‘ಸೆಂಚ್ಯುರಿ’ ಸಮೀಪದಲ್ಲೇ ವಿರಾಟ್ ಕೊಹ್ಲಿ ಎಡವಿದ್ದು ಏಕೆ? ವಿರಾಟ್‌ಗೆ ಶುರುವಾಯ್ತಾ ‘ನರ್ವಸ್ 90’ ಕಾಟ?

ಎಲ್ಲವೂ ಅಂದುಕೊಂಡಂತೆ ನಡೆದಿದೆ, ದಾಖಲೆಗಳ ಸರದಾರ ಹಾಗೂ ಕನ್ನಡಿಗರ ಪಾಲಿನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ವಿಶ್ವಕಪ್-2023 ಟೂರ್ನಿಯಲ್ಲಿ ಮತ್ತೆ ಅಬ್ಬರಿಸಿದ್ದಾರೆ. ಅದರಲ್ಲೂ 'ಕ್ರಿಕೆಟ್ ದೇವರು' ಎಂದೇ ಕರೆಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ವಿಶ್ವ ದಾಖಲೆಗಳನ್ನು ಒಂದೊಂದಾಗಿ ಪುಡಿ ಪುಡಿ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ. ಈಗ ಅದರ ಭಾಗವಾಗಿ ತೆಂಡೂಲ್ಕರ್ ನಿರ್ಮಿಸಿದ್ದ ಮತ್ತೊಂದು ದಾಖಲೆ ಧೂಳ್ ಮಾಡುವಾಗ, ವಿರಾಟ್ ಕೊಹ್ಲಿ ದೊಡ್ಡ ಎಡವಟ್ಟು ಮಾಡಿಕೊಂಡರು.

ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತರೆ ಸಾಕು ಅವರನ್ನ ಎದುರಿಸಲು ಬೌಲರ್ಸ್ ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದರಲ್ಲೂ ಇಷ್ಟುದಿನ, 90 ರನ್ ಆಸುಪಾಸಿನಲ್ಲಿ ಇದ್ದಾಗಲೂ ಅತ್ಯಂತ ಆತ್ಮವಿಶ್ವಾಸದಿಂದ ಆಡುತ್ತಿದ್ದ ಕೊಹ್ಲಿಗೆ ಈಗ 'ನರ್ವಸ್ 90' ಕಾಟ ಶುರುವಾಯ್ತಾ? ಎಂಬ ಅನುಮಾನ ಕಾಡತೊಡಗಿದೆ. ಯಾಕಂದ್ರೆ ವಿರಾಟ್ ಕೊಹ್ಲಿ ಕೆಲವು ಪಂದ್ಯಗಳಿಂದ 90 ರನ್ ಆಸುಪಾಸಲ್ಲಿ ಇದ್ದಾಗ, ಒಂದೊಂದು ರನ್ ಗಳಿಸುವುದಕ್ಕೆ ಕೂಡ ಪರದಾಡುತ್ತಿದ್ದಾರೆ. ಹಾಗಾದರೆ ಶ್ರೀಲಂಕಾ ವಿರುದ್ಧ ಇಂದು ಕೊಹ್ಲಿ ಎಡವಿದ್ದು ಎಲ್ಲಿ?

Discover How Discussion Going On Over Virat Kohli Century & Nervous 90 In Cricket

ಕೊಹ್ಲಿಗೆ 'ನರ್ವಸ್ 90' ಕಾಟ?

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಭಾರತಕ್ಕೆ, ನಾಯಕ ರೋಹಿತ್ ಶರ್ಮಾ ಮೊದಲ ಆಘಾತ ನೀಡಿದರು. ಕೇವಲ 4 ರನ್‌ಗೆ ರೋಹಿತ್ ಔಟ್ ಆಗಿ ಪೆವಿಲಿಯನ್ ಸೇರಿದರು. ಹೀಗಿದ್ದಾಗ ಗಿಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಒಂದಾಗಿ ಲಂಕಾ ಬೌಲಿಂಗ್ ದಾಳಿಯನ್ನ ಚಚ್ಚಿ ಬಿಸಾಡಿತು. ಆದರೆ ಅತ್ಯುತ್ತಮ ರೀತಿಯಲ್ಲಿ ಆಟ ಆಡುತ್ತಿದ್ದ ಗಿಲ್, ಕೆಟ್ಟ ಹೊಡೆತಕ್ಕೆ ಕೈಹಾಕಿ 92 ರನ್ ಗಳಿಸಿದ್ದಾಗ ಔಟ್ ಆಗಿ ಪೆವಿಲಿಯನ್ ಗೂಡು ಸೇರಿದರು. ಈ ಆಘಾತ ಸಿಕ್ಕ ಕೆಲವೇ ಕ್ಷಣಗಳಲ್ಲಿ, ಕೊಹ್ಲಿಯೂ ಔಟ್ ಆಗಿ ಶತಕ ವಂಚಿತರಾದರು.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಇಂದಿನ ಮ್ಯಾಚ್‌ನಲ್ಲಿಯೂ, ವಿರಾಟ್ ಕೊಹ್ಲಿಗೆ ಶತಕ ಸಿಡಿಸುವ ಅದ್ಭುತ ಅವಕಾಶ ಸಿಕ್ಕಿತ್ತು. ಆದ್ರೆ 88 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ಕೊಹ್ಲಿ ಪೆವಿಲಿಯನ್ ಹಾದಿ ಹಿಡಿದರು. ಹೀಗೆ ಸಚಿನ್ ತೆಂಡೂಲ್ಕರ್ ಹಿಂದೆ ನಿರ್ಮಿಸಿದ್ದ ಏಕದಿನ ಕ್ರಿಕೆಟ್‌ನ ಅತಿಹೆಚ್ಚು ಶತಕಗಳ ಸಾಲಿಗೆ, ತಮ್ಮ ದಾಖಲೆ ಸೇರಿಸುವ ಅವಕಾಶವನ್ನು ಕೊಹ್ಲಿ ಇಂದು ಮಿಸ್ ಮಾಡಿಕೊಂಡರು. ಒಟ್ಟು 94 ಎಸೆತ ಎದುರಿಸಿ 11 ಬೌಂಡರಿ ಬಾರಿಸಿದ್ದರು ವಿರಾಟ್ ಕೊಹ್ಲಿ. 88 ರನ್‌ಗೆ ವಿಕೆಟ್ ಒಪ್ಪಿಸಿ ಬೇಸರದಲ್ಲಿ ಪೆವಿಲಿಯನ್ ಹಾದಿ ಹಿಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+