Get Updates
Get notified of breaking news, exclusive insights, and must-see stories!

ಟಿ20 ಪಂದ್ಯದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ದಾಖಲಿಸಿ ದಾಖಲೆ ಬರೆದ ಫ್ರೆಂಚ್ ಆಟಗಾರ

ಕ್ರಿಕೆಟ್ ಎಂದರೇನೆ ಹಾಗೆ ಇಲ್ಲಿ ಯಾವ ದಾಖಲೆಗಳೂ ಶಾಶ್ವತ ಅಲ್ಲ. ಹಳೇ ದಾಖಲೆಗಳನ್ನು ಅಳಿಸಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈಗ ಅಂತಹದ್ದೇ ಒಂದು ದಾಖಲೆಯನ್ನು ಫ್ರಾನ್ಸ್ ತಂಡದ ಕ್ರಿಕೆಟ್ ಆಟಗಾರ ನಿರ್ಮಿಸಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಫ್ರೆಂಚ್ ಆರಂಭಿಕ ಬ್ಯಾಟರ್ ಗುಸ್ತಾವ್ ಮೆಕ್‌ಕಿಯಾನ್ ಪಾತ್ರರಾಗಿದ್ದಾರೆ. ಕೇವಲ 18 ವರ್ಷ 280 ದಿನ ವಯಸ್ಸಿನ ಮೆಕ್‌ಕಿಯಾನ್ ಸ್ವಿಟ್ಜರ್ಲೆಂಡ್ ವಿರುದ್ಧ ಶತಕ ಗಳಿಸಿ ದಾಖಲೆ ಬರೆದಿದ್ದಾರೆ.

ಅವರು ಟಿ20 ವಿಶ್ವಕಪ್ 2024 ಯುರೋಪ್ ಉಪ-ಪ್ರಾದೇಶಿಕ ಕ್ವಾಲಿಫೈಯರ್‌ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 61 ಎಸೆತಗಳಲ್ಲಿ 109 ರನ್ ಗಳಿಸಿದರು. ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿದ ಗುಸ್ತಾವ್ ಮೆಕ್‌ಕಿಯಾನ್ ಆಫ್ಘಾನಿಸ್ತಾನ ಆಟಗಾರನ ಹೆಸರಿನಲ್ಲಿದ್ದ ದಾಖಲೆ ಅಳಿಸಿ ತಮ್ಮ ಹೆಸರಿಗೆ ಬರೆದುಕೊಂಡರು.

 French Batter Gustav Mckeon Youngest Cricketer To Score T20I Century

ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಹಜರತುಲ್ಲಾ ಝಜೈ 2019 ರಲ್ಲಿ ಐರ್ಲೆಂಡ್ ವಿರುದ್ಧ 62 ಎಸೆತಗಳಲ್ಲಿ ಅಜೇಯ 162 ರನ್ ಗಳಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಕಿರಿಯ ಆಟಗಾರ ಎನ್ನುವ ದಾಖಲೆ ಮಾಡಿದ್ದರು. ಶತಕ ಗಳಿಸಿದಾಗ ಅವರಿಗೆ 20 ವರ್ಷ 337 ದಿನ ವಯಸ್ಸಾಗಿತ್ತು.

ಮೆಕ್‌ಕಿಯಾನ್ ದಾಖಲೆ ಬರೆದರೂ ಪಂದ್ಯ ಸೋತ ಫ್ರಾನ್ಸ್

ಯುರೋಪ್ ಉಪ-ಪ್ರಾದೇಶಿಕ ಕ್ವಾಲಿಫೈಯರ್‌ ಪಂದ್ಯಾವಳಿಯ ಮೊದಲನೇ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ 54 ಎಸೆತಗಳಲ್ಲಿ 76 ರನ್ ಗಳಿಸಿದ ಮೆಕ್‌ಕಿಯಾನ್‌ ಉತ್ತಮ ಫಾರ್ಮ್ ಕಂಡಿಕೊಂಡಿದ್ದರು. ಪಂದ್ಯಾವಳಿಯ ಫ್ರಾನ್ಸ್ ಆಡಿದ ಎರಡನೇ ಪಂದ್ಯದಲ್ಲೇ ಅವರು ದಾಖಲೆ ಬರೆದರು. ಮೆಕ್‌ಕಿಯಾನ್‌ ಶತಕದ ನಡುವೆಯೂ ಫ್ರಾನ್ಸ್ ಪಂದ್ಯದಲ್ಲಿ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಫ್ರಾನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಸ್ವಿಟ್ಜರ್ಲೆಂಡ್ ತಂಡ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು.

 French Batter Gustav Mckeon Youngest Cricketer To Score T20I Century

ಸ್ವಿಸ್ ನಾಯಕ ಫಹೀಮ್ ನಜೀರ್ 46 ಎಸೆತಗಳಲ್ಲಿ 67 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲಿ ನಯ್ಯರ್ ಕೇವಲ 16 ಎಸೆತಗಳಲ್ಲಿ 48 ರನ್ ಗಳಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು. ನಯ್ಯರ್ ಕೊನೆಯ ಮೂರು ಎಸೆತಗಳಲ್ಲಿ 12 ರನ್ ಗಳಿಸಿದರು, ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಫ್ರಾನ್ಸ್ ತಂಡವನ್ನು ಸೋಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+