RCB: ಯಶ್ ದಯಾಳ್‌ ಇನ್‌ಸ್ಟಾಗ್ರಾಂ ಪೋಸ್ಟ್‌ ನೋಡಿ ಉರಿದುಕೊಂಡ ಸಿಎಸ್‌ಕೆ ಫ್ಯಾನ್ಸ್!

ಇಂಡಿಯನ್ ಪ್ರೀಮಿಯರ್‍ ಲೀಗ್ ( ಐಪಿಎಲ್) ಇತಿಹಾಸದಲ್ಲೇ ರಣ ರೋಚಕ ಪಂದ್ಯವೊಂದಕ್ಕೆ ಕಳೆದ ವರ್ಷ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಐಪಿಎಲ್ 2024ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಆರ್ ಸಿಬಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು. ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡಿದ್ದ ಯಶ್ ದಯಾಳ್ ಅಂದಿನ ಪಂದ್ಯದ ಹೀರೋ ಆಗಿದ್ದರು.

ಎಂಎಸ್‌ ಧೋನಿಯನ್ನು ಕೊನೆಯ ಓವರ್ ನಲ್ಲಿ ಔಟ್ ಮಾಡಿದ್ದ ಯಶ್ ದಯಾಳ್ ಆರ್ ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಯಶ್‌ ದಯಾಳ್‌ರ ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ಸಿಎಸ್‌ಕೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಂದಿನ ಸೋಲಿನ ಹತಾಶೆ ಇಂದಿಗೂ ಅಭಿಮಾನಿಗಳನ್ನು ಕಾಡುತ್ತಿದ್ದು, ಯಶ್ ದಯಾಳ್‌ ಪೋಸ್ಟ್‌ ಸಿಎಸ್‌ಕೆ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ.

csk Fans angry on rcb bowler yash dayal for this reason

ವಿಡಿಯೋ ಹಂಚಿಕೊಂಡ ದಯಾಳ್

ದಯಾಳ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಧೋನಿಯನ್ನು ಔಟ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಒಂದು ಭಾಗದಲ್ಲಿ ಜಹೀರ್ ಖಾನ್ ಒಮ್ಮೆ ಧೋನಿಯನ್ನು ಅದೇ ರೀತಿಯಲ್ಲಿ ಹೇಗೆ ಔಟ್ ಮಾಡಿದ್ದರು ಎನ್ನುವದನ್ನು ತೋರಿಸಿದ್ದರೆ, ಮತ್ತೊಂದು ಕಡೆ ತಾವು ಅದೇ ರೀತಿಯಲ್ಲಿ ಹೇಗೆ ಧೋನಿಯನ್ನು ಔಟ್ ಮಾಡಿದ್ದರು ಎನ್ನುವುದನ್ನು ತೋರಿಸಿದೆ. ಯಶ್ ದಯಾಳ್ ತಮ್ಮನ್ನು ತಾವು ಜಹೀರ್ ಖಾನ್‌ ಜೊತೆ ಹೋಲಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಯಶ್ ದಯಾಳ್ ಈಗ ತಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿದ್ದಾರೆ, ಜಹೀರ್ ಖಾನ್‌ ರೀತಿಯ ದಿಗ್ಗಜ ಬೌಲರ್ ಜೊತೆ ಹೋಲಿಕೆ ಮಾಡಿಕೊಂಡಿರುವುದು ಉದ್ಧಟತನ ಎಂದು ಕೆಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಎಂಎಸ್ ಧೋನಿ ಅಭಿಮಾನಿಗಳು ಹೆಚ್ಚಾಗಿ ಸಿಟ್ಟಾಗಿದ್ದು, ಒಂದು ಪಂದ್ಯದಲ್ಲಿ ಔಟ್ ಮಾಡಿದ್ದಕ್ಕೆ ಹೀಗೆ ಆಡಬಾರದು ಎಂದು ಕೆಲವು ಬುದ್ದಿ ಹೇಳಿದ್ದಾರೆ.

ಇನ್ನೂ ಕೆಲವು ಸಿಎಸ್‌ಕೆ ಅಭಿಮಾನಿಗಳು 2025ರ ಐಪಿಎಲ್‌ನಲ್ಲಿ ನಿಮಗೆ ಧೋನಿಯಿಂದ ತಕ್ಕ ಪಾಠ ಸಿಗಲಿದೆ ಎನ್ನುವ ಎಚ್ಚರಿಕೆ ಕೂಡ ನೀಡಿದ್ದಾರೆ. ಏನಾದರೂ ಯಶ್‌ ದಯಾಳ್‌ರ ಇನ್‌ಸ್ಟಾಗ್ರಾಂ ಪೋಸ್ಟ್‌ ಸಿಎಸ್‌ಕೆ ಫ್ಯಾನ್ಸ್‌ ನಿದ್ದೆಗೆಡಿಸಿರುವುದು ಸತ್ಯ ಎಂದು ಆರ್ ಸಿಬಿ ಅಭಿಮಾನಿಗಳು ದಯಾಳ್‌ರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಆರ್ ಸಿಬಿ ಯಶ್ ದಯಾಳ್‌ರನ್ನು ರಿಟೇನ್ ಮಾಡಿಕೊಂಡಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟಿದ್ದು ಜೋಶ್ ಹೇಜಲ್‌ವುಡ್, ನುವಾನ್ ತುಷಾರ, ಭುವನೇಶ್ವರ್ ಕುಮಾರ್‍‌ ತಂಡದ ಬೌಲಿಂಗ್‌ಗೆ ಬಲ ತುಂಬಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+