• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2022: ಬೆಂಗಳೂರಿನಲ್ಲಿ ವಿಶ್ವಕಪ್ ವೀಕ್ಷಣೆಗಿರುವ ಉತ್ತಮ ಸ್ಥಳಗಳು

|
Google Oneindia Kannada News

ಬೆಂಗಳೂರು, ನ. 23: ಪುಟ್ಬಾಲ್ ಅಭಿಮಾನಿಗಳಿಗೆ ಪಂದ್ಯಗಳನ್ನು ನೇರವಾಗಿ ನೋಡಿ ಕಣ್ತುಂಬಿಕೊಳ್ಳುವ ಆಸೆ ಹೆಚ್ಚು. ಈ ಬಾರಿಯ ಫಿಪಾ ವಿಶ್ವಕಪ್ ಪಂದ್ಯಗಳನ್ನು ಒಳ್ಳೆ ಊಟ ಮತ್ತು ಪಾನೀಯಗಳನ್ನು ಸವಿಯುತ್ತಾ ನೋಡಬೇಕಿದ್ದರೆ ಇಲ್ಲಿವೆ ಐದು ಉತ್ತಮ ಸ್ಥಳಗಳು.

1) ಹಾರ್ಡ್ ರಾಕ್ ಕೆಫೆ: ಸೇಂಟ್ ಮಾರ್ಕ್ಸ್ ರೋಡ್ ಅಥವಾ ವೈಟ್‌ಫಿಲ್ಡ್‌ನಲ್ಲಿರುವ ಈ ಕೆಫೆ ಫಿಫಾ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಕ್ರೀಡಾಭಿಮಾನಿಗಳು ಇಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಬಹುದು. ಈ ಕೆಫೆ ಅಭಿಮಾನಿಗಳ ಮೆಚ್ಚಿನ ಮೆಸ್ಸಿ ಬರ್ಗರ್ - ಚಾಂಪಿಯನ್ಸ್ ಎಡಿಷನ್ ಅನ್ನು ಬಿಡುಗೆ ಮಾಡಿದೆ. ಸೋಮವಾರದಿಂದ ಭಾನುವಾರದವರೆಗೆ ಮಧ್ಯಾಹ್ನ 12 ರಿಂದ ರಾತ್ರಿ 1 ಗಂಟೆಯವರೆಗೆ ಕೆಫೆ ತೆರೆದಿರುತ್ತದೆ.

Fifa World Cup 2022: ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್Fifa World Cup 2022: ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್

2) ಹಲಸೂರಿನ ಹೋಮ್‌ಗ್ರೋನ್ ಕಾಫಿ ರೋಸ್ಟರ್‌ಗಳಾದ ಮೇವರಿಕ್ ಮತ್ತು ಫಾರ್ಮರ್ ಕೆಫೆ ಕೂಡ 2022 ಫುಟ್ಬಾಲ್ ವಿಶ್ವಕಪ್‌ಗಾಗಿ ಕಾಫಿಯ ವಿಶೇಷ ಮೆನುವನ್ನು ಪ್ರಾರಂಭಿಸಿದೆ. ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸುವ ದೇಶಗಳಿಂದ ಸ್ಫೂರ್ತಿ ಪಡೆದ ಏಳು ವಿಭಿನ್ನ ಕಾಫಿಗಳನ್ನು ಮೆನು ಒಳಗೊಂಡಿದೆ.

ನಿಮ್ಮ ನೆಚ್ಚಿನ ತಂಡವನ್ನು ಪ್ರತಿನಿಧಿಸುವ ಕಾಫಿಯನ್ನು ಕುಡಿಯುತ್ತಾ ನೆಚ್ಚಿನ ತಂಡದ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು. ಫುಟ್‌ಬಾಲ್ ಅಭಿಮಾನಿಗಳು ಮತ್ತು ಕಾಫಿ ಪ್ರಿಯರು ಇಂಗ್ಲೆಂಡ್, ಅರ್ಜೆಂಟೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಸ್ಪೇನ್ ಮತ್ತು ಕತಾರ್‌ನಿಂದ ಸ್ಫೂರ್ತಿ ಪಡೆದ ಕಾಫಿಯನ್ನು ಅನುಭವಿಸಬಹುದು. ಇಲ್ಲಿ ಸೋಮವಾರದಿಂದ ಭಾನುವಾರದವರೆಗೆ, ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಪಂದ್ಯಗಳ ನೇರ ಪ್ರಸಾರವಿರಲಿದೆ.

3) ಇಂದಿರಾನಗರ ಮತ್ತು ವೈಟ್‌ಫೀಲ್ಡ್‌ನಲ್ಲಿರು ಹಾಪ್‌ಶಾಸ್‌ನಲ್ಲಿ ಪುಟ್ಬಾಲ್ ಪಂದ್ಯಾವಳಿಗಳನ್ನು ನೇರ ಪ್ರಸಾರದ ಮೂಲಕ ನೋಡಬಹುದು. ವಿಶೇಷವಾಗಿ ವಿಶ್ವಕಪ್‌ಗಾಗಿ "ಫುಡ್-ಬಾಲ್" ಎಂಬ ಮೆನು ತಯಾರಿಸಲಾಗಿದೆ. ಕ್ರೀಡಾ ಪ್ರೇಮಿಗಳು ತಮ್ಮ ನೆಚ್ಚಿನ ತಂಡಕ್ಕೆ ಚಿಯಸ್‌ ಮಾಡುತ್ತಾ ರುಚಿಕರವಾದ ತಿಂಡಿಗಳನ್ನು ಹೊಟ್ಟೆಗೆ ಇಳಿಸಬಹುದು. ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 11.30 ರಿಂದ ರಾತ್ರಿ 11 ರವರೆಗೆ ಇಲ್ಲಿ ಪಂದ್ಯ ವೀಕ್ಷಿಸಲು ಅವಕಾಶವಿದೆ.

4) ಯುಬಿ ಸಿಟಿ ಮತ್ತು ಇಂದಿರಾನಗರದಲ್ಲಿವುವ ಸ್ಯಾಂಚೆಜ್‌ನಲ್ಲಿಯು ಫುಟ್ಬಾಲ್ ವಿಶ್ವಕಪ್ 2022 ಗಾಗಿ ಟೋರ್ಟಾ ಎಂಬ ಮೆಕ್ಸಿಕನ್ ಶೈಲಿಯ ಸ್ಯಾಂಡ್‌ವಿಚ್‌ಗಳ ಸರಣಿಯನ್ನು ಪ್ರಾರಂಭಿಸಿಸಲಾಗಿದೆ. ಫಿಫಾ ವಿಶ್ವಕಪ್‌ಗಾಗಿ ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 11:30 ರಿಂದ ರಾತ್ರಿ 10:30 ರವರೆಗೆ ಕೆಫೆ ತೆರೆದಿರುತ್ತದೆ.

5) ಇನ್ನು ಬೆಂಗಳೂರಿನ ಎಲ್ಲಾ ಸೋಷಿಯಲ್ ಔಟ್‌ಲೆಟ್‌ಗಳಲ್ಲಿಯೂ ಡಿಸೆಂಬರ್ 18 ರವರೆಗೆ ಫಿಫಾ ವಿಶ್ವಕಪ್ ಅಭಿಯಾನ ನಡೆಸಲಾಗುತ್ತಿದೆ. ಇವುಗಳಲ್ಲಿ ಅತ್ಯಾಕರ್ಷಕ ಫುಟ್ಬಾಲ್ ವಿಶ್ವಕಪ್ ಮೆನುವನ್ನು ನೋಡಬಹುದು. ಇಲ್ಲಿ ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ರವರೆಗೆ ತೆರದಿರುತ್ತವೆ.

English summary
FIFA World Cup 2022: If you want to watch fifa football World Cup live streaming in bengaluru. this are the top places. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X