ICC World Cup 2023: ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಅಹಂಕಾರ ನೋಡಿ!
ಭಾರತ ಕ್ರಿಕೆಟ್ ತಂಡ 2023 ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀನಾಯ ಸೋಲನ್ನ ಕಂಡಿದೆ. ಆಸ್ಟ್ರೇಲಿಯಾ ಸುಲಭವಾಗಿ ಮ್ಯಾಚ್ ಗೆದ್ದು 2023ರ ಐಸಿಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಬರೀ ಮುತ್ತಿಟ್ಟಿದ್ದು ಮಾತ್ರವಲ್ಲ, ಟ್ರೋಫಿಯನ್ನ ಕಾಲ ಕೆಳಗೆ ಹಾಕಿಕೊಂಡು ಆಸ್ಟ್ರೇಲಿಯಾ ಆಟಗಾರರು ಅಹಂಕಾರ ತೋರಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಹೌದು ಆಸ್ಟ್ರೇಲಿಯಾ ಆಟಗಾರರು ಪದೇ ಪದೆ ತಮ್ಮ ಕೆಟ್ಟ ವರ್ತನೆ ಮೂಲಕ ಜಗತ್ತಿನಲ್ಲಿ ಸದ್ದು ಮಾಡಿದ್ದಾರೆ. ಅದರಲ್ಲೂ ಕ್ರಿಕೆಟ್ ಅಂಗಳದಲ್ಲಿ ಇವರ ವರ್ತನೆ ಕಂಡು ಹಲವಾರು ಬಾರಿ ಆಕ್ರೋಶ ಕೂಡ ವ್ಯಕ್ತವಾಗಿದೆ. ಈಗ 2023 ಐಸಿಸಿ ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದು ಮತ್ತದೇ ಅಹಂಕಾರ ತೋರಿಸಿದ್ದಾರೆ. ಮಿಚೆಲ್ ಮಾರ್ಷ್ ಅವರು ಐಸಿಸಿ ವಿಶ್ವಕಪ್‌ನ ಟ್ರೋಫಿ ಮೇಲೆ ಕಾಲಿಟ್ಟುಕೊಂಡು ಕೂತಿರುವ ಫೋಟೋ ಸಂಚಲನ ಸೃಷ್ಟಿಸಿದೆ.

ಗೆದ್ದ ಅಮಲಿನಲ್ಲಿ ಆಸಿಸ್ ಅಹಂಕಾರ!
ಭಾರತ ನಿನ್ನೆ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮ್ಯಾಚ್ ಕೂಡ ಸೋತಿದೆ. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಬೆನ್ನೆಲುಬಾಗಿ ನಿಂತರು. ಇಷ್ಟಾದ್ರೂ ಕೇವಲ 240 ರನ್ ಗಳಿಸಿ ಭಾರತ ಆಲೌಟ್ ಆಗಿತ್ತು. ಕೊನೆಗೆ 241 ರನ್‌ಗಳ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ ಸುಲಭವಾಗಿ ಗುರಿ ತಲುಪಿ ಗೆದ್ದು ಬೀಗಿತ್ತು. ಈ ಮೂಲಕ ಟ್ರೋಫಿಯನ್ನೂ ತನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಮಿಚೆಲ್ ಮಾರ್ಷ್ ಮಾಡಿರುವ ಕೆಲಸಕ್ಕೆ ಈಗ ಬೆಂಕಿ ಹೊತ್ತಿದೆ.
ಐಸಿಸಿ ವಿಶ್ವಕಪ್ ಟ್ರೋಫಿ ಮೇಲೆ ಕಾಲು!
ನಿನ್ನೆ ರಾತ್ರಿ ಭಾರತದ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಮ್ಯಾಚ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ. ಈ ಸೆಲೆಬ್ರೇಷನ್ ವೇಳೆ, ಕುಡಿದು ತೂರಾಡಿದ್ದಾರೆ ಆಸ್ಟ್ರೇಲಿಯಾ ಆಟಗಾರರು ಎನ್ನುವ ಆರೋಪ ಕೂಡ ಇದೆ. ಇಷ್ಟೇ ಅಲ್ಲ, ಮಿಚೆಲ್ ಮಾರ್ಷ್ ಐಸಿಸಿ ವಿಶ್ವಕಪ್ ಟ್ರೋಫಿ ಮೇಲೆ ಕಾಲು ಇಟ್ಟಿರುವ ಫೋಟೋ ವೈರಲ್ ಆಗುತ್ತಿದೆ. ಈ ಬಗ್ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಆಕ್ರೋಶ ಮೊಳಗಿದೆ.

ಟ್ರೋಫಿ ಮೇಲೆ ಕಾಲು ಕೈಯಲ್ಲಿ ಬಿಯರ್!
ಮಿಚೆಲ್ ಮಾರ್ಷ್ ಐಸಿಸಿ ವಿಶ್ವಕಪ್ ಟ್ರೋಫಿಯ ಮೇಲೆ ಕಾಲು ಇಟ್ಟಿರುವುದು ಮಾತ್ರವಲ್ಲ ಆಗ ಕೈಯಲ್ಲಿ ಬಿಯರ್ ಕೂಡ ಹಿಡಿದಿದ್ದಾರೆ. ಹೀಗಾಗಿ ಆಕ್ರೊಶ ಮತ್ತಷ್ಟು ಹೆಚ್ಚಾಗುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಮಿಚೆಲ್ ಮಾರ್ಷ್‌ಗೆ ಈ ಬಗ್ಗೆ ಬೈದು, ಬುದ್ಧಿ ಹೇಳುತ್ತಿದ್ದಾರೆ.
ಒಟ್ನಲ್ಲಿ ಒಂದ್ಕಡೆ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಸೋತಿದೆ ಅಂತಾ ಈಗ ಫ್ಯಾನ್ಸ್ ನೊಂದಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಅತಿರೇಕ ಕೂಡ ವೈರಲ್ ಆಗುತ್ತಿದ್ದು ಈ ಬಗ್ಗೆ ಆಕ್ರೋಶವೂ ಮೊಳಗಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.
6 ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ!
ಆಸ್ಟ್ರೇಲಿಯಾ 2023 ಸೇರಿದಂತೆ ಒಟ್ಟು 6 ಬಾರಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಂತಾಗಿದ್ದು, ಈ ಹಿಂದೆ ಕೂಡ ಇದೇ ರೀತಿ ಆಸಿಸ್ ಆಟಗಾರರ ವರ್ತನೆ ವೈರಲ್ ಆಗಿತ್ತು. ಆಸ್ಟ್ರೇಲಿಯಾ 5 ಬಾರಿ ಚಾಂಪಿಯನ್ಸ್ ಆಗಿದೆ ಅಂದ್ರೆ, 1987, 1999, 2003, 2007, 2015 ರಲ್ಲಿ ವಿಶ್ವಕಪ್ ಗೆದ್ದು ಬೀಗಿತ್ತು. ಹಾಗೇ 2 ಬಾರಿ ರನ್ನರ್ಸ್ ಅಪ್ ಆಗಿತ್ತು, 2023ರ ಐಸಿಸಿ ಏಕದಿನ ವಿಶ್ವಕಪ್‌ನ ಕೂಡ ಗೆದ್ದು ಹೊಸ ಚರಿತ್ರೆ ಬರೆದಿದೆ. ಇದೆಲ್ಲ ಓಕೆ ಆಸ್ಟ್ರೇಲಿಯಾ ಆಟಗಾರರ ಅತಿರೇಕದ ವರ್ತನೆ ಯಾಕೆ? ಅಂತಾ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications