IND VS PAK: ಭಾರತ ಮತ್ತು ಪಾಕ್‌ ಪಂದ್ಯ ವೀಕ್ಷಣೆಗೆ ಉಚಿತ ಟಿಕೆಟ್‌ ಹಂಚಿಕೆ

Champions Trophy 2025: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಇಂದಿನಿಂದ (ಫೆಬ್ರವರಿ 19) ಕರಾಚಿಯಲ್ಲಿ ಆರಂಭವಾಗಿದೆ. ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಟ್‌ ಮುಖಾಮುಖಿಯಾಗಿವೆ. ಇನ್ನು ಫೆಬ್ರವರಿ 23ಕ್ಕೆ ಇಂಡಿಯಾ-ಪಾಕ್‌ ನಡುವೆ ನಡೆಯುವ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ದಿನದ ಪಂದ್ಯ ವೀಕ್ಷಣೆ ಮಾಡುವವರಿಗೆ ಭಾರತ ಮೂಲಕ ದುಬೈ ಉದ್ಯಮಿಯೊಬ್ಬರು ಉಚಿತ ಟಿಕೆಟ್‌ ಹಂಚಿಕೆ ಮಾಡುವುದಾಗಿದೆ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನ-ಇಂಡಿಯಾ ನಡುವೆ ಕ್ರಿಕೆಟ್ ಮ್ಯಾಚ್‌ ನಡೆಯುತ್ತದೆ ಎಂದರೆ ಈ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಲ್ಲಿರುತ್ತದೆ. ಇದೀಗ ಇಂದಿನಿಂದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯ ಆರಂಭವಾಗಿದ್ದು, ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ -ನ್ಯೂಜಿಲೆಂಡ್‌ ನಡುವೆ ಆರಂಭವಾಗಿದೆ. ಇನ್ನೂ ಫೆಬ್ರವರಿ 23ಕ್ಕೆ ಇಂಡಿಯಾ-ಪಾಕ್‌ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯ ವೀಕ್ಷಣೆಗಾಗಿ ಇಡೀ ಜಗತ್ತೇ ಕಾತರದಲ್ಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಜನವರಿ 20ಕ್ಕೆ ಬಾಂಗ್ಲಾ ದೇಶದ ವಿರುದ್ಧ ಸೆಣಸಾಡಲಿದೆ.

Champions Trophy 2025 Free Tickets Distribution for India vs Pakistan Match Viewing

ಅಚ್ಚರಿ ವಿಚಾರವೆಂದರೆ, ಈ ಎರಡು ತಂಡಗಳ ನಡುವೆ ನಡೆಯಲಿರುವ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾಯುತ್ತಿದ್ದು, ಈ ಪಂದ್ಯ ವೀಕ್ಷಣೆ ಮಾಡುವವರಿಗೆ ಉಚಿತ ಟಿಕೆಟ್‌ ಹಂಚಿಕೆಯನ್ನು ಭಾರತೀಯ ಮೂಲದ ಉದ್ಯಮಿಯೊಬ್ಬರು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಇದೀಗ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಎಷ್ಟು ಜನರಿಗೆ ಉಚಿತ, ಆ ಉದ್ಯಮಿ ಯಾರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

8 ತಂಡಗಳು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿವೆ. 7 ತಂಡಗಳು ತಮ್ಮ ಪಂದ್ಯಗಳನ್ನು ಪಾಕಿಸ್ತಾಣದಲ್ಲಿ ಆಡಲಿದ್ದಾರೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಈ ಪಂದ್ಯಗಳು ಕ್ರೀಡಾಭಿಮಾನಿಗಳ ಕುತೂಹಲವನ್ನೂ ಕೆರಳಿಸಿವೆ. ಟೀಂ ಇಂಡಿಯಾವು ಫೆಬ್ರವರಿ 20ರಂದು ದುಬೈನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಬೇಕಿದೆ. ಫೆಬ್ರವರಿ 23ಕ್ಕೆ ನಡೆಯುವ ಬಹುನಿರೀಕ್ಷಿತ ಭಾರತ-ಪಾಕ್‌ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳು ಅಲ್ಲದೆ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಇನ್ನು ಭಾರತೀಯ ಮೂಲದ ದುಬೈ ಉದ್ಯಮಿ ಡ್ಯಾನ್ಯೂಬ್ ಗ್ರೂಪ್‌ನ ಉಪಾಧ್ಯಕ್ಷ ಅನಿಸ್ ಸಜನ್ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಗಳ ಟಿಕೆಟ್‌ಗಳನ್ನು ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಉಚಿತವಾಗಿ ನೀಡಿದ್ದಾರೆ. ಇದರಿಂದ ಡ್ಯಾನ್ಯೂಬ್ ಗ್ರೂಪ್‌ನ ಉದ್ಯೋಗಿಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಭಾರತದ ಪಂದ್ಯಗಳನ್ನು ವೀಕ್ಷಣೆ ಮಾಡಲು ಸಹಾಯ ಆದಂತಾಗಲಿದೆ.

ಅದರಲ್ಲೂ ಟೀಂ ಇಂಡಿಯಾ ಹಾಗೂ ಪಾಕ್‌ ನಡುವೆ ನಡೆಯುವ ಪಂದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ ಎಲ್ಲಾ ತಂಡಗಳಿಗಿಂತಲೂ ಈ ಎರಡು ತಂಡಗಳ ನಡುವಿವ ಸೆಣಸಾಟವನ್ನು ನೋಡಲು ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದೀಹ ಯುಎಇಯಲ್ಲಿ 30,00,000 ಲಕ್ಷಕ್ಕೂ ಹೆಚ್ಚು ಭಾರತೀಯರು ಮತ್ತು ಸುಮಾರು 10,00,000 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಯರು ವಾಸ ಮಾಡುತ್ತಿದ್ದರೆ ಎನ್ನುವ ಮಾಹಿತಿ ಇದ್ದು, ಇವರೆಲ್ಲರೂ ಭಾರತ- ಪಾಕ್‌ ನಡುವಿನ ಪಂದ್ಯ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ದುಬೈನಲ್ಲಿ ನಡೆಯಲಿರುವ 4 ಪ್ರಮುಖ ಪಂದ್ಯಗಳ 60 ಟಿಕೆಟ್‌ಗಳನ್ನು ಡ್ಯಾನ್ಯೂಬ್ ಗ್ರೂಪ್‌ ಉದ್ಯಮಿ ಅನಿಸ್ ಸಜನ್ ಖರೀದಿ ಮಾಡಿದ್ದಾರೆ. ಫೆಬ್ರವರಿ 20ರಂದು ಬಾಂಗ್ಲಾದೇಶ, ಫೆ.23 ರಂದು ಪಾಕಿಸ್ತಾನ, ಮಾ.2 ರಂದು ನ್ಯೂಜಿಲೆಂಡ್ ಮತ್ತು ಮಾ. 4 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಿ ಸಂಸ್ಥೆಯ ಉದ್ಯೋಗಿಗಳಿಗೆ ವಿತರಣೆ ಮಾಡಿದೆ. ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿ ಉದ್ಯೋಗಿಗಳನ್ನು ಆಯ್ಕೆ ಮಾಡಿದೆ. ಅಲ್ಲದೆ, ವೀಕ್ಷಕರಿಗೆ ತಿಂಡಿ-ತಿನಿಸು ಮತ್ತು ನೀರು ಖರೀದಿ ಮಾಡಲು ಕೂಪನ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ಮುಗಿದ ಬಳಿಕ ಮನೆಗೆ ಹೋಗಲು ಮತ್ತು ಆಹಾರ ಪ್ಯಾಕೆಟ್‌ಗಳ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+