Commonwealth: ಪುಟ್ಟ ಮಗುವನ್ನು ಬಿಟ್ಟು ಬರುವುದು ಸುಲಭವಲ್ಲ, ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮಣ್ಣ ಭಾವುಕ ಮಾತು

Commonwealth Games 2026: ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಭಾರತದ ಸೀಮಾ ಕಲಿರಾಮಣ್ಣ ಕಂಚಿನ ಪದಕ ಗೆದ್ದಿದ್ದಾರೆ. ಅವರು 58.65 ಮೀಟರ್ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದು ಈ ಅದ್ಭುತ ಸಾಧನೆ ಮಾಡಿದ್ದಾರೆ.

ಆರು ಪ್ರಯತ್ನಗಳಲ್ಲಿ ಸೀಮಾ ಕೇವಲ ಎರಡು ವ್ಯಾಲಿಡ್‌ ಥ್ರೋಗಳನ್ನು ಹೊಂದಿದ್ದರು. ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ ಸೀಮಾ 57.32 ಮೀಟರ್ ಮತ್ತು 58.65 ಮೀಟರ್‌ ಎಸೆತದೊಂದಿಗೆ ತನ್ನ ಆಟ ಮುಗಿಸಿದರು. ಆದರೂ 58.65 ಮೀಟರ್ ದೂರದ ಎಸೆತಕ್ಕೆ ಕಂಚಿನ ಪದಕ ಪಡೆಯುವಲ್ಲಿ ಸಫಲರಾದರು. ಇದರಲ್ಲಿ ಜಮೈಕಾದ ಸಮಂತಾ ಹಾಲ್ ಚಿನ್ನದ ಪದಕ ಗೆದ್ದರೆ, ಕೆನಡಾದ ಜೂಲಿಯಾ ಟಂಕ್ಸ್ ಬೆಳ್ಳಿ ಗೆದ್ದಿದ್ದಾರೆ.

Commonwealth Games 2026 Seema Kaliraman Wins Bronze in Women s Discus Throw for India know details

ಸೀಮಾ ಕಲಿರಾಮಣ್ಣ ಯಾರು?

ಹರಿಯಾಣ ಮೂಲದ ಸೀಮಾ ಭಾರತದ ಅಗ್ರ ಡಿಸ್ಕಸ್ ಎಸೆತಗಾರರಲ್ಲಿ ಒಬ್ಬರು. ಕ್ರೀಡಾಪಟು ಆಗಿರುವುದರ ಜೊತೆಗೆ, ಭಿವಾನಿಯ ಚೌಧರಿ ಬನ್ಸಿ ಲಾಲ್ ವಿಶ್ವವಿದ್ಯಾಲಯದಲ್ಲಿ (CBLU) ದೈಹಿಕ ಶಿಕ್ಷಣದಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಅವರ ತಂದೆ ಭಾರತೀಯ ಸೇನೆಯಲ್ಲಿ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರ ಮತ್ತು ಜಾವೆಲಿನ್ ಎಸೆತಗಾರರಾಗಿದ್ದರು.

ಚಿಕ್ಕ ವಯಸ್ಸಿನಲ್ಲಿಯೇ ಸೀಮಾಗೂ ಅವರ ತಂದೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದರು. ಅವರ ಪತಿ ಸಹ ರಾಷ್ಟ್ರೀಯ ಮಟ್ಟದ ಡಿಸ್ಕಸ್ ಎಸೆತಗಾರ. ಸೀಮಾ ತನ್ನ ಪತಿ ಮೋನು ಕಲಿರಾಮಣ್ಣ ಎಂದೇ ಜನಪ್ರಿಯರಾಗಿರುವ ರವೀಂದರ್ ಕಲಿರಾಮಣ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮಗ ರುದ್ರನ ಜನನದ ನಂತರ ಸೀಮಾ ಅಥ್ಲೆಟಿಕ್ಸ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದರು.

ಸೀಮಾ ಕಲಿರಾಮಣ್ಣ ಅವರ ಸಾಧನೆ

11 ತಿಂಗಳ ನಂತರ ಮತ್ತೆ ಭರ್ಜರಿ ಕಂಬ್ಯಾಕ್‌ ಆಗಿರುವ ಸೀಮಾ ತರಬೇತಿ, ತಾಯ್ತನ ಮತ್ತು ಪಿಎಚ್‌ಡಿ ಅಧ್ಯಯನಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಅವರು 2025ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಂತರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 59.73 ಮೀಟರ್ ವೈಯಕ್ತಿಕ ಅತ್ಯುತ್ತಮ ಎಸೆತವನ್ನು ಪ್ರದರ್ಶಿಸಿ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.

ಸೀಮಾ ಯೂತ್ ಏಷ್ಯನ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2020ರಲ್ಲಿ ನಡೆದ ಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿಯೂ ಚಿನ್ನ ಮುಡಿಗೇರಿಸಿಕೊಂಡಿದ್ದರು.

ಈ ಕುರಿತು ಮಾತನಾಡಿದ ಸೀಮಾ ಅವರು, 'ಇದು ನನ್ನ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟ. ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದಿರುವುದು ತುಂಬಾ ಖುಷಿ ತಂದಿದೆ. ಸ್ಪರ್ಧೆಯ ಸಮಯದಲ್ಲಿ ನಾನು ಯಾವುದೇ ದೊಡ್ಡ ತೊಂದರೆಗಳನ್ನು ಎದುರಿಸಲಿಲ್ಲ. ಆದರೆ ಇಲ್ಲಿನ ಚಳಿ ಮಾತ್ರ ಸ್ವಲ್ಪ ಕಿರಿ ಕಿರಿ ಉಂಟು ಮಾಡಿತ್ತು. ಇದಕ್ಕಾಗಿ ಪದೇ ಪದೇ ವಾರ್ಮ್‌ ಅಪ್‌ ಮಾಡಿಕೊಳ್ಳಬೇಕಿತ್ತು,' ಎಂದು ಹೇಳಿದ್ದಾರೆ.

'ನನ್ನ ಪತಿ ಕೇವಲ ಎರಡು ದಿನಗಳ ಹಿಂದೆ ಬಂದರು. ನನ್ನ ಮಗ ಜೊತೆಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದ. ಆದರೆ ಇದು ತುಂಬಾ ಭಾವನಾತ್ಮಕ ಕ್ಷಣ. ನಾನಿರುವ ಸ್ಥಿತಿಯಲ್ಲಿ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಬರುವುದು ಸಾಧ್ಯವಿರಲಿಲ್ಲ. ಇದು ಬಹಳ ಕಷ್ಟ ಮತ್ತು ನೋವಿನಿಂದ ಕೂಡಿರುವ ಸ್ಥಿತಿ,' ಎಂದು ವಿವರಿಸಿದ್ಧಾರೆ. ಇನ್ನು ಎಎಫ್‌ಐ ನನಗೆ ಅಪಾರ ಬೆಂಬಲ ನೀಡಿದೆ.

ಎಸ್‌ಎಐ ಸಹ ನನ್ನ ಪಯಣದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ನನಗೆ ಅಗತ್ಯ ಇದ್ದಾಗ, ನನ್ನನ್ನು ಬೆಂಬಲಿಸಲು ನನ್ನ ಕುಟುಂಬ ಸದಾ ಜೊತೆಯಾಗಿತ್ತು. ನಾನು ಈ ಪದಕವನ್ನು ಪತಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಈ ಸಾಧನೆಯ ಹಿಂದಿನ ಎಲ್ಲಾ ಕಠಿಣ ಪರಿಶ್ರಮ ಮತ್ತು ತ್ಯಾಗ ಅವರ ನಿರಂತರ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ,' ಎಂದು ಸೀಮಾ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+