ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಇಯಾನ್ ಮಾರ್ಗನ್‌

|
Google Oneindia Kannada News

ಲಂಡನ್, ಜೂನ್ 28: ಇಂಗ್ಲೆಂಡ್ ಕ್ರಿಕೆಟ್‌ ಸರ್ವಶ್ರೇಷ್ಠ ಏಕದಿನ ಕ್ರಿಕೆಟ್ ತಂಡದ ನಾಯಕ ಇಯಾನ್‌ ಮಾರ್ಗನ್‌ ಮಂಗಳವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಕ್ರಿಕೆಟ್‌ ಜನಕರೆನಿಸಿಕೊಂಡಿದ್ದ ಆಂಗ್ಲರಿಗೆ ಹಲವು ದಶಕಗಳ ಕಾಲ ಮರೀಚಿಕೆಯಾಗಿದ್ದ ವಿಶ್ವಕಪ್‌ ಟ್ರೋಫಿಯನ್ನು 2019ರಲ್ಲಿ ಗೆಲ್ಲುವುದರಲ್ಲಿ ಮಾರ್ಗನ್‌ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಒಂದುವರೆ ವರ್ಷಗಳಿಂದ ಗಾಯ ಮತ್ತು ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ತಮ್ಮ 16 ವರ್ಷಗಳ ವೃತ್ತಿಬದುಕಿಗೆ ಮಂಗಳವಾರ ಗುಡ್‌ಬೈ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ

35 ವರ್ಷದ ಮಾರ್ಗನ್‌ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಬೇಕಂಬ ಆಶಯದಲ್ಲಿದ್ದರು. ಆದರೆ ಕಳಪೆ ಫಾರ್ಮ್‌ ಅವರ ಮನಸಿನ ನಿರ್ಧಾರವನ್ನು ಬದಲಾಯಿಸಿದೆ. ಅದರಲ್ಲೂ ಇತ್ತೀಚೆಗೆ ಮುಗಿದ ನೆದರ್ಲೆಂಡ್ಸ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರೂ ಆಡಿದ ಎರಡೂ ಪಂದ್ಯಗಳಲ್ಲೂ ಶೂನ್ಯಕ್ಕೆ ಔಟಾದ ಮೇಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್‌ ಕೊಟ್ಟು ,ಬೇಗ ಐಪಿಎಲ್ ಅವಕಾಶ ಸಿಗಲಿ ಎಂದ ಪಾಂಡ್ಯ ಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್‌ ಕೊಟ್ಟು ,ಬೇಗ ಐಪಿಎಲ್ ಅವಕಾಶ ಸಿಗಲಿ ಎಂದ ಪಾಂಡ್ಯ

ವಿದಾಯ ಹೇಳಲು ಸರಿಯಾದ ಸಮಯ

ವಿದಾಯ ಹೇಳಲು ಸರಿಯಾದ ಸಮಯ

" ಸೂಕ್ಷ್ಮವಾದ ಚೆರ್ಚೆ ನಂತರ ತಕ್ಷಣವೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ವೃತ್ತಿಜೀವನ ಅತ್ಯಂತ ಆನಂದದಾಯಕ ಮತ್ತು ಗೌರವಯುತ ಅಧ್ಯಾಯಕ್ಕೆ ತೆರೆ ಎಳೆಯುವುದು ಅಷ್ಟು ಸುಲಭದ ನಿರ್ಧಾರವಲ್ಲ, ಆದರೆ ಇದು ನನಗೆ ವೈಯಕ್ತಿಕವಾಗಿ ಮತ್ತು ಇಂಗ್ಲೆಂಡ್‌ ಸೀಮಿತ ಓವರ್‌ ತಂಡಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಟಿ20, ಏಕದಿನ ಸ್ವರೂಪದಲ್ಲಿ ಹೆಚ್ಚು ರನ್

ಟಿ20, ಏಕದಿನ ಸ್ವರೂಪದಲ್ಲಿ ಹೆಚ್ಚು ರನ್

ಇಯಾನ್ ಮಾರ್ಗನ್‌ ತಮ್ಮ ವೃತ್ತಿ ಜೀವನವನ್ನು ಐರ್ಲೆಂಡ್ ತಂಡದ ಪರವಾಗಿ ಆರಂಭಿಸಿದ್ದರು. 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 2009ರವರೆಗೆ ಐರ್ಲೆಂಡ್ ಪರ ಆಡಿದ್ದ ಅವರು, ನಂತರ ಇಂಗ್ಲೆಂಡ್‌ ತಂಡಕ್ಕೆ ಸೇರ್ಪಡೆಗೊಂಡು ವಿಶ್ವಕಪ್‌ ಸೇರಿದಂತೆ ಹಲವು ದಾಖಲೆ, ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಕ್ರಿಕೆಟ್ ಜನಕರ ಪರ 225 ಪಂದ್ಯಗಳನ್ನಾಡಿರುವ ಮಾರ್ಗನ್‌ 6957 ರನ್‌ಗಳಿಸಿದ್ದಾರೆ. 13 ಶತಕ ಮತ್ತು 42 ಅರ್ಧಶತಕ ಸಿಡಿಸಿದ್ದಾರೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹಸರಿಗೆ ಬರೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ ಅಲ್ಲದೇ ಟಿ20 ಮಾದರಿಯಲ್ಲೂ ಮಾರ್ಗನ್ ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟರ್ ಆಗಿದ್ದಾರೆ. ಅವರು 115 ಪಂದ್ಯಗಳಲ್ಲಿ 14 ಅರ್ಧಶತಗಳ ಸಹಿತ 2458 ರನ್‌ಗಳಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್‌ಗಳಿಸಿದ 9ನೇ ಬ್ಯಾಟರ್‌ ಆಗಿದ್ದಾರೆ.

ಏಕದಿನ ಇನಿಂಗ್ಸ್‌ನಲ್ಲಿ ಹೆಚ್ಚು ಸಿಕ್ಸರ್ ವಿಶ್ವದಾಖಲೆ

ಏಕದಿನ ಇನಿಂಗ್ಸ್‌ನಲ್ಲಿ ಹೆಚ್ಚು ಸಿಕ್ಸರ್ ವಿಶ್ವದಾಖಲೆ

ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿರುವ ಇಯಾನ್ ಮಾರ್ಗನ್‌ ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 17 ಸಿಕ್ಸರ್‌ ಸಿಡಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಅವರು ಕೇವಲ 71 ಎಸೆತಗಳಲ್ಲಿ 148 ರನ್‌ಗಳಿಸಿದ್ದರು.

ಸೀಮಿತ ಓವರ್‌ಗಳಲ್ಲಿ ಹೆಚ್ಚು ತಂಡ ಮುನ್ನಡೆಸಿದ ನಾಯಕ

ಸೀಮಿತ ಓವರ್‌ಗಳಲ್ಲಿ ಹೆಚ್ಚು ತಂಡ ಮುನ್ನಡೆಸಿದ ನಾಯಕ

ಮಾರ್ಗನ್‌ ಇಂಗ್ಲೆಂಡ್ ತಂಡದ ಪರ ಗರಿಷ್ಠ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ನಾಯಕ ಎನಿಸಿಕೊಂಡಿದ್ದಾರೆ. ಅವರು 126 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು, 76 ಪಂದ್ಯಗಳಲ್ಲಿ ಜಯ ಮತ್ತು 40 ಸೋಲು ಕಂಡಿದ್ದಾರೆ. ಇನ್ನು ಟಿ20ಯಲ್ಲಿ ಅವರು 72 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಇಂಗ್ಲೆಂಡ್ 42 ಜಯ ಮತ್ತು 27ರಲ್ಲಿ ಸೋಲು ಕಂಡಿದೆ. ಒಟ್ಟಾರೆ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಎಂಎಸ್ ಧೋನಿ ಜೊತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

English summary
One of the greatest captain of England Eoin morgan announced retirement for International cricket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X