IPL 2026 Ban: 17 ವರ್ಷಗಳ ಬಳಿಕ ಆರ್‌ಸಿಬಿ ಟ್ರೋಫಿ ಗೆದ್ದ ಬೆನ್ನಲ್ಲೇ 2026ರಿಂದ ಐಪಿಎಲ್‌ ಬ್ಯಾನ್‌..

IPL 2026: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಲೀಗ್‌ಗಳಲ್ಲಿ ಐಪಿಎಲ್‌ ಕೂಡ ಒಂದಾಗಿದೆ. ಇದರಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್‌ ಟೀಂ ಅಂತಾ ಇದ್ರೆ ಅದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು. ಆದರೆ ಇದೀಗ ಇದೇ ತಂಡಕ್ಕೆ ಕಪ್ಪು ಚುಕ್ಕೆಯೊಂದು ಅಂಟಿಕೊಂಡಿದ್ದು, ಇದರಿಂದ ಲೀಗ್‌ ಬ್ಯಾನ್‌ ಆಗುವ ಭೀತಿ ಎದುರಾಗಿದೆ. ಏನದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ..

ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿ ತನ್ನದಾಗಿಸಿಕೊಂಡಿತು. ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಕೂಡ ಇದಾಗಿದ್ದು, ಜೂನ್‌ 3ರಂದು ಟ್ರೋಫಿ ಗೆದ್ದ ಬಳಿಕ ಬರೀ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವೇ ಈ ಗೆಲುವಿನ ಸಂಭ್ರಮಾಚರಣೆಯಲ್ಲಿ ಮುಳುಗಿಬಿಟ್ಟಿತು.

Bengaluru M Chinnaswamy Stadium stampede IPL Ban Likely from 2026

ಆದರೆ, ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಆಯೋಜನೆ ಮಾಡಿಕೊಂಡಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು. ಈ ದುರಂತ ಸಂಭ್ರಾಮಾಚರಣೆಯನ್ನೇ ಕಿತ್ತುಕೊಂಡುಬಿಟ್ಟಿತು. ಈ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿತು. ಅಲ್ಲದೆ, ಸಿಎಂ ರಾಜಕೀಯ ಕಾರ್ಯದರ್ಶಿಗೂ ಗೇಟ್‌ ಪಾಸ್‌ ನೀಡಲಾಯಿತು ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಕೆಎಸ್‌ಸಿಎ ವಿರುದ್ಧವೂ ಎಫ್‌ಐಆರ್ ಹಾಗೂ ವಿರಾಟ್‌ ಕೊಹ್ಲಿ ಮೇಲೂ ಕೇಸ್‌ ದಾಖಲಾಗಿದೆ.

ಇದರ ಬೆನ್ನಲ್ಲೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾನ್‌ ಮಾಡಿ ಎನ್ನುವ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ಇನ್ನೂ ಬಹುತೇಕ ಮಂದಿ ಇದಕ್ಕೆ ವಿರೋಧವನ್ನು ಕೂಡ ವ್ಯಕ್ತಪಡಿಸುತ್ತಲಿದ್ದಾರೆ. ಒಂದು ವೇಳೆ ಈ ತಂಡ ಇಲ್ಲ ಅಂದ್ರೆ ಐಪಿಎಲ್‌ ಬ್ಯಾನ್‌ ಆಗುವ ಸಾಧ್ಯತೆ ಹೆಚ್ಚಿದೆ. ಯಾಕೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಐಪಿಎಲ್‌ನಲ್ಲಿ ಇದುವರೆಗೂ ಐದೈದು ಟ್ರೋಫಿ ಗೆದ್ದಿರುವ ಚೆನ್ನೇ ಸೂಪರ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗಿಂತ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಾಂಡ್‌ ವ್ಯಾಲ್ಯೂ ಅನ್ನು ಮೀರಿಸಲು ಆಗಿಲ್ಲ. ಅಲ್ಲದೆ, ಅತೀ ಹೆಚ್ಚು ಅಭಿಮಾನಿಗಳನ್ನೂ ಸಹ ಹೊಂದಿರುವ ಟೀಂ ಆರ್‌ಸಿಬಿಯೇ ಆಗಿದೆ. ಆದ್ದರಿಂದ ಇದು ಬ್ಯಾನ್‌ ಆದರೆ ಐಪಿಎಲ್‌ ನಡೆಸೋದೇ ಕಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಾಹಿತಿ ಪ್ರಕಾರ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾನ್‌ ಮಾಡಿದ್ರೆ ಐಪಿಎಲ್‌ ವೀಕ್ಷಣೆ ಮಾಡುವವರ ಸಂಖ್ಯೆಯೂ ಕಡಿಮೆ ಆಗುತ್ತದೆ. ಇದರಿಂದ ಈ ಲೀಗ್‌ ವ್ಯಾಲ್ಯೂ ಅನ್ನು ಕೂಡ ಕಳೆದುಕೊಂಡು ಬೀದಿಗೆ ಬರುವುದಂತೂ ಖಚಿತ ಎಂದು ಬಹುತೇಕರು ಹೇಳುವ ಮಾತಾಗಿದೆ. ಹೀಗೆ ಆರ್‌ಸಿಬಿ ತಂಡ ಇದ್ದರೆ ಮಾತ್ರ ಐಪಿಎಲ್‌ ಎನ್ನುವಂತಾಗಿದೆ.

ಇನ್ನು ಬರೋಬ್ಬರಿ 17 ವರ್ಷಗಳ ಬಳಿಕ ಆರ್‌ಸಿಬಿ ತಂಡ ಮೊದಲ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಆದರೆ, ಗೆಲುವಿನ ನಂತರ ವಿಜಯೋತ್ಸವದ ವೇಳೆ ಆ‌ರ್‌ಸಿಬಿ ಫ್ರಾಂಚೈಸಿ ಅಧಿಕಾರಿಗಳು ಮತ್ತು ಕೆಲ ಅಭಿಮಾನಿಗಳು ಮಾಡಿದ ತರಾತುರಿ, ಅತಿರೇಕದ ವರ್ತನೆಗಳಿಂದಾಗಿ ಈ ಸಂಭ್ರಮ 18 ಗಂಟೆಗಳ ಕಾಲವೂ ಉಳಿಯಲಿಲ್ಲ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟರು. ಇದರೊಂದಿಗೆ ಸಂಭ್ರಮ ಸೂತಕವಾಗಿ ಬದಲಾಯಿತು. ಗೆಲುವಿನ ಪರೇಡ್ ಮತ್ತು ಉಚಿತ ಪಾಸ್ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಗೊಂದಲ ಸೃಷ್ಟಿಸಿತ್ತು. ಆದ್ದರಿಂದ ವಿಜಯೋತ್ಸವಕ್ಕೆ ನಿರೀಕ್ಷೆಗೂ ಮೀರಿ ಅಭಿಮಾನಿಗಳ ಆಗಮನಕ್ಕೆ ಕಾರಣವಾಯಿತು. ಮತ್ತೊಂದೆಡೆ ಸರ್ಕಾರದ ಪಾತ್ರವೂ ಕೂಡ ಇದೆ ಎಂದು ವಪಕ್ಷ ನಾಯಕರು ಆರೋಪಗಳನ್ನು ಮಾಡುತ್ತಿದ್ದಾರೆ.

ದುರಂತ ಸಂಬಂಧ ಬೆಂಗಳೂರು ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಯನ್ನು ಬಂಧಿಸಿದ್ದಾರೆ. ಇದು ಈಗ ಆರ್‌ಸಿಬಿ ತಂಡ ಐಪಿಎಲ್‌ನಿಂದ ನಿಷೇಧಕ್ಕೊಳಗಾಗುವ ಭೀತಿಯನ್ನ ಸೃಷ್ಟಿಸಿದೆ. ಒಂದು ವೇಳೆ ಈ ತಂಡ ಬ್ಯಾನ್‌ ಆದರೆ ಇಡೀ ಐಪಿಎಲ್‌ಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+