ಆರ್‌ಸಿಬಿ ಹೆಸರಲ್ಲೇ ನಂಬರ್ ಪ್ಲೇಟ್: ಅಮೆರಿಕದಲ್ಲಿ ಐಷಾರಾಮಿ ಕಾರಿಗೆ ಆರ್‌ಸಿಬಿ ಹೆಸರು ನಾಮಕರಣ!

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಅದೆಷ್ಟೇ ಬಾರಿ ಸೋತರೂ, ಆರ್‌ಸಿಬಿ ತಂಡಕ್ಕೆ ಮಾತ್ರ ಅತ್ಯಂತ ನೀಯತ್ತಾದ ಅಭಿಮಾನಿಗಳು ಇದ್ದಾರೆ. ಪ್ರತಿ ಪಂದ್ಯದಲ್ಲೂ ಹೊಸ ಶಕ್ತಿ & ಹುಮ್ಮಸ್ಸಿನ ಮೂಲಕ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಬೆಂಬಲಿಸಲು ಬರುತ್ತಾರೆ. ಈ ಕಾರಣಕ್ಕೆ ಆರ್‌ಸಿಬಿ ತಂಡ ಈಗ ವರ್ಲ್ಡ್ ಫೇಮಸ್ ಐಪಿಎಲ್ ಟೀಂ ಆಗಿದೆ. ಹೀಗಿದ್ದಾಗ ಈ ನಮ್ಮ RCB ಬೆಂಗಳೂರು ತಂಡಕ್ಕೆ ಅಮೆರಿಕ ಟು ಆಫ್ರಿಕಾ ಎಲ್ಲಾ ದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಇದೇ ರೀತಿ ಅಮೆರಿಕದಲ್ಲಿ ಇರುವ ಅಭಿಮಾನಿ ಒಬ್ಬರು ಎಂದಿಗೂ ಮರೆಯಲಾಗದ ಉಡುಗೊರೆಯನ್ನು ಆರ್‌ಸಿಬಿ ತಂಡಕ್ಕೆ ನೀಡಿದ್ದಾರೆ!

ಹೌದು ಆರ್‌ಸಿಬಿ ಅಂದ್ರೆ ಅದು ಕೇವಲ ಐಪಿಎಲ್ ತಂಡವಲ್ಲ ಅದೊಂದು ಭಾವನೆ ಎಂಬ ರೀತಿಯಲ್ಲೇ ಕನ್ನಡಿಗರು ಮಾತನಾಡುತ್ತಾರೆ. ಹೀಗಾಗಿಯೇ ಆರ್‌ಸಿಬಿ ತಂಡಕ್ಕೆ ಜಗತ್ತಿನ ಪ್ರತಿ ಮೂಲೆಯಲ್ಲೂ ಫ್ಯಾನ್ಸ್ ಇದ್ದಾರೆ. ಇನ್ನು ಇದೇ ರೀತಿ ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಕೂಡ ಆರ್‌ಸಿಬಿ ಬೆಂಗಳೂರು ತಂಡದ ಮಹಿಳಾ ಅಭಿಮಾನಿ ಒಬ್ಬರು ಇದ್ದಾರೆ. ಅವರು ಈಗ ತಮ್ಮ ಕಾರ್ ನಂಬರ್ ಪ್ಲೇಟ್‌ಗೆ ಆರ್‌ಸಿಬಿ ಹೆಸರು ನಾಮಕರಣ ಮಾಡಿದ್ದಾರೆ. ಅಲ್ಲದೆ ತಾವು ಯಾಕೆ ಆರ್‌ಸಿಬಿ ತಂಡವನ್ನು ಇಷ್ಟಪಡುವುದು? ಎಂಬ ಬಗ್ಗೆಯೂ ಮಹಿಳೆ ತಿಳಿಸಿದ್ದಾರೆ.

Discover Why Royal Challengers Bengaluru Fan Purchased Number Plate In RCB Name

ವಿರಾಟ್ ಕೊಹ್ಲಿ + ಆರ್‌ಸಿಬಿ ತಂಡ!

ಇಲ್ಲಿ ಮತ್ತೊಂದು ವಿಶೇಷತೆ ಏನಪ್ಪಾ ಅಂದ್ರೆ, ಆರ್‌ಸಿಬಿ ತಂಡದ ಈ ಮಹಿಳಾ ಅಭಿಮಾನಿ ವಿರಾಟ್ ಕೊಹ್ಲಿ ಅವರಿಗೂ ಅಭಿಮಾನಿ ಆಗಿದ್ದಾರೆ. ಇದೇ ಕಾರಣಕ್ಕೆ ತಮ್ಮ ಕಾರ್ ನಂಬರ್ ಪ್ಲೇಟ್‌ನಲ್ಲಿ ಆರ್‌ಸಿಬಿ ಜೊತೆಗೆ ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ 18ಕ್ಕೆ ಕೂಡ ಸ್ಥಾನ ಕೊಟ್ಟಿದ್ದಾರೆ. ಆರ್‌ಸಿಬಿ ಅಭಿಮಾನಿಯ ಕಾರ್ ವಿಡಿಯೋ ನೋಡಲು ಮುಂದೆ ಓದಿ. ಹಾಗೇ ಆರ್‌ಸಿಬಿ ಅಭಿಮಾನಿ ತಮ್ಮ ಕಾರ್ ಮುಂದೆ ನಿಂತು, ಆರ್‌ಸಿಬಿ ತಂಡದ ಬಗ್ಗೆ ಏನು ಹೇಳಿದ್ದಾರೆ ಅಂತಾ ಕೂಡ ಸಂಪೂರ್ಣ ವಿಡಿಯೋ ನೋಡಿ.

ಆರ್‌ಸಿಬಿ ಅಂದ್ರೆ ಫ್ಯಾನ್ಸ್‌ಗೆ ಜೀವ!

ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಒಂದು ಹಬ್ಬದ ರೀತಿ ಜನ ಸೆಲೆಬ್ರೇಷನ್‌ ಮಾಡ್ತಾ ಖುಷಿ ಹಂಚಿಕೊಳ್ಳುತ್ತಾರೆ. ಅದ್ರಲ್ಲೂ ಬೆಂಗಳೂರು ನಿವಾಸಿಗಳಿಗೆ ಮತ್ತು ಕನ್ನಡಿಗರಿಗೆ ಆರ್‌ಸಿಬಿ ತಂಡವೇ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ, ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದ್ರೂ ಕನ್ನಡಿಗರು ಮಾತ್ರ RCB ತಂಡದ ಕೈನ ಬಿಟ್ಟಿಲ್ಲ.

ಹಾಗೇ ಈ ಬಾರಿ ಅಂದ್ರೆ 17ನೇ ಬಾರಿಯ ಐಪಿಎಲ್‌ನಲ್ಲಿ RCB ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ ಖುಷಿಯಾಗಿದ್ದರು ಅಭಿಮಾನಿಗಳು. 'ಈ ಸಲ ಕಪ್ ನಮ್ದೆ' ಅಂತಾ ಹೇಳುತ್ತಿದ್ದರು ಫ್ಯಾನ್ಸ್. ಆದರೆ ಆರ್‌ಸಿಬಿ ಮಾತ್ರ ಸಾಲು ಸಾಲು ಸೋಲು ಕಂಡು ನಿರಾಸೆ ಮೂಡಿಸಿತ್ತು. ಈಗ ಮತ್ತೆ ಕಂಬ್ಯಾಕ್ ಮಾಡಿದ್ದು, ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುವ ನಿರೀಕ್ಷೆ ಇದೆ.

ಕೊಹ್ಲಿ ಕೆಣಕಿದರೆ ಮುಗೀತು ಕಥೆ!

ವಿರಾಟ್ ಕೊಹ್ಲಿ ವಿರುದ್ಧ ಕ್ರಿಕೆಟ್ ಮೈದಾನದಲ್ಲಿ ಎಗರಾಡಿ ಗೆದ್ದವರು ಯಾರೂ ಇಲ್ಲ ಬಿಡಿ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಇರುವ ಕೆಪಾಸಿಟಿ ಏನು ಅಂತಾ ಎಲ್ಲರಿಗೂ ಗೊತ್ತು. ಒಮ್ಮೆ ಎದುರಾಳಿ ತಂಡದ ಆಟಗಾರರು ಕೆಣಕಿಕೊಂಡು ಬಂದರೆ, ವಿರಾಟ್ ಕೊಹ್ಲಿ ಅಲ್ಲೇ ಡ್ರಾ & ಅಲ್ಲೇ ಬಹುಮಾನ ಅಂತಾ ಘೋಷಣೆ ಮಾಡಿ ಬಿಡುತ್ತಾರೆ. ಇಷ್ಟು ಇಲ್ಲದಿದ್ದರೆ ವಿರಾಟ್‌ಗೆ ಆಸ್ಟ್ರೇಲಿಯಾ ತಂಡವನ್ನು ಸೈಲೆಂಟ್ ಮಾಡುವುದು ಸಾಧ್ಯವಾಗುತ್ತಿತ್ತಾ? ಅಥವಾ ಜಗತ್ತಿಗೇ ಸ್ಲೆಡ್ಜಿಂಗ್ ಮಾಡುವುದನ್ನ ಕಲಿಸಿಕೊಟ್ಟ ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿಯನ್ನ ಕಂಡು ಸೈಲೆಂಟ್ ಆಗಿದ್ದು ನಿಮಗೆಲ್ಲಾ ಗೊತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+