ಇಂಗ್ಲಿಷರ ಎದುರು ಭಾರತ ಕ್ರಿಕೆಟ್ ತಂಡದ ಮಾನ ಉಳಿಸಿದ ಧ್ರುವ್ ಜುರೆಲ್!
ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಂಚಿ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ, ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಒಪ್ಪಿಕೊಳ್ಳುತ್ತೆ ಎನ್ನುವಾಗಲೇ, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಆಸರೆ ಆಗಿದ್ದು ಧ್ರುವ್ ಜುರೆಲ್ & ಕುಲ್ದೀಪ್. ಹೀಗೆ ಇಬ್ಬರ ಆಟ ಬ್ರಿಟಿಷ್ ಆಟಗಾರರ ಇನ್ನಿಲ್ಲದಂತೆ ಕಾಡಿತ್ತು.
ರಾಂಚಿಯ ಜೆಎಸ್‍ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಧ್ರುವ್ ಜುರೆಲ್ 149 ಬಾಲ್ ಆಡಿ, 6 ಬೌಂಡರಿ & 4 ಸಿಕ್ಸರ್ ಸಿಡಿಸಿದರು. ಈ ಮೂಲಕ ಬರೋಬ್ಬರಿ 90 ರನ್ ಸಿಡಿಸಿದ ಧ್ರುವ್ ಜುರೆಲ್ ಸ್ವಲ್ಪದರಲ್ಲೇ ಸೆಂಚ್ಯುರಿ ಮಿಸ್ ಮಾಡಿಕೊಂಡರು. ಹೀಗೆ ಶತಕ ವಂಚಿತರಾದ ಕೀಪರ್ ಧ್ರುವ್ ಜುರೆಲ್ ಅವರು ಭಾರತ ತಂಡವನ್ನು ಇಂಗ್ಲೆಂಡ್ ವಿರುದ್ಧ ಹೀನಾಯವಾದ ಸೋಲಿನಿಂದ ಬಚಾವ್ ಮಾಡಿದ್ದಾರೆ. ಅಕಸ್ಮಾತ್ ಧ್ರುವ್ ಜುರೆಲ್ ಗಟ್ಟಿಯಾಗಿ ನಿಲ್ಲದಿದ್ದರೆ, ಭಾರತ ತಂಡ ಕೇವಲ 200 ರನ್ ಒಳಗೆ ಆಲೌಟ್ ಆಗುವ ಭಯ ಎದುರಾಗಿತ್ತು. ಹಾಗಾದ್ರೆ ಧ್ರುವ್ ಜುರೆಲ್ ಜೊತೆ ನಿಂತ ಮತ್ತೊಬ್ಬ ಆಟಗಾರ ಯಾರು ಗೊತ್ತೆ?

ಸೋಲಿನ ಸುಳಿಯಲ್ಲಿತ್ತು ಭಾರತ
ಆಂಗ್ಲರ ಕ್ರಿಕೆಟ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 353 ರನ್ ಬೃಹತ್ ಮೊತ್ತ ಕಲೆಹಾಕಿತ್ತು. ಅದ್ರಲ್ಲೂ ರಾಂಚಿಯ ಬೌಲಿಂಗ್ ಪಿಚ್‌ಗೆ ಇದು ದೊಡ್ಡ ಸ್ಕೋರ್ ಆಗಿರುತ್ತೆ. ಹೀಗಿದ್ದಾಗ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆ ರೀತಿ ಔಟ್ ಆಗಲು ಶುರು ಮಾಡಿದ್ರು. 4 ರನ್‌ಗೆ ಭಾರತ ಕ್ರಿಕೆಟ್ ತಂಡದ ಮೊದಲ ವಿಕೆಟ್ ಬಿತ್ತು, ಆ ನಂತರ 86 ರನ್‌ಗೆ 2ನೆಯ ವಿಕೆಟ್, 112 ರನ್‌ಗೆ 3ನೇ ವಿಕೆಟ್, 130 ರನ್‌ಗೆ 4ನೇ ವಿಕೆಟ್, 161 ರನ್‌ಗೆ 5ನೇ ವಿಕೆಟ್, 6ನೇ ವಿಕೆಟ್ 171 ರನ್‌ಗೆ ಖಾಲಿ ಆಗಿತ್ತು, ಕೊನೆಗೆ 177 ರನ್ ಆಗಿದ್ದಾಗ ಭಾರತದ ಬೌಲರ್ ಕಂ ಆಲ್ರೌಂಡರ್ ಆರ್. ಅಶ್ವಿನ್ ಕೂಡ ಪೆವಿಲಿಯನ್ ಗೂಡು ಸೇರಿದರು.
ಮಾನ ಉಳಿಸಿದ ಜುರೆಲ್ & ಕುಲ್ದೀಪ್
ಭಾರತ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್ ಆಗಿದ್ದಾಗ ಪರಿಸ್ಥಿತಿ ನೋಡಿದರೆ ಇನ್ನ ಭಾರತ ತಂಡ ಕೇವಲ 200 ರನ್ ಒಳಗೆ ಆಲೌಟ್ ಆಗುತ್ತೆ ಎನ್ನಲಾಗಿತ್ತು. ಆದ್ರೆ ಭಾರತಕ್ಕೆ ಆಸರೆಯಾಗಿ ನಿಂತ ಧ್ರುವ್ ಜುರೆಲ್ & ಕುಲ್ದೀಪ್ ಯಾದವ್ ಜೋಡಿ ಸುಮಾರು 70ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಭಾರತ ತಂಡ ಭರ್ಜರಿ 300 ರನ್‌ಗಳನ್ನ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ ಚಾಲೆಂಜ್ ಹಾಕುವಲ್ಲಿ ನೆರವಾದರು. ಆದರೂ ಇಂಗ್ಲೆಂಡ್‌ಗೆ ಭಾರತ 40ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಬಿಟ್ಟು ಕೊಟ್ಟಿತು.

ಶತಕ ವಂಚಿತ ಧ್ರುವ್ ಜುರೆಲ್
ಅಂದಹಾಗೆ ಯುವ ಕ್ರಿಕೆಟಿಗ ಧ್ರುವ್ ಜುರೆಲ್ ಭಾರತ ತಂಡಕ್ಕೆ ಸಂಕಷ್ಟದಲ್ಲಿ ಮಾತ್ರ ಸಹಾಯ ಮಾಡಿಲ್ಲ, ಬದಲಾಗಿ ಈ ಆಟಗಾರ ಭಾರತದ ಭವಿಷ್ಯಕ್ಕೆ ಉತ್ತಮ ಕ್ರಿಕೆಟಿಗನಾಗಿ ಕೊಡುಗೆಯ ಕೊಡುವ ಮುನ್ಸೂಚನೆ ನೀಡಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 2ನೇ ಪಂದ್ಯದಲ್ಲೇ ಭರ್ಜರಿ 90 ರನ್ ಗಳಿಸಿದ್ದಾರೆ. ಆದರೆ ಇನ್ನೇನು ಶತಕ ಸಿಡಿಸಿ ಮಿಂಚ ಬೇಕಾಗಿದ್ದ ಈ ಸ್ಟಾರ್ ಆಟಗಾರ, ಸ್ವಲ್ಪ ಸಮಯದಲ್ಲೇ ಎಡವಿದರು. ಹಾಗೇ ತಮ್ಮ ಶತಕವನ್ನು ಕೂಡ ಇವರು, ಮಿಸ್ ಮಾಡಿಕೊಂಡರು.
ಒಟ್ನಲ್ಲಿ ಭಾರತ ಕ್ರಿಕೆಟ್ ತಂಡ ಮತ್ತೊಂದು ಅತ್ಯುತ್ತಮ ಟೆಸ್ಟ್ ಗೆಲುವಿಗೆ ಸಜ್ಜಾಗಿದೆ. ಹೀಗೆ ಭಾರತ ತಂಡಕ್ಕೆ ಯುವ ಆಟಗಾರರು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಟೆಸ್ಟ್ ವಿಶ್ವಕಪ್ ಗೆಲುವಿಗೆ ಕೂಡ ಈ ಪಂದ್ಯವು ದೊಡ್ಡ ಕೊಡುಗೆ ನೀಡಲಿದೆ. ಹೀಗಾಗಿಯೇ ಭಾರತ ಕ್ರಿಕೆಟ್ ತಂಡದ ಆಟಗಾರರು ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಇಂಗ್ಲೆಂಡ್ ಇದೀಗ ಹೀನಾಯ ಸೋಲಿನ ಭೀತಿಗೆ ಸಿಲುಕಿದೆ.












Click it and Unblock the Notifications