ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2022: ವಸ್ತ್ರಸಂಹಿತೆ ಪಾಲಿಸದಿದ್ದರೆ ಜೈಲು ಶಿಕ್ಷೆ, ಮದ್ಯವೂ ನಿಷೇಧ

|
Google Oneindia Kannada News

ಇದೇ ನವೆಂಬರ್ 20 ರಿಂದ ವಿಶ್ವದ ಫುಟ್‌ಬಾಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ FIFA ವಿಶ್ವಕಪ್ 2022 ಕತಾರ್‌ನಲ್ಲಿ ಪ್ರಾರಂಭವಾಗುತ್ತಿದೆ. ವಿಶ್ವದ ಬಹುದೊಡ್ಡ ಕ್ರೀಡೆಯಾಗಿರುವ ಫುಟ್‌ಬಾಲ್‌ ವಿಶ್ವಕಪ್ ವೇಳೆ ಪಾರ್ಟಿ ಕೇಂದ್ರಗಳಾಗಿ ಕಾಣಿಸಿಕೊಳ್ಳುತ್ತಿದ್ದವು. ಎಲ್ಲೆಂದರೆ ಮದ್ಯ ಸೇವನೆ, ಬಿಕಿನಿಯಂತಹ ಉಡುಪು, ಪಂದ್ಯದ ವೇಳೆ ರೊಮ್ಯಾನ್ಸ್‌ ಹೀಗೆ ಅಭಿಮಾನಿಗಳು ಪಂದ್ಯ ಮುಗಿಯುವವರೆಗೂ ತಮಗೆ ಇಷ್ಟಂಬಂದತೆ ಆನಂದಿಸುವುದನ್ನು ಕಂಡಿದ್ದೆವು. ಆದರೆ ಇದ್ಯಾವುದೂ ಈ ಬಾರಿ ಪುಟ್‌ಬಾಲ್‌ ಅಭಿಮಾನಿಗಳಿಗೆ ಅನುಭವಿಸಲು ಅವಕಾಶ ಸಿಕ್ಕಿಲ್ಲ. ಕತಾರ್‌ ಸರಕಾರ ಎಲ್ಲದಕ್ಕೂ ಕಡಿವಾಣ ಹಾಕುತ್ತಿದೆ.

ಈ ಕುರಿತು ಕತಾರ್ ಪ್ರವಾಸೋದ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ವಿಶ್ವಕಪ್‌ಗಾಗಿ ದೇಶಕ್ಕೆ ಬರುವ ಫುಟ್‌ಬಾಲ್‌ನ ವಿದೇಶಿ ಅಭಿಮಾನಿಗಳು ಸ್ಥಳೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಬಟ್ಟೆಗಳನ್ನು ಧರಿಸಬೇಕೆಂದು ಹೇಳಿದೆ. ಇಲ್ಲಿನ ವಸ್ತ್ರಸಂಹಿತೆ ಕಡ್ಡಾಯವಾಗಿದೆ. ಪುರುಷರು ಮತ್ತು ಮಹಿಳೆಯರು ಸಾರ್ವಜನಿಕವಾಗಿ ಅಂಗಪ್ರದರ್ಶನ ಮಾಡುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

Fifa World Cup 2022: ತಂಡಗಳು, ಗುಂಪು, ಪಂದ್ಯದ ಸಮಯ ಮಾರ್ಗದರ್ಶಿFifa World Cup 2022: ತಂಡಗಳು, ಗುಂಪು, ಪಂದ್ಯದ ಸಮಯ ಮಾರ್ಗದರ್ಶಿ

ವಸ್ತ್ರಸಹಿಂತೆ ನಿಯಮದ ಪ್ರಕಾರ ಮಹಿಳೆಯರು ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಕಾಣದಂತಹ ಉಡುಪುಗಳನ್ನು ಧರಿಸುವಂತೆ ಸೂಚಿಸಿದೆ. ಈ ನಿಯಮವನ್ನು ಮೀರಿದರೆ ಕತಾರ್ ಕಾನೂನಿನ ಪ್ರಕಾರ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸೂಚನೆಯಲ್ಲಿ ತಿಳಿಸಿದೆ. ಮಹಿಳೆಯರಲ್ಲದೆ ಪುರುಷರು ಕೂಡ ಸಂಪೂರ್ಣ ಬಟ್ಟೆಯನ್ನು ಕಳಚಿದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ಅವಹೇಳನ ಕಾರಿ ಘೋಷಣೆ ಕೂಗಿದರೂ ಅಪರಾಧವಾಗುತ್ತದೆ ಎಂದು ತಿಳಿಸಲಾಗಿದೆ.

ವಿದೇಶಿ ಪ್ರವಾಸಿಗರಿಗೆ ನಿಬಂಧನೆಗಳು

ವಿದೇಶಿ ಪ್ರವಾಸಿಗರಿಗೆ ನಿಬಂಧನೆಗಳು

ಕುಡಿಯುವುದು, ಮಾದಕವಸ್ತು ಸೇವನೆ, ಲೈಂಗಿಕ ಚಟುವಟಿಕೆ ಮತ್ತು ಉಡುಗೆಗಳ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ದೇಶದ ಕಾನೂನು ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ವಿದೇಶಿ ಅಭಿಮಾನಿಗಳು ಗೌರವಿಸಬೇಕು. ಪ್ರಯಾಣಕ್ಕೂ ಮೊದಲು ಈ ಎಲ್ಲಾ ನಿರ್ಬಂಧಗಳಿಗೆ ಒಳಪಡಬೇಕು ಎಂಬುದನ್ನು ಪರಿಶೀಲಿಸಿ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಐಪಿಎಲ್‌ ಕ್ರಿಕೆಟ್- ಫಿಫಾ ವಿಶ್ವಕಪ್‌ ಟಿಕೆಟ್ ದರಗಳ ನಡುವಿನ ವ್ಯತ್ಯಾಸ ಎಷ್ಟು?ಐಪಿಎಲ್‌ ಕ್ರಿಕೆಟ್- ಫಿಫಾ ವಿಶ್ವಕಪ್‌ ಟಿಕೆಟ್ ದರಗಳ ನಡುವಿನ ವ್ಯತ್ಯಾಸ ಎಷ್ಟು?

ಸ್ಥಳೀಯ ಕಾನೂನನ್ನು ಗೌರವಿಸಿ

ಸ್ಥಳೀಯ ಕಾನೂನನ್ನು ಗೌರವಿಸಿ

ಫಿಫಾ ವೆಬ್‌ಸೈಟ್ ಕೂಡ ಕತಾರ್‌ ಪ್ರವಾಸೋದ್ಯಮದ ನಿಯಮಗಳನ್ನು ಪುನರುಚ್ಚರಿಸಿದ್ದು, ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವಂತೆ ಮನವಿ ಮಾಡಿದೆ. ಮಹಿಳೆಯರು ತಾವು ಇಷ್ಟಪಡುವ ಯಾವುದೇ ಧಿರಿಸನ್ನು ಧರಿಸಬಹುದು ಆದರೆ ಕತಾರ್‌ನ ಕಟ್ಟುನಿಟ್ಟಾದ ಕಾನೂನುಗಳನ್ನು ಮನಸ್ಸಿನಲ್ಲಿಟ್ಟುಕೊಂದು ತೋಳು ಮತ್ತು ಮೊಣಕಾಲು ಕಾಣದಿರುವ ಹಾಗೆ ಬಟ್ಟೆ ತೊಡಬೇಕೆಂದು ಎಂದು ಹೇಳಿದೆ.

ಮಧ್ಯ ಮಾರಾಟ ನಿಷೇಧ

ಮಧ್ಯ ಮಾರಾಟ ನಿಷೇಧ

ಕತಾರ್‌ ವಿಶ್ವಕಪ್‌ ವೇಳೆ ಪಂದ್ಯ ಆರಂಭದ 48 ಗಂಟೆಗಳ ಮೊದಲು ಸ್ಟೇಡಿಯಂಗಳಲ್ಲಿ ಮದ್ಯ ಮಾರಾಟವನ್ನು ಫಿಫಾ ನಿಷೇಧಿಸಿದೆ. ಆದರೆ ಈ ಹಿಂದೆ ಸ್ಟೇಡಿಯಂ 12 ಯೋರೋ ಮೊತ್ತದ ವಿಶೇಷ ಫ್ಯಾನ್ಸ್‌ ವಲಯದಲ್ಲಿ ಮಾತ್ರ ವ್ಯಕ್ತಿಯೊಬ್ಬರಿಗೆ ಸೀಮಿತ ಮದ್ಯವನ್ನು ಸರಬರಾಜಯ ಮಾಡಲಾಗುವುದು ಎಂದು ಘೋಷಿಸಿತ್ತು.

ಜೊತೆಗೆ ಕ್ರೀಡಾಂಗಣದ ಸಭಾಂಗಣದಲ್ಲೂ ಮದ್ಯ ಮಾರಾಟ ಮಾಡುವುದು ಎಂದು ಕರೆ ನೀಡಲಾಗಿತ್ತು. ಆದರೆ ಕತಾರ್‌ನ ಪವರ್‌ಫುಲ್‌ ರಾಜಮನೆತನ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ ತಂದ ನಂತರ ಫಿಫಾ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಆದರೆ ಲೈಸೆನ್ಸ್‌ ಹೊಂದಿರುವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಇರಲಿದೆ ಎಂದು ಫಿಫಾ ತಿಳಿಸಿದೆ.

15,000 ಕ್ಯಾಮೆರಾಗಳಿಂದ ನಿಗಾ

15,000 ಕ್ಯಾಮೆರಾಗಳಿಂದ ನಿಗಾ

ವಿಶ್ವಕಪ್‌ ನಡೆಯುವ 8 ಸ್ಟೇಡಿಯಂಗಳಲ್ಲೂ ಅಭಿಮಾನಿಗಳ ಮೇಲೆ ನಿಗಾ ಇಡಲು ಕ್ರೀಡಾಂಗಣಗಳಲ್ಲಿ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪಂದ್ಯಾವಳಿಯ ಸಂಪೂರ್ಣ ಈವೆಂಟ್ ಅನ್ನು ಮುಖವನ್ನು ಗುರುತಿಡಿಯುವಂತಹ ಐಟೆಕ್‌ ತಂತ್ರಜ್ಞಾನದ 15,000 ಕ್ಯಾಮೆರಾಗಳು ಪರಿಶೀಲನೆ ಮಾಡುತ್ತಿರುತ್ತವೆ ಎಂದು ಈವೆಂಟ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ನಿಯಾಸ್ ಅಬ್ದುಲ್‌ ರಹ್ಮಾನ್ ತಿಳಿಸಿದ್ದಾರೆ.

ನವೆಂಬರ್‌ 20 ರಂದು ಶುರುವಾಗಲಿದ್ದು ಡಿಸೆಂಬರ್ 18ರವರೆಗೆ ನಡೆಯಲಿದೆ. ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 22 ತಂಡಗಳು ಭಾಗವಹಿಸಲಿದ್ದು, ಮೊದಲ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಅತಿಥೇಯ ಕತಾರ್ ತಂಡಗಳು ಸೆಣಸಾಡಲಿವೆ.

English summary
FIFA World Cup 2022 is set to get underway in Qatar on November 20. Qatar government order football fans to strictly follow the dress code during the Games, if any one break, they can even land in jail according to Qatar law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X