃತ್ತರಾದ ಬಳಿಕ ತೆರವಾದ ಆರಂಭಿಕ ಸ್ಥಾನದಲ್ಲಿ ಕೆಎಲ್ ರಾಹುಲ್‌ ಯಶಸ್ವಿ ಜೈಸ್ವಾಲ್‌ ಜೊತೆಗೂಡಿ ಉತ್ತಮ ಇನಿಂಗ್ಸ್‌ ಕಟಿದರು ಎಂದು ಶ್ಲಾಘಿಸಿದ್ದಾರೆ.

Gavaskar Praises KL Rahul s All-Round Prowess and Predicts Big Series in England

"ರಾಹುಲ್‌ ತಮ್ಮ ಬ್ಯಾಟಿಂಗ್ ಮೇಲೆ ಹಿಡಿತ ಹೊಂದಿದ್ದಾರೆ. ರಾಹುಲ್‌ ತಮ್ಮ ಕ್ಷಮತೆಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಸುನಿಲ್ ಗವಾಸ್ಕರ್ ಕಿವಿ ಮಾತು ನೀಡಿದ್ದಾರೆ. ರಾಹುಲ್‌ ಅಕ್ಷರಶಃ ಟೀಮ್ ಮ್ಯಾನ್‌. ಇವರಿಗೆ ಅನಿವಾರ್ಯತೆ ಇದ್ದಾಗ ವಿಕೆಟ್‌ ಕೀಪಿಂಗ್‌ ಕೆಲಸವನ್ನು ಸಹ ತಂಡಕ್ಕಾಗಿ ಮಾಡಿದ್ದಾರೆ. ರಾಹುಲ್‌ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ. ರಾಹುಲ್‌ ಎಷ್ಟು ಅತ್ಯುತ್ತಮ ಆಟಗಾರ ಎಂಬುದು ಅವರಿಗೆ ತಿಳಿದಿಲ್ಲ" ಎಂದು ಸುನಿಲ್ ತಿಳಿಸಿದ್ದಾರೆ.

ಕೆಎಲ್ ಟೀಮ್ ಮ್ಯಾನ್

ಕನ್ನಡಿಗ ರಾಹುಲ್‌ ಅವರಲ್ಲಿ ಸಾಕಷ್ಟು ಕ್ಷಮತೆ ಇದೆ. ರಾಹುಲ್ ಆಫ್‌ ಸೈಡ್‌, ಲೆಗ್‌ ಸೈಡ್‌, ಫ್ಲಿಕ್‌, ಶಾಟ್‌ಗಳನ್ನು ಪ್ರಯೋಗಿಸಿ ಗಮನ ಸೆಳೆದರು. ಇನ್ನು ಇವರು ಬೌಲ್‌ಗಳನ್ನು ಬಿಡುವ ರೀತಿ ಸಹ ಅಮೋಘ. ತಮ್ಮ ಬಗ್ಗೆ ಬೆಂಗಳೂರಿನ ಹುಡುಗನಿಗೆ ಅನುಮಾನಗಳು ಇರಬಹುದು. ರಾಹುಲ್‌ ಕವರ್‌ ಡ್ರೈವ್ ಬಾರಿಸಿದನ್ನು ನೋಡಿ ಖುಷಿ ಅಯಿತು. ಇವರು ಈ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಬಾರಿಸಬಲ್ಲರು ಎಂದು ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.

Gavaskar Praises KL Rahul s All-Round Prowess and Predicts Big Series in England

ರಾಹುಲ್‌ ಫ್ರಂಟ್‌ ಫುಟ್‌, ಬ್ಯಾಕ್‌ ಫುಟ್‌, ಸ್ಟ್ರೆಟ್‌ ಡ್ರೈವ್‌ಗಳನ್ನು ಸಹ ಉತ್ತಮವಾಗಿ ಬಾರಿಸುತ್ತಾರೆ. ಆದರೆ ಇವರ ಕವರ್‌ ಡ್ರೈವ್‌ ಕ್ಲಾಸ್ ಆಗಿ ಬಾರಿಸುತ್ತಾರೆ. ಈ ಸರಣಿಯಲ್ಲಿ ಇವರು ಗರಿಷ್ಠ ರನ್‌ ಕಲೆ ಹಾಕಬಹುದು ಎಂದು ತಿಳಿಸಿದ್ದಾರೆ.

ರಾಹುಲ್‌ ಸಾಧನೆ

ಕೆಎಲ್ ರಾಹುಲ್ ಅವರನ್ನು ಟೆಸ್ಟ್‌ ತಂಡದಲ್ಲಿ ಸೇರಿಸಿಕೊಳ್ಳಬೇಕಾ ಬೇಡವೋ ಎಂಬ ಪ್ರಶ್ನೆಗಳು ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಆರಂಭವಾಗಿದ್ದವು. ಆದರೆ ರಾಹುಲ್‌ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇವರು ನೀಡಿದ ಪ್ರದರ್ಶನ ತಮ್ಮ ಮೇಲೆ ಇದ್ದ ಟೀಕೆಗಳಿಗೆ ಉತ್ತರ ನೀಡಿದರು. ಅಲ್ಲದೆ ಇಂಗ್ಲೆಂಡ್‌ ಪ್ರವಾಸಕ್ಕೂ ಇವರನ್ನು ಆಯ್ಕೆ ಮಾಡಲಾಯಿತು. ಇವರು ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಕಠಿಣ ಪರಿಸ್ಥಿತಿಯಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+