ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕ್ರಿಕೆಟ್ ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದ

|
Google Oneindia Kannada News

ಮೆಲ್ಬೋರ್ನ್, ಜುಲೈ 24: ಭಾರತ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಕ್ರಿಕೆಟ್ ಅನ್ನು ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಭಾನುವಾರ ಘೋಷಿಸಿದೆ. ಭಾರತದಲ್ಲಿ ಇನ್ನುಮುಂದೆ ಆಸ್ಟ್ರೇಲಿಯಾದ ಕ್ರಿಕೆಟ್‌ ಡಿಸ್ನಿಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

2023-24ರಲ್ಲಿ ಪ್ರಾರಂಭವಾಗುವ ಒಪ್ಪಂದದ ಭಾಗವಾಗಿ, ಡಿಸ್ನಿ ಸ್ಟಾರ್ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಹಾಗೂ ಕೆಎಫ್‌ಸಿ ಬಿಗ್ ಬ್ಯಾಷ್ ಲೀಗ್ ಮತ್ತು ವೆಬರ್ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ ಅನ್ನು ಭಾರತದಲ್ಲಿ ಪ್ರಸಾರ ಮಾಡುತ್ತದೆ. 2017-18ರ ಋತುವಿನಿಂದ ಆಸ್ಟ್ರೇಲಿಯನ್ ಹಕ್ಕುಗಳನ್ನು ಸೋನಿ ಹೊಂದಿತ್ತು. ಈಗ ಡಿಸ್ನಿ ಸ್ಟಾರ್ ಹಕ್ಕುಗಳನ್ನು ಪಡೆದುಕೊಂಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಾರ, ಚಾನೆಲ್‌ನ ವ್ಯಾಪ್ತಿಯು ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಮತ್ತು ಭಾರತದಲ್ಲಿನ ಮಾರುಕಟ್ಟೆ ವಿಸ್ತರಣೆಗೆ ಸಹಾಯವಾಗಲಿದೆ.

ಒಲಿಂಪಿಕ್ಸ್ ಕನಸು, ವಿರಾಟ್‌ ಕೊಹ್ಲಿ ನೆರವು ಕೇಳಿದ ಟೇಕ್ವಾಂಡೊ ಪ್ಲೇಯರ್ ಒಲಿಂಪಿಕ್ಸ್ ಕನಸು, ವಿರಾಟ್‌ ಕೊಹ್ಲಿ ನೆರವು ಕೇಳಿದ ಟೇಕ್ವಾಂಡೊ ಪ್ಲೇಯರ್

"2023-24 ಸೀಸನ್‌ನಿಂದ ಡಿಸ್ನಿ ಸ್ಟಾರ್‌ನೊಂದಿಗೆ ಈ ಹೊಸ ಒಪ್ಪಂದವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಡಿಸ್ನಿ ಸ್ಟಾರ್ ಭಾರತದಲ್ಲಿ ಜನಪ್ರಿಯವಾಗಿದೆ. ಪ್ರತಿ ಬೇಸಿಗೆಯಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಅತ್ಯುತ್ತಮ ಕ್ರಿಕೆಟ್ ಪಂದ್ಯಾವಳಿಗಳನ್ನು ಪ್ರಸಾರ ಮಾಡಲು ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್‌ಹಾಕ್ಲಿ ಹೇಳಿದ್ದಾರೆ.

Cricket Australia Signed A Seven-year Deal With Disney Star To Broadcast Cricket Matches In India

"ಈ ಅಸೋಸಿಯೇಷನ್‌ನ ಪ್ರಮಾಣವು ಆಸ್ಟ್ರೇಲಿಯಾ ಮತ್ತು ಭಾರತೀಯ ತಂಡಗಳ ನಡುವೆ ಇರುವ ನಿರಂತರ ಪೈಪೋಟಿ ಮತ್ತು ಗೌರವ, ವುಮೆನ್ಸ್ ಬಿಗ್ ಬ್ಯಾಷ್ ಲೀಗ್ ಮತ್ತು ಬಿಗ್ ಬ್ಯಾಷ್ ಲೀಗ್‌ನ ಉತ್ಸಾಹ ಮತ್ತು ಜನಪ್ರಿಯತೆ ಮತ್ತು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್‌ನ ಉನ್ನತ ಗೌರವಕ್ಕೆ ಸಾಕ್ಷಿಯಾಗಿದೆ." ಎಂದು ಹೇಳಿದರು.

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿ ಯುಎಇಗೆ ಸ್ಥಳಾಂತರ: ಸೌರವ್ ಗಂಗೂಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿ ಯುಎಇಗೆ ಸ್ಥಳಾಂತರ: ಸೌರವ್ ಗಂಗೂಲಿ

ಡಿಸ್ನಿ ಸ್ಟಾರ್ ಇತ್ತೀಚೆಗೆ 2023-27 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಟಿವಿ ಪ್ರಸಾರ ಹಕ್ಕುಗಳನ್ನು ಗೆದ್ದಿದೆ.

ಒಪ್ಪಂದಕ್ಕೆ ರಿಷಬ್ ಪಂತ್ ಕಾರಣ!

ಕ್ರಿಕೆಟ್ ಆಸ್ಟ್ರೇಲಿಯಾ ಡಿಸ್ನಿ ಸ್ಟಾರ್‌ನೊಂದಿಗೆ 360 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಹಿಂದೆ ಭಾರತೀಯ ಕೀಪರ್-ಬ್ಯಾಟರ್ ರಿಷಬ್ ಪಂತ್ ಕಾರಣ ಎಂದು ವರದಿಯಾಗಿದೆ.

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ 2020-21 ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್ ರಿಷಬ್ ಪಂತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೇ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಡಿಸ್ನಿ ಸ್ಟಾರ್ ಜೊತೆ 360 ಮಿಲಿಯನ್ ಆಸ್ಟ್ರೇಲಿಯಾ ಡಾಲರ್ ಹಕ್ಕುಗಳ ಒಪ್ಪಂದವನ್ನು ಪಡೆದುಕೊಳ್ಳಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ವರದಿಗಳು ತಿಳಿಸಿದೆ.

Cricket Australia Signed A Seven-year Deal With Disney Star To Broadcast Cricket Matches In India

ಬಹು-ಮಿಲಿಯನ್ ಡಾಲರ್ ಏಳು ವರ್ಷಗಳ ಒಪ್ಪಂದವು ಕ್ರಿಕೆಟ್ ವ್ಯಾಪಾರ ಪಂಡಿತರನ್ನು ಆಶ್ಚರ್ಯಗೊಳಿಸಿದೆ. ಟೆಸ್ಟ್ ಕ್ರಿಕೆಟ್‌ಗೂ ಅಪಾರ ವೀಕ್ಷಕರು ಇದ್ದಾರೆ ಎನ್ನುವುದು ಆ ಪಂದ್ಯದಲ್ಲಿ ಸಾಬೀತಾಗಿದೆ ಎಂದು ಅದು ಹೇಳಿಕೊಂಡಿದೆ.

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

English summary
Cricket Australia on Sunday said it has signed a seven-year deal with Disney Star to broadcast the cricket matches in India. Disney Star will broadcast KFC Big Bash League and Weber Women's Big Bash League in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X