
ಆಸೀಸ್ ಕ್ರಿಕೆಟರ್ ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಚೇತರಿಕೆ
ಪರ್ತ್, ಡಿಸೆಂಬರ್ 03: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಎದೆನೋವು ಮತ್ತು ತಲೆತಿರುಗುವಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟರ್ ರಿಕಿ ಪಾಂಟಿಂಗ್ ಶನಿವಾರ "ಹೊಸ ಹುರುಪಿನೊಂದಿಗೆ" ಕಾಮೆಂಟರಿ ಬೂತ್‌ಗೆ ಮರಳಿದರು.
47 ವರ್ಷ ವಯಸ್ಸಿನ ಆಸ್ಟ್ರೇಲಿಯನ್ ಕ್ರಿಕೆಟರ್ ಶುಕ್ರವಾರ ಊಟದ ಸಮಯದಲ್ಲಿ ಆರೋಗ್ಯದ ಭಯವನ್ನು ಅನುಭವಿಸಿದರು. ಪರ್ತ್‌ನಲ್ಲಿ ನಡೆದ ಪಂದ್ಯದ ಕೊನೆಯ ಎರಡು ಅವಧಿಗಳಲ್ಲಿ ಕಾಮೆಂಟರಿ ಮಾಡಲು ಹಿಂತಿರುಗಲಿಲ್ಲ.
Ind vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್ಗೆ ಕೊಹ್ಲಿ ಕೊಟ್ಟ ಉತ್ತರ ಇದು
"ನಾನು ಬಹುಶಃ ನಿನ್ನೆ ಬಹಳಷ್ಟು ಜನರನ್ನು ಹೆದರಿಸಿದ್ದೇನೆ. ನನಗೆ ಆರೋಗ್ಯದಲ್ಲಾದ ಕೊಂಚ ಏರುಪೇರಿನಿಂದಾಗಿ ಸಾಕಷ್ಟು ಆತಂಕವಾಗಿತ್ತು. ವೃತ್ತಿಜೀವನದ ಅವಧಿಯಲ್ಲಿ 168 ಟೆಸ್ಟ್ ಮತ್ತು 375 ಏಕದಿನ ಪಂದ್ಯಗಳನ್ನು ಆಡಿರುವ ಪಾಂಟಿಂಗ್, ಶನಿವಾರ ಕರ್ತವ್ಯಕ್ಕೆ ವಾಪಸ್ ಆಗಿರುವುದಾಗಿ ಹೇಳಿದ್ದಾರೆ.

ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಪಾಂಟಿಂಗ್ ಮಾತು
ನಾನು ನ ಬಾಕ್ಸ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ನನ್ನ ಎದೆಯಲ್ಲಿ ನಿಜವಾಗಿಯೂ ಚಿಕ್ಕದಾದ, ತೀಕ್ಷ್ಣವಾದ ನೋವುಗಳು ಕಾಣಿಸಿಕೊಂಡಿತು. ನಾನು ಅದನ್ನು ತೊಡೆದುಹಾಕಲು ಪ್ರಯತ್ನಿಸಿದೆ ಆದರೆ ಅದು ಸಾಧ್ಯವಾಗಲಿಲ್ಲ. ನಾನು ಸ್ಟಂಟ್ ಮೂಲಕ ಎದ್ದು ಹೊರಬಂದೆ, ಕಾಮೆಂಟರಿ ಬಾಕ್ಸ್‌ನ ಹಿಂಭಾಗಕ್ಕೆ ನಡೆದುಕೊಂಡು ಹೋದೆ ಮತ್ತು ಸ್ವಲ್ಪ ತಲೆತಿರುಗುವಿಕೆಯಿಂದ ಬೆಂಚ್ ಅನ್ನು ಹಿಡಿದುಕೊಂಡೆ," ಎಂದು ರಿಕಿ ಪಾಂಟಿಂಗ್ ಹೇಳಿದರು.
ಇದೇ ವೇಳೆ ಪಾಂಟಿಂಗ್ ಅವರು ತಮ್ಮ ಆಪ್ತ ಸ್ನೇಹಿತ ಜಸ್ಟಿನ್ ಲ್ಯಾಂಗರ್ ಅವರ ಬಳಿ ಕಾಮೆಂಟರಿ ಕರ್ತವ್ಯಗಳನ್ನು ಹಂಚಿಕೊಳ್ಳುತ್ತಿದ್ದರು. ಆಸ್ಟ್ರೇಲಿಯನ್ ಮಾಜಿ ತರಬೇತುದಾರ ಅವರನ್ನು ಆಸ್ಪತ್ರೆಗೆ ತೆರಳುವಂತೆ ಒತ್ತಾಯಿಸಿದರು.

ಶುಕ್ರವಾರ ಆಸ್ಪತ್ರೆಗೆ ರಿಕಿ ಪಾಂಟಿಂಗ್ ದಾಖಲು
ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 1ನೇ ಟೆಸ್ಟ್‌ನ 3ನೇ ದಿನದ ಸಮಯದಲ್ಲಿ ಪಾಂಟಿಂಗ್ ಚಾನೆಲ್ 7ಗಾಗಿ ಕಾಮೆಂಟ್ ಮಾಡುತ್ತಿದ್ದರು. ದಿ ಡೈಲಿ ಟೆಲಿಗ್ರಾಫ್ ಅನ್ನು ಉಲ್ಲೇಖಿಸಿ ಫಾಕ್ಸ್‌ಸ್ಪೋರ್ಟ್ಸ್‌ನಲ್ಲಿನ ವರದಿಯ ಪ್ರಕಾರ ಊಟದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನಲ್ಲಿನ ವರದಿಯ ಪ್ರಕಾರ, ಪಾಂಟಿಂಗ್ ಟೆಸ್ಟ್ ಪಂದ್ಯದ ಮೂರನೇ ದಿನದ ಸಮಯದಲ್ಲಿ ಅಸ್ವಸ್ಥರಾಗಿದ್ದರು. ಹೃದಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ತೆರಳಿದರು. "ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಇದರ ಬಗ್ಗೆ ಉಳಿದ ವಿವರಣೆಯನ್ನು ನೀಡಿಲ್ಲ," ಎಂದು ಸೆವೆನ್ ವಕ್ತಾರರು ಹೇಳಿದ್ದಾರೆ.

ಆಸೀಸ್ ಆಟಗಾರರನ್ನು ಕಾಡುವ ಹೃದಯ ಸಮಸ್ಯೆ
ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಈ ವರ್ಷ ಅತ್ಯಂತ ಕಷ್ಟಕರವಾಗಿದೆ. ಇದೇ ವರ್ಷದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಎರಡು ದಂತಕಥೆಗಳಾದ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ವಿಧಿವಶರಾಗಿದ್ದರು. ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್ ಡೀನ್ ಜೋನ್ಸ್ ಕೂಡ 2020ರ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅಲ್ಲದೆ, ವೆಸ್ಟರ್ನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಮತ್ತು ಇತ್ತೀಚೆಗೆ ನೆದರ್‌ಲ್ಯಾಂಡ್ಸ್ ಕೋಚ್, ರಯಾನ್ ಕ್ಯಾಂಪ್‌ಬೆಲ್ ಕೂಡ ಈ ವರ್ಷದ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಸಾವಿನ ಮನೆ ಸೇರಿದ್ದರು.

ಶ್ರೇಷ್ಠ ಕ್ರಿಕೆಟರ್ ಎನಿಸಿರುವ ರಿಕಿ ಪಾಂಟಿಂಗ್
ಆಸೀಸ್ ತಂಡದ ಪರವಾಗಿ 168 ಟೆಸ್ಟ್‌ಗಳಲ್ಲಿ ಆಡಿದ ರಿಕಿ ಪಾಂಟಿಂಗ್ 51.85 ಸರಾಸರಿಯಲ್ಲಿ 13.378 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 41 ಶತಕ ಮತ್ತು 62 ಅರ್ಧಶತಕಗಳನ್ನು ಗಳಿಸಿದರು. 375 ಏಕದಿನ ಪಂದ್ಯಗಳನ್ನು ಆಡಿದ ಅವರು 30 ಶತಕಗಳು ಮತ್ತು 82 ಅರ್ಧಶತಕಗಳೊಂದಿಗೆ 42.03 ಸರಾಸರಿಯಲ್ಲಿ 13,704 ರನ್ ಗಳಿಸಿದ್ದಾರೆ. ಅದೇ ರೀತಿ 17 T20 ಪಂದ್ಯಗಳಲ್ಲಿ 28.64 ರ ಸರಾಸರಿಯಲ್ಲಿ 401 ರನ್ ಗಳಿಸಿದ್ದು, ಅದರಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದರು.