Gautam Gambhir: ಬೆಟ್ಟಿಂಗ್ ಆ್ಯಪ್‌ಗೆ ಜಾಹೀರಾತು ನೀಡಿದ ಗೌತಿ: ಡಬಲ್ ಸ್ಟ್ಯಾಂಡರ್ಡ್ ಎಂದ ಕ್ರಿಕೆಟ್ ಪ್ರಿಯರು!
ಸದಾ ವಿವಾದದಲ್ಲಿರುವ ಗೌತಮ್ ಗಂಭೀರ್ ಸದ್ಯ ಮತ್ತೊಂದು ವಿಚಾರಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೌತಮ್ ಗಂಭೀರ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಜನರ ಕೋಪ ನೆತ್ತಿಗೇರಿದೆ. ಇದು 'ಡಬಲ್ ಸ್ಟ್ಯಾಂಡರ್ಡ್' ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.
ಹೌದು.... ಟೀಂ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಅವರು ಬೆಟ್ಟಿಂಗ್ ಆ್ಯಪ್‌ಗೆ ಜಾಹೀರಾತು ನೀಡಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಗುರಿಯಾಗಿದೆ. ಜಾಹೀರಾತು ನೀಡಲು ಬೇರೇನು ಸಿಗಲಿಲ್ವಾ ಅಂತ ಕ್ರೀಡಾಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಗೌತಮ್ ಗಂಭೀರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬೆಟ್ಟಿಂಗ್ ಆ್ಯಪ್ ಬಗ್ಗೆ ಜಾಹೀರಾತು ಹಂಚಿಕೊಂಡಿದ್ದಾರೆ.

''ರಿಯಲ್ 11 ಎಂಬ ಬೆಟ್ಟಿಂಗ್ ಆ್ಯಪ್ ಅನ್ನು ಪ್ರಮೋಟ್ ಮಾಡಿದ್ದಾರೆ. ಅದರಲ್ಲಿ ಭಾರತವು ಬಾಂಗ್ಲಾ ದೇಶದ ವಿರುದ್ಧ T20 ಸರಣಿಯಲ್ಲೂ ಪ್ರಾಬಲ್ಯ ಸ್ಥಾಪಿಸಲಿದೆ. ಈ ಮೂರು ಪಂದ್ಯಗಳ ಸರಣಿಯನ್ನು ರಿಯಲ್ ಇಲೆವೆನ್‌ನ ಅಧಿಕೃತ ಆ್ಯಪ್ ಜೊತೆ ಆನಂದಿಸಿ. ನಿಮ್ಮ ಅಭಿಪ್ರಾಯವನ್ನು ಯೆಸ್/ನೋ ಮೂಲಕ ತಿಳಿಸಿ ತ್ವರಿತ ನಗದು ಬಹುಮಾನ ಪಡೆದುಕೊಳ್ಳಿ'' ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Hopefully, India will continue their domination against Bangladesh in T20Is as well. Enjoy the three-match series with @Real11official. Share your opinion in a Yes/No and avail instant cash rewards.
— Gautam Gambhir (@GautamGambhir) October 12, 2024
Download Link - https://t.co/jFv1ZXcBhp
Signup Code- GAMBHIR & GET ₹100 pic.twitter.com/SFmrSCsQCt
ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಗಂಭೀರ್ ಅವರು ಈ ಹಿಂದೆ ಬೇರೆಯವರು ಪಾನ್ ಮಸಾಲಾ ಮತ್ತು ಬೆಟ್ಟಿಂಗ್ ಆ್ಯಪ್‌ಗಳ ಜಾಹೀರಾತು ನೀಡುತ್ತಿದ್ದಾಗ ತೀವ್ರವಾಗಿ ಟೀಕಿಸುತ್ತಿದ್ದರು. ಈಗ ನೋಡಿದರೆ ಅವರೇ ಬೆಟ್ಟಿಂಗ್ ಆ್ಯಪ್ ಜಾಹೀರಾತು ನೀಡಿದ್ದಾರೆ. ಇದಕ್ಕೆ ಕ್ರೀಡಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೌತಮ್ ಗಂಭೀರ್ ಅವರು ಈ ಹಿಂದೆ ತಂಬಾಕು ಮತ್ತು ಆನ್‌ಲೈನ್ ಜೂಜು ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಫ್ಯಾಂಟಸಿ ಲೀಗ್‌ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಂದಿನ ಬಿಸಿಸಿಐ ಮುಖ್ಯಸ್ಥರಾಗಿದ್ದ ಸೌರವ್ ಗಂಗೂಲಿ ಅವರನ್ನು ಟೀಕಿಸಿದ್ದರು. ನಾನು ಮದ್ಯ, ತಂಬಾಕು ಮತ್ತು ಆನ್‌ಲೈನ್ ಜೂಜಿಗೆ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ ಅಂದಿದ್ದ ಗೌತಮ್ ಇದಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿಗಳನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು.
ಆದರೀಗ ಗೌತಮ್ ಗಂಭೀರ್ ಅವರೇ ಬೆಟ್ಟಿಂಗ್ ಆ್ಯಪ್ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನು 'ಡಬಲ್ ಸ್ಟಾಂರ್ಡ್' ಎಂದು ಜನ ಆಕ್ರೋಶಗೊಂಡಿದ್ದಾರೆ. ಇದು ಯಾವ ನ್ಯಾಯ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಪಾನ್ ಮಸಾಲಾ ಒಳ್ಳೆಯದಲ್ಲ ಆದರೆ ಬೆಟ್ಟಿಂಗ್ ಆ್ಯಪ್ ಒಳ್ಳೆಯದಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಹೀಗಾಗಿ ವಿವಾದಗಳಿಗೂ ಟೀಮ್ ಇಂಡಿಯಾ ಕೋಚ್ ಗೌತಿಗೂ ಎಲ್ಲಿಲ್ಲದ ನಂಟು. ಈ ಹಿಂದೆ ವಿವಾದಗಳಿಂದ ಸೌಂಡ್ ಮಾಡುತ್ತಿದ್ದ ಗೌತಮ್ ಟೀಂ ಇಂಡಿಯಾ ಕೋಚ್ ಆದ ಬಳಿಕ ವಿವಾದಗಳಿಂದ ದೂರ ಉಳಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಈಗಲೂ ಅವರು ನೀಡಿದ ಜಾಹೀರಾತಿನಿಂದಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಗೌತಮ್ ಗಂಭೀರ್ ಅವರಿಂದ ಇಂಥಹ ಜಾಹೀರಾತು ನಿರೀಕ್ಷೆ ಮಾಡಿರಲಿಲ್ಲ ಎಂದು ಜನ ಕಿಡಿ ಕಾರಿದ್ದಾರೆ.
'ತಿನ್ನುವುದು ಬದನೆಕಾಯಿ ಹೇಳುವುದು ಶಾಸ್ತ್ರ' ಎಂಬರ್ಥದಲ್ಲಿ ಕ್ರಿಕೆಟ್ ಪ್ರಿಯರು ಗೌತಮ್ ಪೋಸ್ಟ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಜನರ ಈ ರೀತಿಯ ಪೋಸ್ಟ್‌ಗಳಿಗೆ ಗೌತಮ್ ಗಂಭೀರ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ












Click it and Unblock the Notifications