Team India Head Coach: ಗೌತಮ್‌ ಗಂಭೀರ್ ಸೇರಿದಂತೆ ಇಬ್ಬರು ಸಂದರ್ಶನದಲ್ಲಿ ಭಾಗಿ

ಟೀಮ್ ಇಂಡಿಯಾದ ಹೆಡ್‌ ಕೋಚ್ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ, ಟಿ20 ವಿಶ್ವಕಪ್‌ ಬಳಿಕ ಮುಕ್ತಾಯ ಆಗಲಿದೆ. ದ್ರಾವಿಡ್ ಅವರಿಗೆ ಈ ಟೂರ್ನಿ ಕೊನೆಯ ಅಸೈನ್‌ ಮೆಂಟ್‌, ಇದಾದ ಬಳಿಕ ಅವರು ಕೋಚ್‌ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.

ಬಿಸಿಸಿಐ ಕೋಚ್‌ ಸ್ಥಾನಕ್ಕಾಗಿ ಈಗಾಗಲೇ ಅರ್ಜಿಯನ್ನು ಆಹ್ವಾನಿಸಿದ್ದು, ಮಂಗಳವಾರ ಸಂದರ್ಶನ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಶನದಲ್ಲಿ ಇಬ್ಬರು ಮಾಜಿ ಆಟಗಾರರು ಭಾಗವಹಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತವೆ. ಹಾಗಿದರೆ ಇಬ್ಬರಲ್ಲಿ ಒಬ್ಬರು ಗೌತಮ್‌ ಗಂಭೀರ್ ಆದರೆ, ಇನ್ನೊಬ್ಬರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇದೆ.

Gautam Gambhir and WV Raman Interviewed for Team India Head Coach Role BCCI Reports

ಕೋಚ್ ಸ್ಥಾನದ ಮೇಲೆ ಗೌತಮ್ ಕಣ್ಣು

ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ಕೀರ್ತಿ ಗೌತಮ್‌ ಗಂಭೀರ್ ಅವರಿಗೆ ಸಲ್ಲುತ್ತದೆ. ಇವರು ಈ ಸ್ಥಾನ ಅಲಂಕರಿಸಿದರೆ, ಬೆಸ್ಟ್ ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ. ಇವರು ಸಹ ಮಂಗಳವಾರ ನಡೆದ ಸಂದರ್ಶನದಲ್ಲಿ ಇಂಟರ್ನೆಟ್ ಮೂಲಕ ಭಾಗವಹಿಸಿದ್ದಾರೆ.

ಇಬ್ಬರ ಸಂದರ್ಶನ

ನ್ಯೂಸ್ 18 ರ ವರದಿಯ ಪ್ರಕಾರ, ಮಂಗಳವಾರ ಕ್ರಿಕೆಟ್ ಸಲಹಾ ಸಮಿತಿಯು ಗೌತಮ್ ಗಂಭೀರ್ ಮತ್ತು ಭಾರತದ ಮಾಜಿ ಕ್ರಿಕೆಟಿಗ ವೂರ್ಕೇರಿ ವೆಂಕಟ್ ರಾಮನ್ ಅವರನ್ನು ಸಂದರ್ಶಿಸಿದೆ. ಪ್ರಸ್ತುತ ಮುಖ್ಯ ಕೋಚ್ ಆಗುವ ರೇಸ್‌ನಲ್ಲಿ ಗಂಭೀರ್ ಮುಂದಿದ್ದಾರೆ. ಸುದ್ದಿ ಪ್ರಕಾರ ರಾಮನ್ ಕೂಡ ಪ್ರಬಲ ಸ್ಪರ್ಧಿ. ಸಂದರ್ಶನದಲ್ಲಿ ಅವರು ಉತ್ತಮ ಅಂಶಗಳನ್ನು ಪ್ರಸ್ತುತ ಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಹೊಸ ಮುಖ್ಯ ಕೋಚ್ ಯಾರೆಂಬುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Gautam Gambhir and WV Raman Interviewed for Team India Head Coach Role BCCI Reports

ವಿದೇಶಿ ಕೋಚ್‌ಗಳ ಸಂದರ್ಶನ

ಗೌತಮ್ ಗಂಭೀರ್ ವರ್ಚುವಲ್ ಸಂದರ್ಶನ ನೀಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈಗ ಸಿಎಸಿ ಬುಧವಾರ ವಿದೇಶಿ ಅಭ್ಯರ್ಥಿಗಳನ್ನು ಸಂದರ್ಶಿಸಲಿದೆ. ಇದರಲ್ಲಿ ಯಾರು ಭಾಗಿಯಾಗಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಬಿಸಿಸಿಐ ಕೂಡ ಹೊಸ ಆಯ್ಕೆಗಾರರಿಗಾಗಿ ಹುಡುಕಾಟ ನಡೆಸುತ್ತಿದೆ. ಇದಕ್ಕಾಗಿ, ಕೆಲವು ಅಭ್ಯರ್ಥಿಗಳನ್ನು ಆಯ್ಕೆಗಾರರ ​​ಹುದ್ದೆಗೆ ಶೀಘ್ರದಲ್ಲೇ ಸಂದರ್ಶನಗಳಲ್ಲಿ ಭಾಗವಹಿಸಬಹುದು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಅನ್ನು ಶೀಘ್ರದಲ್ಲೇ ಘೋಷಿಸಬಹುದು. ಭಾರತ ತಂಡದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ 2024 ರ ಟಿ20 ವಿಶ್ವಕಪ್ ನಂತರ ಕೊನೆಗೊಳ್ಳಲಿದೆ. ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+