Get Updates
Get notified of breaking news, exclusive insights, and must-see stories!

Devdutt Padikkal: ಆರ್‌ಸಿಬಿಗೆ ಮರಳಿದ ಬಗ್ಗೆ ಮನದಾಳದ ಮಾತು ಹಂಚಿಕೊಂಡ ಕನ್ನಡಿಗ ದೇವದತ್ ಪಡಿಕ್ಕಲ್

Devdutt Padikkal: ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಕನ್ನಡಿಗ ದೇವದತ್ ಪಡಿಕ್ಕಲ್ ಮಿಂಚಿನ ಆಟ ಮುಂದುವರೆಸಿದ್ದು, ಎದುರಾಳಿ ತಂಡಗಳ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಷ್ಟರ ಮಟ್ಟಿಗೆ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೂ ಇದೀಗ ಅವರು ಆರ್‌ಸಿಬಿಗೆ ಮರಳಿದ ಬಗ್ಗೆ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದ್ದು ನನ್ನ ವೃತ್ತಿಜೀವನದ ಮಹತ್ವದ ತಿರುವು ಎಂದು ಭಾರತೀಯ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಹೇಳಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪಡಿಕ್ಕಲ್, 10 ಪಂದ್ಯಗಳಲ್ಲಿ 150.61ರ ಸ್ಟ್ರೈಕ್ ರೇಟ್‌ನಲ್ಲಿ 247 ರನ್ ಗಳಿಸಿದ್ದರು. ಅಲ್ಲದೆ, ಇದೀಗ 2026ರ ಸೀಸನ್‌ನಲ್ಲಿಯೂ ಭರ್ಜರಿ ಫಾರ್ಮ್‌ನಲ್ಲಿರುವ ಅವರು, ಕೇವಲ ಎರಡು ಪಂದ್ಯಗಳಲ್ಲಿ 201.82ರ ಸ್ಟ್ರೈಕ್ ರೇಟ್‌ನಲ್ಲಿ 111 ರನ್ ಚಚ್ಚಿದ್ದಾರೆ.

Devdutt Padikkal Calls Royal Challengers Bengaluru Return a Turning Point as He Shines in IPL 2026

ಆರ್‌ಸಿಬಿ ಬಗ್ಗೆ ದೇವದತ್ ಪಡಿಕ್ಕಲ್‌ ಹೇಳಿದ್ದೇನು?

"ಕಳೆದ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯು ನನ್ನ ವೃತ್ತಿಜೀವನದ ಹಲವು ರೀತಿಯಲ್ಲಿ ಒಂದು ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ. ನಾನು ಯಾವ ರೀತಿಯ ಕ್ರಿಕೆಟ್ ಆಡಬೇಕು ಮತ್ತು ಎಂತಹ ಕ್ರಿಕೆಟಿಗನಾಗಬೇಕೆಂಬ ಬಗ್ಗೆ ಗಂಭೀರವಾಗಿ ನಿರ್ಧರಿಸಬೇಕಾದ ಹಂತದಲ್ಲಿ ನಾನಿದ್ದೆ. ಮತ್ತೆ ಆರ್‌ಸಿಬಿ ತಂಡಕ್ಕೆ ಮರಳಿದ್ದು, ನಾನು ಬಯಸಿದ ರೀತಿಯಲ್ಲಿ ಕ್ರಿಕೆಟ್ ಆಡುವ ಹಾದಿಯನ್ನು ಸುಗಮಗೊಳಿಸಿತು," ಎಂದು ಹೇಳಿದರು.

"ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನಲ್ಲಿ ನನಗೆ ಆ ಅವಕಾಶ ಸಿಕ್ಕಾಗ, ನಾನು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಎಂದು ಆ ದಿನವೇ ನಿರ್ಧರಿಸಿದೆ. ಫಲಿತಾಂಶ ಏನೇ ಇರಲಿ, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನನ್ನ ಆಟದ ಸುಧಾರಣೆಗಾಗಿ ಶ್ರಮಿಸಲು ನಾನು ನಿಜವಾಗಿಯೂ ಬದ್ಧನಾಗಿರಬೇಕಿತ್ತು," ಎಂದು ಹೇಳಿದರು.

ಬೇರೆ ಫ್ರಾಂಚೈಸಿಗಳ ಪರ ಆಡಿದ್ದ ಪಡಿಕ್ಕಲ್

ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಆರ್‌ಸಿಬಿ ಪರ ಪಾದಾರ್ಪಣೆ ಮಾಡಿದ 2020ರ ಐಪಿಎಲ್ ಸೀಸನ್‌ನಲ್ಲಿಯೇ 473 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. ನಂತರ ಕೆಲವು ಸೀಸನ್‌ಗಳ ಕಾಲ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪರ ಆಡಿದ್ದ ಅವರನ್ನು, 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು 2 ಕೋಟಿ ರೂಪಾಯಿ ಮೂಲ ಬೆಲೆಗೆ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು.

"ನಾನು ಒಂದು ವರ್ಷದ ಮಟ್ಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೋದೆ. ಆದರೆ, ಅಲ್ಲಿಯೂ ಪರಿಸ್ಥಿತಿ ಅಂದುಕೊಂಡಷ್ಟು ಚೆನ್ನಾಗಿರಲಿಲ್ಲ. ಅದು ನಿಜಕ್ಕೂ ಕಷ್ಟದ ಸಮಯವಾಗಿತ್ತು. ಕೊನೆಯಲ್ಲಿ ಎಲ್ಲವೂ ಹಣಕ್ಕೆ ಬಂದು ನಿಲ್ಲುತ್ತದೆ ಎಂದು ನನಗೆ ಅನಿಸಿತು. ಒಂದು ಫ್ರಾಂಚೈಸಿಯು ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀಡಿ ನಂಬಿಕೆ ಇಟ್ಟಾಗ, ಸರಿಯಾಗಿ ಪ್ರದರ್ಶನ ನೀಡದಿದ್ದರೆ ಅವರಿಗೆ ಮೋಸ ಮಾಡುತ್ತಿದ್ದೇವೆ ಎಂಬ ಭಾವನೆ ಕಾಡುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಸಮಯದಲ್ಲಿ ನನ್ನ ಬಳಿಯೂ ಯಾವುದೇ ಉತ್ತರ ಇರಲಿಲ್ಲ," ಎಂದು ಹೇಳಿದರು.

"ನನಗೆ ಆ ಪರಿಸ್ಥಿತಿ ಸರಿಯಾಗಿ ಅರ್ಥ ಆಗುತ್ತಿರಲಿಲ್ಲ. ಆ ಸೀಸನ್‌ನಲ್ಲಿ ಹಲವು ಒಳ್ಳೆಯ ವಿಷಯಗಳ ಮೇಲೆಯೂ ತಣ್ಣೀರು ಎರಚಿದಂತಾಗಿತ್ತು. ಆದರೆ, ಅದೇ ಸಮಯ ನನ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಬೇಕಾದ ಪ್ರೇರಣೆ ಮತ್ತು ಕಿಚ್ಚನ್ನು ಹಚ್ಚಿಸಿತು. ಕೆಲವೊಮ್ಮೆ ಜೀವನದಲ್ಲಿ ಸೋಲಬೇಕಾಗುತ್ತದೆ. ನೀವು ತಲುಪಬೇಕಾದ ಗುರಿಯನ್ನು ತಲುಪಲು ಎಷ್ಟು ಕಠಿಣವಾಗಿ ಶ್ರಮಿಸಬೇಕು ಎಂಬುದನ್ನು ನೆನಪಿಸಲು ನಿಮ್ಮ ಪಯಣದಲ್ಲಿ ಇಂತಹ ವೈಫಲ್ಯಗಳ ಅಗತ್ಯ ಇರುತ್ತದೆ," ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+