ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಿಪಲ್‌ ಜಂಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಎಲ್ಡೋಸ್ ಪಾಲ್, ಜಮೈಕಾದ ಶೆರಿಕಾ ಜಾಕ್ಸನ್‌ಗೆ ಚಿನ್ನ

|
Google Oneindia Kannada News

ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ಡೋಸ್ ಪಾಲ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಪೌಲ್ 16.68 ಮೀಟರ್ ಜಿಗಿಯುವ ಮೂಲಕ ಎ ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಟ್ರಿಪಲ್ ಜಂಪ್ ಫೈನಲ್​ಗೆ ಅರ್ಹತೆ ಪಡೆದ ಮೊಟ್ಟ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಕೇರಳದವರಾದ ಎಲ್ಡೋಸ್ ಪಾಲ್ ಏಳು ವರ್ಷದ ಹಿಂದೆ ಕ್ರೀಡಾ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದರು. ಆದರೆ ತಮ್ಮ ಅದ್ಭುತ ಪ್ರದರ್ಶನದ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಪಾಲ್, ಅಲ್ಲಿ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದಾರೆ. ಒಂದು ವೇಳೆ ಫೈನಲ್‌ನಲ್ಲಿ ಪದಕ ಪಡೆದರೆ ಟ್ರಿಪಲ್‌ ಜಂಪ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ.

Breaking; ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್, ಫೈನಲ್‌ಗೆ ಚೋಪ್ರಾBreaking; ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್, ಫೈನಲ್‌ಗೆ ಚೋಪ್ರಾ

ಜಮೈಕಾದ ಓಟಗಾರ್ತಿ ಶೆರಿಕಾ ಜಾಕ್ಸನ್ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಓಟದ ವಿಭಾಗದಲ್ಲಿ ಜಮೈಕಾ ಮಹಿಳೆಯರು ಈವರೆಗೆ ಎರಡು ಪದಗಳನ್ನು ಗೆದ್ದಿದ್ದಾರೆ. 200 ಮೀಟರ್ ಗುರಿಯನ್ನು 21.45 ಸೆಕೆಂಡುಗಳಲ್ಲಿ ಓಡುವ ಮೂಲಕ ಶೆರಿಕಾ ಜಾಕ್ಸನ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

 ಭಾರತದ ಮೂವರು ಕ್ರೀಡಾಪಟುಗಳು ಪೈನಲ್‌ಗೆ ಲಗ್ಗೆ

ಭಾರತದ ಮೂವರು ಕ್ರೀಡಾಪಟುಗಳು ಪೈನಲ್‌ಗೆ ಲಗ್ಗೆ

ಟ್ರಿಪಲ್ ಜಂಪ್‍ನಲ್ಲಿ ಎಲ್ಡೋಸ್ ಪಾಲ್ ಫೈನಲ್​ ಪ್ರವೇಶಿಸಿದೆ. ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ. ಎಸೆದು ಬಿ ಗ್ರೂಪ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ 88.39 ಮೀ. ಎಸೆದು ಗ್ರೂಪ್ ಎ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಭಾರತದ ಮೂವರು ಕ್ರೀಟಾಪಟುಗಳು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‍ಶಿಪ್‍ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.

ಮ್ಯಾಂಚೆಸ್ಟರ್-ಟ್ರಿನಿಡಾಡ್ ವಿಮಾನ, ಕ್ರಿಕೆಟರ್ಸ್‌ಗಾಗಿ 3.5 ಕೋಟಿ ರು ವ್ಯಯ!ಮ್ಯಾಂಚೆಸ್ಟರ್-ಟ್ರಿನಿಡಾಡ್ ವಿಮಾನ, ಕ್ರಿಕೆಟರ್ಸ್‌ಗಾಗಿ 3.5 ಕೋಟಿ ರು ವ್ಯಯ!

 ಒಮ್ಮೆ ಮಾತ್ರ ಪದಕ ಗೆದ್ದಿರುವ ಭಾರತ

ಒಮ್ಮೆ ಮಾತ್ರ ಪದಕ ಗೆದ್ದಿರುವ ಭಾರತ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕೇವಲ 1 ಬಾರಿ ಮಾತ್ರ ಪದಕ ಗೆದ್ದಿದೆ. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕೂಟದಲ್ಲಿ ಅಂಜು ಬಾಬಿ ಜಾರ್ಜ್‌ ಲಾಂಗ್ ಜಂಪ್‌ ವಿಭಾಗದಲ್ಲಿ 6.70 ಮೀಟರ್ ಜಿಗಿಯುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಆದರೆ ಈ ಬಾರಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ನೀರಜ್ ಚೋಪ್ರಾ ಮೇಲೆ ಭಾರತೀಯರು ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಒಲಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಪಡೆದಿರುವ ಚೋಪ್ರಾ ಈಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
 200 ಮೀಟರ್ ಓಟದಲ್ಲಿ ಜಮೈಕಾದ ಶೆರಿಕಾ ಜಾಕ್ಸನ್‌ಗೆ ಚಿನ್ನ

200 ಮೀಟರ್ ಓಟದಲ್ಲಿ ಜಮೈಕಾದ ಶೆರಿಕಾ ಜಾಕ್ಸನ್‌ಗೆ ಚಿನ್ನ

ಜಮೈಕಾದ ಓಟಗಾರ್ತಿ ಶೆರಿಕಾ ಜಾಕ್ಸನ್ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 200 ಮೀಟರ್ ಗುರಿಯನ್ನು 21.45 ಸೆಕೆಂಡುಗಳಲ್ಲಿ ಓಡುವ ಮೂಲಕ ಎರಡನೇ ಅತಿ ಕಡಿಮೆ ಸಮಯದಲ್ಲಿ ಗುರಿ ಮುಟ್ಟಿದ ಸಾಧನೆ ಮಾಡಿದರು. 200 ಮೀಟರ್ ಓಟದ ಸ್ಫಧೆಯಲ್ಲಿ 2015 ಮತ್ತು 2019ರಲ್ಲಿ ಶೆರಿಕಾ ಜಾಕ್ಸನ್‌ ಬೆಳ್ಳಿ ಪದಕ ಗೆದ್ದಿದ್ದರು. 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ 200 ಮೀಟರ್ ಓಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

1988 ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್ ಬರೆದ 21.34 ದಾಖಲೆಯನ್ನು ಇದುವರೆಗೂ ಯಾರಿಗೂ ಅಳಿಸಲಾಗಿಲ್ಲ. ನೆದರ್ಲೆಂಡ್ಸ್‌ನ ಡಾಫ್ನೆ ಸ್ಕಿಪ್ಪರ್ಸ್ ನಿರ್ಮಿಸಿದ 21.63 ರ ಹಳೆಯ ವಿಶ್ವ ಚಾಂಪಿಯನ್‌ಶಿಪ್ ದಾಖಲೆಯನ್ನು ಗ್ರಿಫಿತ್ ಮುರಿದು ನೂತನ ದಾಖಲೆ ನಿರ್ಮಿಸಿದರು.
 ಅಭಿನಂದನೆ ಸಲ್ಲಿಸಿದ ಉಸೇನ್‌ ಬೋಲ್ಟ್‌

ಅಭಿನಂದನೆ ಸಲ್ಲಿಸಿದ ಉಸೇನ್‌ ಬೋಲ್ಟ್‌

ನಾಲ್ಕು ದಿನಗಳ ಹಿಂದೆ ಜಮೈಕಾದ ಮತೋರ್ವ ಅಥ್ಲಿಟ್ ಶೆಲ್ಲಿ-ಆನ್ ಫ್ರೇಸರ್ ಅವರಿಗಿಂತ 0.16 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಜಮೈಕಾ ಓಟದ ಸ್ಪರ್ಧೆಯಲ್ಲಿ ಇದುವರೆಗೂ ಎರಡು ಪದಕಗಳನ್ನು ಗೆದ್ದುಕೊಂಡಂತಾಗಿದೆ.

ಜಮೈಕಾ ಮಹಿಳಾ ಅಥ್ಲಿಟ್‌ಗಳ ಸಾಧನೆಗೆ ಉಸೇನ್‌ ಬೋಲ್ಟ್‌ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಉಸೇನ್ ಬೋಲ್ಟ್ ತಮ್ಮ ಆಟಗಾರ್ತಿಯರಿಗೆ ಎರಡು ಜಮೈಕಾ ಧ್ವಜಗಳ ಚಿತ್ರದ ಜೊತೆಗೆ "ಬ್ರಿಲಿಯಂಟ್" ಎಂದು ಹೇಳಿದ್ದಾರೆ.

English summary
Eldhose Paul became the first Indian to qualify for the triple jump final at the World Championships with an effort of 16.68m in Eugene, Oregon. Shericka Jackson gave the Jamaican women another gold medal in the sprints Thursday night, capturing the 200-meter title at the world championships in the second-fastest time in history, 21.45 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X