Maharaja Trophy: ಎಲ್‌ಆರ್‌ ಚೇತನ್‌ ದುಬಾರಿ ಆಟಗಾರ, ಸಮಿತ್‌ ದ್ರಾವಿಡ್‌ಗೂ ಅವಕಾಶ: ತಂಡಗಳ ಡಿಟೇಲ್ಸ್‌

ಬೆಂಗಳೂರು: ಬಹಳ ಕುತೂಹಲ ಮೂಡಿಸಿದ್ದ ಮಹರಾಜಾ ಟ್ರೋಫಿ ಹರಾಜು ಪ್ರಕ್ರಿಯೆಯಲ್ಲಿ ಯುವ ಬ್ಯಾಟರ್‌ ಎಲ್‌ಆರ್‌ ಚೇತನ್‌ ಸದ್ದು ಮಾಡಿದ್ದಾರೆ. ಪ್ರಸಕ್ತ ಹರಾಜಿನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಚೇತನ್‌ ಪಾತ್ರರಾಗಿದ್ದಾರೆ. ಇವರು 8.2 ಕೋಟಿಗೆ ಬೆಂಗಳೂರು ತಂಡ ಸೇರಿದ್ದಾರೆ.

240 ಆಟಗಾರರು ಹಾರಜಿನ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸುತ್ತಿದ್ದಂತೆ ಹಣದ ಹೊಳೆಯನ್ನು ಹರಿಸಲು ಮಾಲೀಕರು ಸಜ್ಜಾಗಿದ್ದರು. ಪರಿಣಾಮ ಸ್ಟಾರ್ ಆಟಗಾರರು ಭಾರೀ ಮೊತ್ತವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ.

Chethan LR Becomes Most Expensive Player at Shriram Capital Maharaja Trophy KSCA T20 Auction

ಸಮಿತ್‌ ಮೈಸೂರಿಗೆ

ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಜೆ ಸುಚಿತ್‌ ಮಾಲೀಕರ ಚಿತ್ತ ಕದ್ದಿದ್ದಾರೆ. ಅಲ್ಲದೆ 18 ವರ್ಷದ ಯುವ ಆಟಗಾರ ಟೀಮ್ ಇಂಡಿಯಾ ಮಾಜಿ ಕೋಚ್‌ ದ್ರಾವಿಡ್‌ ಪುತ್ರ ಸುಮಿತ್ ದ್ರಾವಿಡ್‌ ಸಹ 50 ಸಾವಿರ ರೂಪಾಯಿಗಳಿಗೆ ಮೈಸೂರು ತಂಡದ ಪಾಲಾಗಿದ್ದಾರೆ.

ಭಾರತ ಮತ್ತು ಐಪಿಎಲ್ ಆಟಗಾರರನ್ನು ಒಳಗೊಂಡಿರುವ ಎ ಪಟ್ಟಿಯಲ್ಲಿರುವ ಆಟಗಾರರನ್ನು ಕೊಳ್ಳಲು ಮಾಲೀಕರು ಹಣದ ಹೊಳೆ ಹರಿಸಿದರು. ಶ್ರೇಯಸ್ ಗೋಪಾಲ್ 7.6 ಲಕ್ಷ ರೂಗೆ ಮಂಗಳೂರು ಪಾಲಾದರು. ಮೈಸೂರು ವಾರಿಯರ್ಸ್ ಅನುಭವಿ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು 7.4 ಲಕ್ಷ ರೂ ನೀಡಿ ಖರೀದಿಸಿತು. ಜೆ ಸುಚಿತ್ 4.8 ಲಕ್ಷ ರೂ. ಮತ್ತು ಫಿಟ್ನೆಸ್‌ ಸಮಸ್ಯೆಯನ್ನು ಅನುಭವಿಸುತ್ತಿರುವ ಪ್ರಸಿದ್ಧ ಕೃಷ್ಣ 1 ಲಕ್ಷ ರೂಗೆ ಮಾರಾಟವಾದರು.

Chethan LR Becomes Most Expensive Player at Shriram Capital Maharaja Trophy KSCA T20 Auction

ಲವನೀತ್‌ಗೆ ಭಾರೀ ಮೊತ್ತ

ಲೆಗ್ ಸ್ಪಿನ್ನರ್ ಕೆಸಿ ಕರಿಯಪ್ಪ ಅವರನ್ನು ಹುಬ್ಬಳ್ಳಿ ಟೈಗರ್ಸ್ 4.2 ಲಕ್ಷಕ್ಕೆ ಮತ್ತು ಪ್ರವೀಣ್ ದುಬೆ 6.8 ಲಕ್ಷಕ್ಕೆ ಗುಲ್ಬರ್ಗಾ ಮಿಸ್ಟಿಕ್ಸ್ ಪಡೆದವು. ಇನ್ನೂ ಚೇತರಿಸಿಕೊಳ್ಳುತ್ತಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಶರತ್ ಬಿಆರ್ ಅವರನ್ನೂ ಗುಲ್ಬರ್ಗಾ ಮಿಸ್ಟಿಕ್ಸ್ 1 ಲಕ್ಷ ನೀಡಿ ಖರೀದಿಸಿತು. ಗುಲ್ಬರ್ಗಾ ಲವನೀತ್‌ ಸಿಸೋಡಿಯಾರನ್ನು 7.2 ಲಕ್ಷ ನೀಡಿತು.

ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್‌ ಆಗಸ್ಟ್‌ 15 ರಿಂದ ಆರಂಭವಾಗಲಿದೆ. ಈ ಟೂರ್ನಿಯನ್ನು ಸ್ಟಾರ್‌ ಸ್ಪೋರ್ಟ್‌ 2ದಲ್ಲಿ ವೀಕ್ಷಿಸಬಹುದು.

ಎಲ್ಲ ತಂಡಗಳ ಪಟ್ಟಿ

ಹುಬ್ಬಳ್ಳಿ ಟೈಗರ್ಸ್:

ಮನೀಶ್ ಪಾಂಡೆ, ಶ್ರೀಜಿತ್ ಕೆಎಲ್, ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್ ಎಲ್, ಕರಿಯಪ್ಪ ಕೆಸಿ, ಮೊಹಮ್ಮದ್ ತಾಹಾ, ತಿಪ್ಪಾ ರೆಡ್ಡಿ, ಕಾರ್ತಿಕೇಯ ಕೆಪಿ, ಕುಮಾರ್ ಎಲ್ಆರ್, ಆದರ್ಶ್ ಪ್ರಜ್ವಲ್, ಕೃತಿಕ್ ಕೃಷ್ಣ, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಶ್ರೀಶ ಎಸ್ ಅಕಾಹರ್, ದಮನ್ ದೇಪಹಾರ್, ಮಿತ್ರಕಾಂತ್ ಯಾದವ್, ನಿಶ್ಚಿತ್ ಪೈ, ರಿಷಿ ಬೋಪಣ್ಣ

ಮೈಸೂರು ವಾರಿಯರ್ಸ್:

ಕರುಣ್ ನಾಯರ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ಕಾರ್ತಿಕ್ ಎಸ್ ಯು, ಸುಚಿತ್ ಜೆ, ಗೌತಮ್ ಕೆ, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್

ಶಿವಮೊಗ್ಗ ಲಯನ್ಸ್:

ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೌಶಿಕ್ ವಿ, ಶಿವರಾಜ್ ಎಸ್, ಪ್ರದೀಪ್ ಟಿ, ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಅವಿನಾಶ್ ಡಿ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವ ಕರ್ಮ, ಆದಿತ್ಯ ಮಣಿ, ರೋಹಿತ್ ಕೆ. ನವೀನ್, ಶರತ್ ಎಚ್.ಎಸ್, ಮೋಹಿತ್ ಬಿ.ಎ

ಗುಲ್ಬರ್ಗ ಮಿಸ್ಟಿಕ್ಸ್:

ದೇವದತ್ತ್ ಪಡಿಕ್ಕಲ್, ವೈಶಾಕ್ ವಿಜಯ್ಕುಮಾರ್, ಸ್ಮರಣ್ ಆರ್, ಅನೀಶ್ ಕೆವಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಶರಣ್ ಗೌಡ್, ಯಶೋವರ್ಧನ್ ಪರಂತಪ್, ನಾಥನ್ ದ್ಮೆಲ್ಲೋ ಜೋಕಿಮ್, ಫೈಜಾನ್ ರಿಯಾಜ್, ರೈಟ್‌ಕಾಲ್, ರೈಟ್‌ಕಾಲ್ ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಜ್

ಬೆಂಗಳೂರು ಬ್ಲಾಸ್ಟರ್ಸ್:

ಶುಭಾಂಗ್ ಹೆಗ್ಡೆ, ಮಯಾಂಕ್ ಅಗರ್ವಾಲ್, ಮೊಹ್ಸಿನ್ ಖಾನ್, ಸೂರಜ್ ಅಹುಜಾ, ಅನಿರುಧಾ ಜೋಶಿ, ನವೀನ್ ಎಂಜಿ, ಪ್ರತೀಕ್ ಜೈನ್, ಚೇತನ್ ಎಲ್ಆರ್, ಮೇಲು ಕ್ರಾಂತಿ ಕುಮಾರ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯ್ಕ್, ಲವಿಶ್ ಕಶಾಲ್ ವರುಣ್ ಕುಮಾರ್ ಎಚ್.ಸಿ, ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ

ಮಂಗಳೂರು ಡ್ರಾಗನ್ಸ್:

ರೋಹನ್ ಪಾಟೀಲ್, ಪಾರಸ್ ಗುರ್ಬಕ್ಸ್ ಆರ್ಯ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಧೀರಜ್ ಜೆ ಗೌಡ, ದರ್ಶನ್ ಎಂಬಿ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಸಂಕಲ್ಪ್ ಎಸ್ಎಸ್, ಅಭಿಲಾಷ್ ರಾವ್, ನಿಶ್ಚಿತ್ ಶೆಟ್ಟಿ, ನಿಶ್ಚಿತ್ ಶೆಟ್ಟಿ ಗೌಡ, ಪ್ರಣವ್ ಭಾಟಿಯಾ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+