ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್‌ವೆಲ್ತ್‌ 2022: ಜುಡೋದಲ್ಲಿ ಸುಶೀಲಾ ದೇವಿಗೆ ಬೆಳ್ಳಿ, ವಿಜಯ್‌ಗೆ ಕಂಚಿನ ಪದಕ

|
Google Oneindia Kannada News

ಮಹಿಳೆಯರ ಜೂಡೋ 48 ಕೆಜಿ ಫೈನಲ್‌ನಲ್ಲಿ ಭಾರತ ಸುಶೀಲಾ ದೇವಿ ಲಿಕ್ಮಾಬಾಮ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಏಳನೇ ಪದಕವನ್ನು ತಂದುಕೊಟ್ಟರು. ಇದಕ್ಕೂ ಮೊದಲು ಕ್ವಾರ್ಟರ್‌ಫೈನಲ್‌ನಲ್ಲಿ ಹ್ಯಾರಿಯೆಟ್ ಬೋನ್‌ಫೇಸ್ ಅವರನ್ನು ಸೋಲಿಸಿದ ಸುಶೀಲಾ, ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸುವ ಮೂಲಕ ಎರಡನೇ ಗೆಲುವು ಸಾಧಿಸಿದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲನುಭವಿಸಿದ ಸುಶೀಲಾ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದರು.

ವಿಜಯ್ ಕುಮಾರ್ ಯಾದವ್ ಪುರುಷರ 60 ಕೆ.ಜಿ ವಿಭಾಗದ ಜೂಡೋದಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡ್ಸ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರು. ಭಾರತದ ಮತ್ತೋರ್ವ ಅಥ್ಲೀಟ್ ಜಸ್ಲೀನ್ ಸಿಂಗ್ ಸೈನಿ ಪುರುಷರ 66 ಕೆಜಿ ಜೂಡೋ ಸ್ಪರ್ಧೆಯಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ನಾಥನ್ ಕಾಟ್ಜ್ ವಿರುದ್ಧ ಸೋತರು.

CWG 2022: ಕೂಲಿನಾಲಿ, ಎಂಬ್ರಾಯ್ಡರಿ ಮಾಡುತ್ತಾ ಭಾರತದ ಕೀರ್ತಿಪತಾಕೆ ಹಾರಿಸಿದ ಅಚಿಂತCWG 2022: ಕೂಲಿನಾಲಿ, ಎಂಬ್ರಾಯ್ಡರಿ ಮಾಡುತ್ತಾ ಭಾರತದ ಕೀರ್ತಿಪತಾಕೆ ಹಾರಿಸಿದ ಅಚಿಂತ

ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಾಲ್‌ ಬಾನ್‌ ಕ್ರೀಡೆಯಲ್ಲಿ ಭಾರತ ತಂಡ ಪದಕ ಗೆಲ್ಲುವುದು ಖಚಿತವಾಗಿದೆ. ನಾಲ್ಕು ಸ್ಪರ್ಧೆಯಲ್ಲಿ ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಸೆಮಿಫೈನಲ್‌ನ ಕಠಿಣ ಪಂದ್ಯದಲ್ಲಿ 16-13 ರಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದ ಭಾರತ ಮತ್ತೊಂದು ಪದಕ ಖಚಿತಪಡಿಸಿಕೊಂಡಿದೆ. ಮಂಗಳವಾರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

CWG 2022: Sushila Devi Has Won A Silver, Vijay Kumar Wins The Bronze In Judo

ಬಾಕ್ಸಿಂಗ್ ವಿಭಾಗದಲ್ಲಿ ಭಾರತ ಉತ್ತಮ ಆರಂಭ ಮಾಡಿದೆ. ಪದಕದ ಭರವಸೆ ಮೂಡಿಸಿರುವ ಅಮಿತ್ ಪಂಘಲ್ 51 ಕೆ.ಜಿ. ವಿಭಾಗದಲ್ಲಿ 16ರ ಹಂತದಲ್ಲಿ ಮೊದಲನೇ ಜಯ ಸಾಧಿಸಿದ್ದಾರೆ. ಅಮಿತ್ 5-0 ಅಂತರದಿಂದ ವನವಾಟು ಬಾಕ್ಸರ್ ಅನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮೊಹಮ್ಮದ್ ಹುಸಾಮುದ್ದೀನ್ ಬಾಂಗ್ಲಾದೇಶದ ಬಾಕ್ಸರ್ ಅವರನ್ನು 5-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

CWG 2022: Sushila Devi Has Won A Silver, Vijay Kumar Wins The Bronze In Judo

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ನಿರಾಸೆ

ಕಳೆದೆರಡು ದಿನಗಳಲ್ಲಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ಸೋಮವಾರ ನಿರಾಸೆ ಅನುಭವಿಸಿತು. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಅಜಯ್‌ ಸಿಂಗ್‌ ಕಡಿಮೆ ಅಂತರದಿಂದ ಪದಕ ವಂಚಿತರಾದರು. ಪುರುಷರ 81 ಕೆ.ಜಿ. ವಿಭಾಗದಲ್ಲಿ ಒಟ್ಟು 319 ಕಿಲೋ ಗ್ರಾಂ ತೂಕ ಎತ್ತುವ ಮೂಲಕ ಕೇವಲ ಒಂದು ಕೆಜಿ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾಗಿ ನಿರಾಸೆ ಅನುಭವಿಸಿದರು.

Recommended Video

Team India ಆಟಗಾರರು ಅರ್ಶದೀಪ್ ಜೆರ್ಸಿ ತೊಡಲು ಇದೇ ಕಾರಣ | *Cricket | OneIndia Kannada

English summary
Sushila Devi has won a silver medal after losing the gold medal match to South Africa's Michaela Whitebooi. Vijay Kumar wins the bronze for India in Men's 60 KG Judo. The Indian team of Lovely Chaubey, Pinki, Nayanmoni Saikia, and Rupa Rani Tirkey have created history by securing India's first-ever Commonwealth Games medal in lawn bowls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X