Head Coach: ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಇನ್ನೊಂದು ಹೆಸರು ಎಂಟ್ರಿ
ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದ ಕೊನೆಗೊಳ್ಳಲಿದೆ. ಹೀಗಾಗಿ ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿಯನ್ನು ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಆಟಗಾರರು ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ.
ಟೀಮ್ ಇಂಡಿಯಾದ ಕೋಚ್ ಸ್ಥಾನದ ಮೇಲೆ ದೇಶ ಹಾಗೂ ವಿದೇಶಿ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಹೆಡ್ ಕೋಚ್ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ರೇಸ್‌ನಲ್ಲಿದ್ದರು. ಆದರೆ ಸ್ಟೀಫನ್ ಅದನ್ನು ನಿರಾಕರಿಸಿದರು. ಆಸ್ಟ್ರೇಲಿಯಾ ಆಟಗಾರರಿಗೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಟೀಂ ಇಂಡಿಯಾದ ಕೋಚ್ ಆಗಲು ಯಾವುದೇ ಆಸ್ಟ್ರೇಲಿಯಾದವರ ಅರ್ಜಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈಗ ಕೋಚ್ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬಂದಿವೆ. ಲಖ್ನೋ ಸೂಪರ್ ಜೇಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಸಹ ತಾವು ಸಹ ಟೀಮ್ ಇಂಡಿಯಾದ ಕೋಚ್ ಆಗಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ದೇಶ ಹಾಗೂ ವಿದೇಶಿ ಕೋಚ್‌ಗಳಿಗೂ ಅವಕಾಶ ಇದೆ ಎಂದು ಬಿಸಿಸಿಐ ತಿಳಿಸಿದೆ. ಈಗ ಈ ಲೀಸ್ಟ್‌ಗೆ ಹೊಸ ಎಂಟ್ರಿ ಆಗಿದೆ.
ಹೊಸ ಹೆಸರು ಎಂಟ್ರಿ
ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವ ರೇಸ್‌ನಲ್ಲಿ ಮಾಜಿ ಅನುಭವಿ ಗೌತಮ್ ಗಂಭೀರ್ ಹೆಸರು ಕೇಳಿ ಬಂದಿದೆ. ಈ ಋತುವಿನಲ್ಲಿ ಗಂಭೀರ್ ಕೆಕೆಆರ್‌ಗೆ ಮೆಂಟರ್ ಆಗಿ ಕೆಲಸ ಮಾಡಿದ ರೀತಿಯನ್ನು ನೋಡಿದರೆ, ಅವರನ್ನು ಈಗ ಮುಖ್ಯ ಕೋಚ್ ಆಗಲು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಯಶಸ್ವಿ ಮೆಂಟರ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆದ ಬಳಿಕ ಗೌತಮ್ ಗಂಭೀರ್ ಮಿಂಚಿದ್ದಾರೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಲು ಬಯಸಿದರೆ, ಮೊದಲು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ವರದಿಗಳ ಪ್ರಕಾರ ಗಂಭೀರ್ ಇನ್ನೂ ಅರ್ಜಿ ಸಲ್ಲಿಸಿಲ್ಲ. ಹೇಗಾದರೂ, ಎಲ್ಲವೂ ಸರಿಯಾಗಿ ನಡೆದರೆ ಮತ್ತು ಗೌತಮ್ ಗಂಭೀರ್ ಅರ್ಜಿಯನ್ನು ಹಾಕಿದ್ದೇ ಆದಲ್ಲಿ, ಬಿಸಿಸಿಐ ಖಂಡಿತವಾಗಿಯೂ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಮಾಡಬಹುದು.

ಮೇ 27 ರಂದು ಗಂಭೀರ ಅರ್ಜಿಗಳನ್ನು ಸಲ್ಲಿಸಬಹುದು. ಅದೇ ಸಮಯದಲ್ಲಿ, ಗಂಭೀರ್ ಈ ಬಗ್ಗೆ ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರೊಂದಿಗೆ ಇನ್ನೂ ಯಾವುದೇ ಮಾತುಕತೆ ನಡೆಸಿಲ್ಲ ಎಂದು ತಿಳಿದು ಬಂದಿದೆ.
ಕೆಕೆಆರ್ ಫೈನಲ್‌ಗೆ
ಗೌತಮ್ ಗಂಭೀರ್ ಐಪಿಎಲ್ 2022 ಮತ್ತು 2023 ರವರೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಆಗ ಲಕ್ನೋ ತಂಡದ ಪ್ರದರ್ಶನವು ಉತ್ತಮವಾಗಿತ್ತು. ಮತ್ತು ಇವರ ಸಮಯದಲ್ಲಿ ತಂಡವು ಎರಡೂ ಸೀಸನ್‌ಗಳಲ್ಲಿ ಪ್ಲೇ ಆಫ್‌ಗೆ ತಲುಪಿತ್ತು. ಈ ಋತುವಿನಲ್ಲಿ, ಗೌತಮ್ ತನ್ನ ಹಳೆಯ ತಂಡ ಕೆಕೆಆರ್ ಗೆ ಮೆಂಟರ್ ಆಗಿ ಮರಳಿದರು. ಗೌತಮ್ ಗಂಭೀರ್ ತಂಡ ಸೇರಿದ ಮೇಲೆ ತಂಡದ ಲಕ್ ಬದಲಾಗಿದೆ. ತಂಡದ ಪ್ರತಿಯೊಬ್ಬ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದಾರೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಗೌತಮ್ ಅವರನ್ನು ಹೊಗಳಿದ್ದಾರೆ. ಅದರ ಪರಿಣಾಮವೇ ಇಂದು ಕೆಕೆಆರ್ ಐಪಿಎಲ್ 2024ರ ಫೈನಲ್ ತಲುಪಿದೆ.












Click it and Unblock the Notifications