ODI World Cup: ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಆಟಗಾರರ ಡಯಟ್ ರಹಸ್ಯ ಇಲ್ಲಿದೆ

ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಆಡಿರುವ ಐದೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಂಡದ ಆಟಗಾರರು ಫಿಟ್‌ನೆಸ್ ಬಗ್ಗೆ ಹೆಚ್ಚು ಹೊತ್ತು ನೀಡಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚುತ್ತಿದ್ದಾರೆ.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ನಿಯಮಿತವಾಗಿ ಪಂದ್ಯಗಳನ್ನು ಆಡಬೇಕಾಗುತ್ತದೆ, ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಟಗಾರರ ಫಿಟ್‌ನೆಸ್ ಮುಖ್ಯವಾಗುತ್ತದೆ. ಇದಕ್ಕಾಗಿಯೇ ಭಾರತ ತಂಡ ವಿಶ್ವಕಪ್‌ಗಾಗಿ ಡಯಟ್‌ಗೆ ಹೆಚ್ಚು ಒತ್ತು ನೀಡಿದೆ.

Diet Plan Unveiled for Virat Kohli and Team India in World Cup 2023!

ಟೀಂ ಇಂಡಿಯಾ ಎಲ್ಲೆಲ್ಲಿ ಪ್ರಯಾಣಿಸುತ್ತಿದ್ದರೂ, ಬಿಸಿಸಿಐ ಮತ್ತು ಹೋಟೆಲ್ ಸಿಬ್ಬಂದಿ ಅತ್ಯುತ್ತಮ ರೀತಿಯ ಆಹಾರವನ್ನು ಒದಗಿಸುತ್ತಿದ್ದಾರೆ. ಭಾರತವಷ್ಟೇ ಅಲ್ಲ, ತಂಡದ ಸದಸ್ಯರ ಕೋರಿಕೆಯಂತೆ ಪ್ರತಿಯೊಂದು ತಂಡವೂ ಆಹಾರವನ್ನು ಪಡೆಯುತ್ತಿದೆ.

ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದ ಆಟಗಾರರ ಊಟದ ಸೀಕ್ರೇಟ್ ಈಗ ಬಹಿರಂಗವಾಗಿದೆ. ಹೆಚ್ಚಿನ ಭಾರತೀಯ ಆಟಗಾರರು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಆಹಾರವನ್ನು ಸೇವಿಸಲು ಬಯಸುತ್ತಾರೆ ಎಂದು ಹೋಟೆಲ್ ಲೀಲಾ ಪ್ಯಾಲೇಸ್‌ನ ಕಾರ್ಯನಿರ್ವಾಹಕ ಬಾಣಸಿಗ ಅಂಶುಮಾನ್ ಬಾಲಿ ಬಹಿರಂಗಪಡಿಸಿದ್ದಾರೆ.

ದೀರ್ಘ ಗಂಟೆಗಳ ಕಾಲ ಆಟವಾಡಿದ ಮತ್ತು ಅಭ್ಯಾಸ ಮಾಡಿದ ನಂತರ ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ಶಕ್ತಿ ಮತ್ತು ತ್ರಾಣವನ್ನು ಇಟ್ಟುಕೊಳ್ಳಬೇಕಾಗಿರುವುದು ಇದಕ್ಕೆ ಕಾರಣವಾಗಿದೆ.

ಬಫೆಯು ಎಲ್ಲಾ ರೀತಿಯ ಮಾಂಸವನ್ನು ಹೊಂದಿದ್ದರೂ, ಆಟಗಾರರು ಹಬೆಯಲ್ಲಿ ಬೇಯಿಸಿದ ಅಥವಾ ಸುಟ್ಟ ಕೋಳಿ ಅಥವಾ ಮೀನುಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಬಾಣಸಿಗರು ಹೇಳಿದ್ದಾರೆ.

ಆಟಗಾರರಿಗೆ ರಾಗಿ ದೋಸೆ ಅಚ್ಚುಮೆಚ್ಚು

ಭಾರತೀಯ ಕ್ರಿಕೆಟಿಗರಿಗೆ ರಾಗಿ ದೋಸೆ ಮೆಚ್ಚಿನ ಆಹಾರವಾಗಿದೆ. ಹೋಟೆಲ್‌ಗಳು ರಾಗಿ ದೋಸೆ ಮತ್ತು ರಾಗಿ ಇಡ್ಲಿಗಳನ್ನು ನೀಡುತ್ತಿವೆ. ವಿದೇಶಿ ಆಟಗಾರರು ಪಾವ್ ಭಾಜಿ, ಪರಾಠ ಮತ್ತು ಬಿರಿಯಾನಿಯಂತಹ ಭಾರತೀಯ ಆಹಾರಗಳನ್ನು ಸಹ ಇಷ್ಟಪಡುತ್ತಾರೆ. ಪಾಕಿಸ್ತಾನಿ ಕ್ರಿಕೆಟ್ ತಂಡವು ಹೈದರಾಬಾದ್‌ಗೆ ಬಂದಿಳಿದಾಗ ಕಬಾಬ್‌ಗಳ ಜೊತೆಗೆ ರುಚಿಕರವಾದ ಹೈದರಾಬಾದಿ ಬಿರಿಯಾನಿಯನ್ನು ಬಡಿಸಲಾಗಿತ್ತು.

ಸಸ್ಯಾಹಾರಿಯಾಗಿರುವ ಕೊಹ್ಲಿ

ಈ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳೊಂದಿಗೆ ವಿರಾಟ್ ಭಾರತದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಫಿಟ್‌ನೆಸ್ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ, ಅದರಲ್ಲೂ ಊಟ, ತಿಂಡಿಯ ವಿಚಾರದಲ್ಲೂ ಅವರು ಎಚ್ಚರಿಕೆ ವಹಿಸುತ್ತಾರೆ. ಪ್ರೋಟೀನ್-ಭರಿತ, ಪೌಷ್ಟಿಕ ಆಹಾರ ಅವರ ಆದ್ಯತೆಯಾಗಿದೆ.

ಸೋಯಾ ಮತ್ತು ತೋಫು ಆಧಾರಿತ ಊಟದಿಂದ ತನ್ನ ಪ್ರೊಟೀನ್ ಫಿಕ್ಸ್ ಅನ್ನು ಪಡೆಯುತ್ತಿದ್ದಾರೆ. ಅವರು ಸಸ್ಯಾಹಾರಿ ಡಿಮ್-ಸಮ್ಸ್ ನಂತಹ ಆವಿಯಿಂದ ಬೇಯಿಸಿದ ಆಹಾರಗಳಿಗೆ ಹೋಗುತ್ತಾರೆ. ಸೋಯಾ, ಮಾಕ್ ಮೀಟ್ಸ್ ಮತ್ತು ತೋಫುಗಳಂತಹ ತರಕಾರಿ ಆಧಾರಿತ ಪ್ರೋಟೀನ್ ಅನ್ನು ಕೊಹ್ಲಿ ತಿನ್ನುತ್ತಾರೆ. ರಾಗಿ ದೋಸೆ ವಿರಾಟ್ ಮತ್ತು ಭಾರತೀಯ ತಂಡದ ಆಟಗಾರರ ನೆಚ್ಚಿನ ತಿನಿಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+