13 ವರ್ಷಗಳ ನಂತರ ದುಲೀಪ್ ಟ್ರೋಫಿಗೆ ಮುತ್ತಿಟ್ಟ ಪೂರ್ವ ವಲಯ; ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಭರ್ಜರಿ ಡ್ಯಾನ್ಸ್‌..

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌತ್ ಜೋನ್ ವಿರುದ್ಧ ಈಸ್ಟ್ ಜೋನ್ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬರೋಬ್ಬರಿ 13 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಸಿಕ್ಕ ಈ ಜಯವನ್ನು ಪೂರ್ವ ವಲಯ ತಂಡದ ಆಟಗಾರರು ಮೈದಾನದಲ್ಲಿ ಅದ್ಧೂರಿಯಾಗಿ ಸಂಭ್ರಮಿಸಿದರು. ಅದರಲ್ಲೂ ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮಾಡಿದ ನೃತ್ಯ ಭಾರಿ ವೈರಲ್‌ ಆಗುತ್ತಿದೆ.

ಪಂದ್ಯ ಮುಗಿದ ತಕ್ಷಣ ಈಸ್ಟ್ ಜೋನ್ ತಂಡದ ನಾಯಕ ಇಶಾನ್ ಕಿಶನ್ ಹಾಗೂ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಮೈದಾನದಲ್ಲಿದ್ದ ವಿಕೆಟ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಕುಣಿದು ಕುಪ್ಪಳಿಸಿದರು. ಹೆಡ್ ಕೋಚ್ ಹಾಗೂ ಇತರ ಸಹ ಆಟಗಾರರೊಂದಿಗೆ ಸೇರಿ ಇಬ್ಬರೂ ಮಾಡಿದ ಭಂಗ್ರಾ ಮಾದರಿಯ ಡ್ಯಾನ್ಸ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Duleep Trophy 2026 East Zone Champions Ishan Kishan-Vaibhav Sooryavanshi Dance Goes huge Viral

ಅಬ್ಬರಿಸಿದ ನಾಯಕ ಇಶಾನ್ ಕಿಶನ್

ನಾಯಕ ಇಶಾನ್ ಕಿಶನ್ ಅವರ ಅದ್ಭುತ ದ್ವಿಶತಕ (270 ರನ್) ಹಾಗೂ ಯುವ ಆಟಗಾರರ ಕೊಡುಗೆಯಿಂದಾಗಿ ಈಸ್ಟ್ ಜೋನ್ ಮೊದಲ ಇನಿಂಗ್ಸ್‌ನಲ್ಲಿ 708 ರನ್‌ಗಳ ಬೃಹತ್‌ ಮೊತ್ತವನ್ನು ದಾಖಲಿಸಿತು. ಬಳಿಕ ಬ್ಯಾಟಿಂಗ್‌ಗಿಳಿದ ಸೌತ್ ಜೋನ್ ತಂಡವನ್ನು 336 ರನ್‌ಗಳಿಗೆ ಆಲ್ಔಟ್ ಮಾಡುವ ಮೂಲಕ ಈಸ್ಟ್ ಜೋನ್ 372 ರನ್‌ಗಳಿಂದ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್‌ನಲ್ಲೂ 80 ರನ್ ಸಿಡಿಸಿದ ಇಶಾನ್ ಕಿಶನ್, ಒಂದೇ ಪಂದ್ಯದಲ್ಲಿ ಒಟ್ಟು 350 ರನ್ ಬಾರಿಸಿ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೊಸ ವಿಶ್ವದಾಖಲೆ ಬರೆದು ಗಮನ ಸೆಳೆದರು. ಇನ್ನೂ ಈಸ್ಟ್ ಜೋನ್ ತಂಡವು ಕೊನೆಯ ಬಾರಿಗೆ ದುಲೀಪ್ ಟ್ರೋಫಿ ಗೆದ್ದುಕೊಂಡಿದ್ದ ಸುದೀರ್ಘ ಸಮಯದ ನಂತರ ಮತ್ತೆ ಚಾಂಪಿಯನ್ ಪಟ್ಟಕ್ಕೇರಿದ ಸಂಭ್ರಮದಲ್ಲಿದೆ.

ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕಿಶನ್-ವೈಭವ್ ನೃತ್ಯ

ತಂಡದ ನಾಯಕ 28 ವರ್ಷದ ಇಶಾನ್ ಕಿಶನ್ ಹಾಗೂ 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ ನಡುವಿನ ಉತ್ತಮ ಸ್ನೇಹ ಮೈದಾನದಲ್ಲಿ ಪ್ರೇಕ್ಷಕರ ಮನ ಗೆದ್ದಿತು. ಕಠಿಣ ಪರಿಶ್ರಮದ ನಂತರ ಟ್ರೋಫಿ ಎತ್ತಿಹಿಡಿದ ತಂಡದ ಆಟಗಾರರ ತಮಾಷೆಯ ಸಂಭ್ರಮಾಚರಣೆಯನ್ನು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ.

ಈಸ್ಟ್ ಜೋನ್ ತಂಡದ ಈ ಐತಿಹಾಸಿಕ ಜಯವು ಭಾರತೀಯ ದೇಶಿಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇಶಾನ್ ಕಿಶನ್ ನಾಯಕತ್ವದ ಯಶಸ್ಸು ಹಾಗೂ ತಂಡದ ಈ ವೈರಲ್ ಸಂಭ್ರಮಾಚರಣೆ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಅದರಲ್ಲೂ ವೈಭವ್ ಸೂರ್ಯವಂಶಿಯನ್ನು ಇಶಾನ್ ತನ್ನ ತಮ್ಮನಂತೆ ಅಪ್ಪಿಕೊಂಡು ಕುಣಿದಾಡಿರುವುದು ಸಖತ್ ವೈರಲ್‌ ಆಗುತ್ತಿದೆ.

ಪಂದ್ಯದ ವಿವರ

ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 336 ರನ್‌ಗಳಿಗೆ ದಕ್ಷಿಣ ವಲಯವನ್ನು ಆಲ್ಔಟ್ ಮಾಡಿದ ಪೂರ್ವ ವಲಯ, ಭಾರಿ 372 ರನ್‌ಗಳ ಮುನ್ನಡೆಯನ್ನು ಸಾಧಿಸಿತು. ಎದುರಾಳಿಗೆ ಫಾಲೋ ಆನ್ ನೀಡುವ ಅವಕಾಶವಿದ್ದರೂ, ಪೂರ್ವ ವಲಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಸ್ವತಃ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಂತಿಮ ದಿನದಂದೂ ಸಹ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪೂರ್ವ ವಲಯ, 7 ವಿಕೆಟ್ ನಷ್ಟಕ್ಕೆ 388 ರನ್ ಗಳಿಸಿದ್ದಾಗ ತನ್ನ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಸಮಯದ ಅಭಾವದಿಂದಾಗಿ ಅಂಪೈರ್‌ಗಳು ಪಂದ್ಯವನ್ನು ಡ್ರಾ ಎಂದು ಘೋಷಿಸಿದರು. ಟೂರ್ನಿಯ ನಿಯಮಾವಳಿಗಳ ಪ್ರಕಾರ, ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ್ದ ಪೂರ್ವ ವಲಯವನ್ನು ಅಧಿಕೃತವಾಗಿ ಚಾಂಪಿಯನ್ ಎಂದು ಘೋಷಿಸಲಾಯಿತು. ಪೂರ್ವ ವಲಯ ತಂಡವು ಈ ಮೊದಲು 2011-12 ಹಾಗೂ 2012-13ರ ಋತುಗಳಲ್ಲಿ ಸತತವಾಗಿ ಪ್ರಶಸ್ತಿಯನ್ನು ಗೆದ್ದು ಬೀಗಿತ್ತು. ಆದರೆ ನಂತರ ಚಾಂಪಿಯನ್ ಪಟ್ಟಕ್ಕೇರಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಇತಿಹಾಸ ನಿರ್ಮಾಣ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+