ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಟ್ ಕೊಹ್ಲಿಗೆ ನಾಯಕ ಸ್ಥಾನ ನೀಡಿ ಎಂದು ಅಭಿಮಾನಿಗಳು ಹೇಳುತ್ತಿರೋದು ಯಾಕೆ?

|
Google Oneindia Kannada News

ಮೊಹಾಲಿ, ಸೆ. 21: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಸೋಲು ಕಂಡಿರುವುದಕ್ಕೆ ಅಭಿಮಾನಿಗಳು ರೋಹಿತ್ ಶರ್ಮಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನೀರಸ ಪ್ರದರ್ಶನವಾಗಲಿ, ಏಷ್ಯಾಕಪ್ ಫೈನಲ್‌ಗೆ ಪ್ರವೇಶಿಸಲು ಭಾರತ ತಂಡದ ವಿಫಲತೆಯಾಗಲಿ ತಂಡದ ನಾಯಕ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣಿದೆ.

ಮಂಗಳವಾರ, ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನವನ್ನು ನೀಡಿತು. ಇದರಿಂದಾಗಿ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಸೋಲು ಕಂಡಿದೆ ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಶರ್ಮಾ ನಾಯಕ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ.

ರೋಹಿತ್ ಬೇಡ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿ!

ರೋಹಿತ್ ಬೇಡ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿ!

ಆಸ್ಟ್ರೇಲಿಯಾಕ್ಕೆ ನಾಲ್ಕು ವಿಕೆಟ್‌ಗಳ ಗೆಲುವು ನೀಡಿದ ನಂತರ ಭಾರತ ತಂಡದ ರೋಹಿತ್ ಶರ್ಮಾ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಅವರನ್ನು ತಂಡದ ನಾಯಕರಾಗಿ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಕೆಲವು ಅಭಿಮಾನಿಗಳು ರೋಹಿತ್ ಶರ್ಮಾರನ್ನು ತಂಡದ ನಾಯಕನ ಸ್ಥಾನದಿಂದ ತೆಗೆದು ವಿರಾಟ್ ಕೊಹ್ಲಿಯನ್ನು ಮತ್ತೆ ತಂಡದ ನಾಯಕನಾಗಿ ಕರೆತರಬೇಕು ಎಂದು ಸಲಹೆ ನೀಡುತ್ತಿದ್ದಾರೆ.

ಮೈದಾನದಲ್ಲಿ ಸಿಕ್ಕ ಅವಕಾಶಗಳನ್ನು ಬಿಟ್ಟೆವು!

ಮೈದಾನದಲ್ಲಿ ಸಿಕ್ಕ ಅವಕಾಶಗಳನ್ನು ಬಿಟ್ಟೆವು!

ಪಂದ್ಯದ ಸೋಲಿನ ನಂತರ ಮಾತನಾಡಿದ ರೋಹಿತ್ ಶರ್ಮಾ, "ನಮ್ಮ ಬೌಲಿಂಗ್‌ ಚೆನ್ನಾಗಿತ್ತೆಂದು ನಾನು ಭಾವಿಸುವುದಿಲ್ಲ. ಎದುರಾಳಿ ತಂಡವನ್ನು ನಿಯಂತ್ರಿಸಲು 200 ರನ್‌ಗಳು ಉತ್ತಮ ಸ್ಕೋರ್‌ಗಳೇ. ಆದರೆ, ನಾವು ಮೈದಾನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿಲ್ಲ. ನಮ್ಮ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರಯತ್ನ ಹಾಕಿದ್ದಾರೆ, ಆದರೆ ಬೌಲರ್‌ಗಳು ಚೆನ್ನಾಗಿ ಆಡುವಲ್ಲಿ ವಿಫಲರಾಗಿದ್ದಾರೆ" ಎಂದು ಹೇಳಿದ್ದಾರೆ.

ಭಾರತ ಕಂಡ ಅತೀ ಕೊಟ್ಟ ನಾಯಕ ರೋಹಿತ್ ಎಂದ ನೆಟ್ಟಿಗರು!

ಭಾರತ ಕಂಡ ಅತೀ ಕೊಟ್ಟ ನಾಯಕ ರೋಹಿತ್ ಎಂದ ನೆಟ್ಟಿಗರು!

ಭಾರತದ ಸೋಲಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿರುವುದು ಹೀಗೆ.

ಒಪ್ಪಿ ಅಥವಾ ಬಿಡಿ, ಆದರೆ ರೋಹಿತ್ ಶರ್ಮಾ T20 ನಲ್ಲಿ ಅತ್ಯಂತ ಕೆಟ್ಟ ಭಾರತೀಯ ನಾಯಕ. ಪಾಕಿಸ್ತಾನದ ವಿರುದ್ಧ 180+ ಮತ್ತು ಶ್ರೀಲಂಕಾ ವಿರುದ್ಧ 170+ ಮತ್ತು ಆಸ್ಟ್ರೇಲಿಯಾ ವಿರುದ್ಧ 200+ ಈ ಎಲ್ಲಾ 3 ಪಂದ್ಯಗಳಲ್ಲಿ ರಕ್ಷಿಸಬಹುದಿತ್ತು ಎಂದು ಬೇಸರ ವ್ಯಕ್ತಡಿಸಿದ್ದಾರೆ.

7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ ವಿರಾಟ್ ಕೊಹ್ಲಿ

7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ ವಿರಾಟ್ ಕೊಹ್ಲಿ

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನವನ್ನು ನೀಡಿತು. ಇದರಿಂದಾಗಿ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಸೋಲು ಕಂಡಿದೆ. 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 208 ರನ್‌ಗಳಿಸಿ, ಆಸ್ಟ್ರೇಲಿಯಾ ತಂಡಕ್ಕೆ 209 ರನ್‌ ದಾಖಲೆಯ ಗುರಿ ನೀಡಿತ್ತು. ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 211 ರನ್‌ ಗಳಿಸಿ, 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಅವರ ಶಾಟ್ ಆಯ್ಕೆಯನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ.

English summary
Ind Vs Aus T20 : Fans Demand Return of Virat Kohli as Leader and BCCI has to sack Rohit Sharma as Captain. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X