ಐಸಿಸಿ ವಿಶ್ವಕಪ್: ವಿರಾಟ್ ಕೊಹ್ಲಿ 9 ವರ್ಷಗಳ ನಂತರ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದು ಹೇಗೆ?

ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲಾ ಚಿನ್ನ, ಅದು ಬೌಲಿಂಗ್ ಇರಲಿ ಅಥವಾ ಬ್ಯಾಟಿಂಗ್ ಇರಲಿ ಕೊಹ್ಲಿ ಕಾಲಿಟ್ಟರೆ ಎಲ್ಲವೂ ಧೂಳ್ ಧೂಳ್. ಅದ್ರಲ್ಲೂ 2023ರ ಐಸಿಸಿ ವಿಶ್ವಕಪ್‌ನ ಪ್ರತಿ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಮಿಂಚಿದ್ದು ತಮ್ಮ ಬ್ಯಾಟ್‌ನಿಂದ ನೂರಾರು ರನ್ ಮಳೆಯನ್ನೇ ಹರಿಸಿದ್ದಾರೆ. ರನ್ ಮಾತ್ರವಲ್ಲ, ಈಗ ತಾವು ಬೌಲಿಂಗ್ ಅಖಾಡದಲ್ಲಿ ಕೂಡ ಎಷ್ಟು ಬಲಿಷ್ಠ ಅನ್ನೋದನ್ನ ವಿರಾಟ್ ಕೊಹ್ಲಿ ತೋರಿಸಿದ್ದಾರೆ.

ವಿರಾಟ್ ಕೊಹ್ಲಿ ಮೂಲತಃ ಒಬ್ಬ ಆಲ್‌ರೌಂಡರ್ ಅಂದ್ರೆ ಬ್ಯಾಟಿಂಗ್ ಮಾಡೋದಕ್ಕೂ ಸೈ ಅಥವಾ ಬೌಲಿಂಗ್ ಮಾಡೋಕು ಜೈ. ಇಂತಹ ಆಟಗಾರ ಬ್ಯಾಟಿಂಗ್ ವಿಭಾಗದ ಕಡೆ ಭಾರಿ ಗಮನ ಹರಿಸಿದ ಕಾರಣ ಬೌಲಿಂಗ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಈ ಕಾರಣ, ಕೊಹ್ಲಿ ಬೌಲಿಂಗ್ ವಿಭಾಗದಲ್ಲಿ ಅಷ್ಟೊಂದು ಮಿಂಚು ಹರಿಸಲಿಲ್ಲ. ಹೀಗಿದ್ದಾಗಲೇ ಕೊಹ್ಲಿ ನಿನ್ನೆ ನಮ್ಮ ಬೆಂಗಳೂರಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದು, ಯಾರೂ ನಿರ್ಮಿಸಲು ಆಗದ ದಾಖಲೆ ನಿರ್ಮಿಸಿದ್ದಾರೆ.

virat-kohli-has-been-created-record

9 ವರ್ಷಗಳ ನಂತರ ಕೊಹ್ಲಿಗೆ ವಿಕೆಟ್!

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದು 2008ರಲ್ಲಿ, ಆದ್ರೆ ವಿರಾಟ್ ಕೊಹ್ಲಿಗೆ ಮೊದಲ ವಿಕೆಟ್ ಬಿದ್ದಿದ್ದು 2011 ರಲ್ಲಿ. ಆಗಿನ ಕಾಲಘಟ್ಟಕ್ಕೆ ಇಂಗ್ಲೆಂಡ್ ಟೀಂನ ಏಕದಿನ ಮಾದರಿ ಪಂದ್ಯಗಳಿಗೆ ನಾಯಕನಾಗಿದ್ದ ಅಲೆಸ್ಟರ್ ಕುಕ್ ಅವರ ವಿಕೆಟ್ ಉರುಳಿಸಿ ಗಮನ ಸೆಳೆದರು. ಇದಾದ ಬಳಿಕ ಅದೇ ವರ್ಷದಲ್ಲಿ ಅಂದರೆ 2011 ರಲ್ಲಿ ಕ್ರೇಗ್ ಕೀಸ್ವೆಟರ್ ಅವರ ವಿಕೆಟ್ ಉರುಳಿಸಿದರು. ನಂತರ ದಕ್ಷಿಣ ಆಫ್ರಿಕಾ ತಂಡದ ದಾಂಡಿಗ, ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಉರುಳಿಸಿದರು. ಇನ್ನು ಅದೇ ವರ್ಷದಲ್ಲಿ ಅಂದ್ರೆ 2014 ರಲ್ಲಿ ಇದೇ ಕೊಹ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ವಿಕೆಟ್‌ನ ಉರುಳಿಸಿ ದಾಖಲೆ ಬರೆದರು.

ಹೊಸ ಇತಿಹಾಸ ನಿರ್ಮಿಸಿದ ಕೊಹ್ಲಿ

ಹೀಗೆ 2014 ರಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ವಿಕೆಟ್‌ನ ಉರುಳಿಸಿದ ನಂತರ, ನಿನ್ನೆ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಾಲಿಗೂ ವಿಲನ್ ಆಗಿದ್ದರು. ಕನ್ನಡಿಗರ ನೆಚ್ಚಿನ ಆಟಗಾರ, ಹಾಗೂ ಶತಕೋಟಿ ಭಾರತೀಯರ ವೀರ ವಿರಾಟ್ ಕೊಹ್ಲಿ ನಿನ್ನೆ 17 ರನ್ ಗಳಿಸಿದ್ದ ನೆದರ್ಲೆಂಡ್ಸ್ ಟೀಂ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಬೀಳಿಸಿದರು. ಈ ಮೂಲಕ 9 ವರ್ಷ ನಂತರ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ವಿಕೆಟ್ ಕಿತ್ತಿದ್ದಾರೆ.

virat-kohli-has-been-created-record

ವಿಕೆಟ್ ಜೊತೆಗೆ ಅರ್ಧ ಶತಕ

ನಿನ್ನೆ ಭಾರತ ತಂಡ 410 ರನ್ ಗಳಿಸಿ ಡಚ್ಚರ ತಂಡಕ್ಕೆ ಅಂದ್ರೆ ನೆದರ್ಲೆಂಡ್ಸ್ ತಂಡಕ್ಕೆ 411 ರನ್ ಗುರಿ ನೀಡಿತ್ತು. ಆದ್ರೆ ಭಾರತದ ಬೌಲಿಂಗ್ ದಾಳಿಯಲ್ಲಿ ತರಗೆಲೆ ರೀತಿ ಕೊಚ್ಚಿಹೋದ ಡಚ್ಚರು 250 ರನ್‌ಗೆ ಬಿಡಾರ ಖಾಲಿ ಮಾಡಿದರು. ಹೀಗೆ ನೆದರ್ಲೆಂಡ್ಸ್ ಸೋಲಿನ ಮೂಲಕ ಅಂಕಪಟ್ಟಿಗೆ ಕೊನೇ ಸ್ಥಾನದಲ್ಲಿ ಉಳಿಯಿತು. ಭಾರತದ ಪರ 1 ವಿಕೆಟ್ ಪಡೆದಿದ್ದ ಕೊಹ್ಲಿ ಅರ್ಧ ಶತಕ ಕೂಡ ಬಾರಿಸಿ ಗಮನ ಸೆಳೆದ್ರು. ವಿರಾಟ್ ಕೊಹ್ಲಿ ಕಿತ್ತ ವಿಕೆಟ್ ಭಾರತದ ಜಯಕ್ಕೆ ದೊಡ್ಡ ಕೊಡುಗೆ ನೀಡಿತ್ತು ಎಂಬುದು ಗಮನಾರ್ಹ.

9ಕ್ಕೆ 9 ಪಂದ್ಯವನ್ನೂ ಗೆದ್ದ ಭಾರತ

ಭಾರತ ಏಕದಿನ ವಿಶ್ವಕಪ್ 2023ರ ಟೂರ್ನಿ ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯ ಆಡಿದ್ದು ಹೀಗೆ ಆಡಿದ 9ಕ್ಕೆ 9 ಪಂದ್ಯವನ್ನೂ ಗೆದ್ದು ಬೀಗಿದೆ. ಈ ಮೂಲಕ, 9 ಪಂದ್ಯದಲ್ಲಿ ಗೆದ್ದು 18 ಅಂಕ ಗಳಿಸಿದೆ. ಹಾಗೇ +2.570 ರನ್‌ರೇಟ್ ಮೂಲಕ ಮತ್ತೊಂದು ದಾಖಲೆಯ ಬರೆದಿದೆ. ಮುಂದಿನ ಪಂದ್ಯ ಅಂದರೆ ಸೆಮಿಫೈನಲ್ ಅಖಾಡದಲ್ಲಿ ಭಾರತ ತಂಡ ಕಿವೀಸ್ ಅಂದ್ರೆ ನ್ಯೂಜಿಲೆಂಡ್ ತಂಡವನ್ನು ಬೇಟೆಯಾಡಲು ಸಜ್ಜಾಗಿದೆ. ಹೀಗಾಗಿ ನ್ಯೂಜಿಲೆಂಡ್ ತಂಡವನ್ನ ಕಟ್ಟಿಹಾಕಲು ಏನು ಬೇಕೋ ಎಲ್ಲಾ ರೀತಿ ತಯಾರಿ ಅಬ್ಬರದಿಂದ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+